ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶರಣರ, ಮಹಾತ್ಮರ ಪುರಾಣ ಪ್ರವಚನಗಳು ಮನುಷ್ಯನ ಜೀವನ ಪಾವನಗೊಳ್ಳಲು ಕಾರಣವಾದ ಭಕ್ತಿಮಾರ್ಗಗಳೇನಿಸಿವೆ ಎಂದು ಬಸವನ ಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶಶ್ರೀಗಳು ಹೇಳಿದರು
ಪಟ್ಟಣದ ಶ್ರೀವೀರಭದ್ರೇಶ್ವರ ಕಾರ್ತಿಕೋತ್ಸವ ಸಮಿತಿಯಿಂದ ಸೋಮವಾರ ಜರುಗಿದ ಧರ್ಮಸಭೆ ಹಾಗೂ ಮಹಾದಾಸೋಹಿ ಕಲಬುರ್ಗಿ ಶ್ರೀಶರಣ ಬಸವೇಶ್ವರ ಮಹಾಪುರಾಣ ಸಂಪನ್ನಗೊಳಿಸಿ ಮಾತನಾಡಿದರು, ಶರಣ ಮಡಿವಾಳ ಮಾಚಿದೇವರ ತವರೂರಾದ ದೇವರಹಿಪ್ಪರಗಿಯಲ್ಲಿ ಇಂದಿಗೂ ಪುರಾಣ, ಪ್ರವಚನ ಸಾಂಗವಾಗಿ ಜರುಗುತ್ತಿರುವುದು ಭಕ್ತಿಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಶರಣರ, ಮಹಾತ್ಮರ ಪವಾಡಪುರುಷರ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅನುಸರಿಸಿ ಕ್ಷೇತ್ರದ ಘನತೆ ಹೆಚ್ಚಿಸಬೇಕೆಂದು ಹೇಳಿದರು.
ಆಲಮೇಲ ಹಿರೇಮಠದ ಚಂದ್ರಶೇಖರಶ್ರೀ ಸದಯ್ಯನಮಠದ ವೀರಗಂಗಾಧರಶ್ರೀ ಆಶೀರ್ವಚನ ನೀಡಿ,ಇಲ್ಲಿನ ಭಕ್ತ ಜನರಲ್ಲಿ ಹಣದ ಶ್ರೀಮಂತಿಕೆಗಿಂತ ಭಕ್ತಿ, ಆಧ್ಯಾತ್ಮಿಕ ಚಿಂತನೆಯ ಶ್ರೀಮಂತಿಕೆ ತುಂಬಿತುಳುಕುತ್ತಿರುವದು ಹರ್ಷದಾಯಕವೆಂದು ಆಶೀರ್ವದಿಸಿದರು.
ಗುಳೇದಗುಡ್ಡದ ರೇವಣಸಿದ್ಧೇಶ್ವರಶ್ರೀ ಹಾಗೂ ಆವೋಗೇಶ್ವರ ತಪೋಧಾಮದಶ್ರೀ ೧೨ ವರ್ಷದಲ್ಲಿ ಸಾಂಗವಾಗಿ ಜರುಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾತನಾಡಿದರು. ಗಾಯಕ ಶರಣಕುಮಾರ ಯಾಳಗಿ ಹಾಗೂ ತಬಲಾವಾದಕ ನಾಗರಾಜ ಹುಣಸಿಗಿಡದ ಸಂಗೀತ ಕಾರ್ಯಕ್ರಮ ನೀಡಿದರು.
ಇದೇ ಸಂದರ್ಭದಲ್ಲಿ ಕಲ್ಯಾಣೋತ್ಸವ ಹಾಗೂ ಕಾರ್ತಿಕೋತ್ಸವದ ನಿಮಿತ್ತ ಮಹಿಳೆಯರು ಮತ್ತು ಮಕ್ಕಳು ಮೊಂಬತ್ತಿ ಬೆಳಗಿಸಿದರು. ನಂತರ ೧೭ ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ ಮಾಡಿದ ಮಹನೀಯರು ಹಾಗೂ ಸಮಿತಿಯ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು. ತದನಂತರ ಮಹಾಪ್ರಸಾದ ಜರುಗಿತು.
ಕಾರ್ತಿಕೋತ್ಸವ ಸಮಿತಿ ಅಧ್ಯಕ್ಷ ಸಿ.ಕೆ.ಕುದರಿ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಪ್ರಭುದೇವ ಹಿರೇಮಠ, ಪಂಚಾಕ್ಷರಿ ಮಿಂಚನಾಳ, ಮಹಾರುದ್ರ ಕಕ್ಕಳಮೇಲಿ, ಯಲಗೂರೇಶ ದೇವೂರ, ದಾನು ಯರನಾಳ, ಸಂಗನಗೌಡ ಪಾಟೀಲ, ಶ್ರೀಶೈಲ ದೇಸಾಯಿ, ಜಗದೇವಪ್ಪ ಬಿರಾದಾರ, ಮಡಿವಾಳಪ್ಪ ಮಣೂರ, ರಮೇಶ ಮಶಾನವರ, ನಿಂಬೆಣ್ಣಪ್ಪ ದುತ್ತರಗಾಂವಿ, ಆನಂದ ಜಡಿಮಠ, ರವಿ ಯಾಳಗಿ, ವಿನೋದ ನಾಶಿಮಠ, ದಿನೇಶ ಪಾಟೀಲ. ಚನ್ನಯ್ಯ ಮಲ್ಲಿಕಾರ್ಜುನಮಠ, ಸೋಮು ಹಿರೇಮಠ, ವೀರೇಶ ಕುದರಿ, ಶ್ರೀಶೈಲ ಮಲ್ಲಿಕಾರ್ಜುನಮಠ, ಶಿವಯ್ಯ ವಸ್ತçದ, ಕಾಶೀಪತಿ ಕುದರಿ, ವೀರಣ್ಣ ಮಣೂರ ಹಾಗೂ ಮಹಿಳೆಯರು, ಮಕ್ಕಳು ಇದ್ದರು.

