Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಅವಿನಾಶ ತಳಕೇರಿ ದಕ್ಷಿಣ ವಲಯ ೧೮ ವರ್ಷದೊಳಗಿನ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿ ಅವಿನಾಶ ಆಂಧ್ರಪ್ರದೇಶದ ಗುಂಟೂರು ನಾಗಾರ್ಜುನ ಕ್ರೀಡಾಂಗಣದಲ್ಲಿ ಜರುಗಿದ ಏಳು ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡ ದಕ್ಷಿಣ ವಲಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಭಾಗವಹಿಸಿ ೫೦.೪೧ ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದಿದ್ದಾನೆ.ಸಾಧಕ ವಿದ್ಯಾರ್ಥಿ ಅವಿನಾಶ ಇವನು ಪಡಗಾನೂರ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಲಿಕಾರ್ಜುನ ತಳಕೇರಿ ಇವರ ಪುತ್ರನಾಗಿದ್ದು, ವಿದ್ಯಾರ್ಥಿಯ ಅತ್ಯುತ್ತಮ ಸಾಧನೆಗೆ ತಾಲ್ಲೂಕಿನ ಶಿಕ್ಷಕರ ಬಳಗ ಹರ್ಷ ವ್ಯಕ್ತಪಡಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಅಕ್ಟೋಬರ್ 21 ರಂದು ಸೋಮವಾರ ಬಬಲೇಶ್ವರ ತಾಲೂಕಿನ ನಾನಾ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಸೋಮವಾರ ಬೆ. 9 ಗಂಟೆಗೆ ಬಬಲೇಶ್ವರ ಪಟ್ಟಣದ ಈದ್ಗಾ ಮೈದಾನದ ಎದುರಿಗೆ ತಿಗಣಿ ಬಿದರಿ ರಸ್ತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರೂ. 32 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.ನಂತರ ಬೆಳಿಗ್ಗೆ 10 ಗಂಟೆಗೆ ಹೊಕ್ಕುಂಡಿ ಗ್ರಾಮದ ಅಗಸಿ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರೂ. 25 ಲಕ್ಷ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಕಾಮಗಾರಿಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.ನಂತರ ಬೆಳಿಗ್ಗೆ 11 ಗಂಟೆಗೆ ನಿಡೋಣಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಮತ್ತು ಪಿ.ಆರ್.ಇ.ಡಿ ವತಿಯಿಂದ ರೂ. 100 ಲಕ್ಷ…
ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ವಕ್ಫ್ ಆಸ್ತಿ ಎಂದು ನೋಟಿಸು ಬಂದಿರುವ ಹಿನ್ನೆಲೆಯಲ್ಲಿ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ರವಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ತಿಕೋಟಾ ತಾಲೂಕಿನ ಹೊನವಾಡ ಕೆಲವು ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡುತ್ತಾರೆ ಎಂಬ ಆತಂಕದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ಹೊನವಾಡದ ಕೆಲವು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಅನಗತ್ಯವಾಗಿ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲಾಗುವುದಿಲ್ಲ. ಯಾವುದೇ ನೋಟಿಸ್ ಪಡೆದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಈಗಾಗಲೆ ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ. ಮುಂದಿನವಾರ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಿ, ಕೂಲಂಕುಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಜನರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದರು.ಹೊನವಾಡದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೈದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಆಯುರ್ವೇದ ನಗರದ ಬಿ.ಎಲ್.ಡಿ ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ದೇಹದಾನ ಮಾಡಲಾಗಿದೆ.ದೇಹದಾನ ಜಾಗೃತಿಗಾಗಿ ತಂದೆಯ ಮೃತ ದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಠಿಸಿದ ಬೆಳಗಾವಿ ಕೆ.ಎಲ್.ಇ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಕೆ. ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ರಾಮಣ್ಣವರ ಅವರು ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟಿನ ಟ್ರಸ್ಟ್ ವತಿಯಿಂದ ಅ.16 ರಂದು ಬುಧವಾರ ಈ ದೇಹದಾನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಎವಿಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕೆ ತಮ್ಮ ಟ್ರಸ್ಟ ಮೂಲಕ ಒಂದು ಮೃತ ಶರೀರವನ್ನು ಈ ದೇಹದಾನ ಮಾಡಲಾಗಿದೆ ಎೞದು ಹೇಳಿದರು. ಅಲ್ಲದೇ, ದೇಹದಾನ, ಅಂಗಾಂಗ ದಾನ, ರಕ್ತದಾನ ಹಾಗೂ ಅಂಗಾಂಗ ಕಸಿಯ ಕುರಿತು ಬಿಎಎಂಎಸ್ ವಿದ್ಯಾರ್ಥಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು.ಶರಣ ವಿಚಾರ…
ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರದಲ್ಲಿ “ಡಿಜಿಟಲ್ ಯುಗದಲ್ಲಿ ಮಾರ್ಕೆಟಿಂಗ್ ತಂತ್ರಗಳು” ವಿಷಯ ಕುರಿತು ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಂಪ್ರದಾಯಿಕವಾಗಿ ತಯಾರಿಸುವ ಆಭರಣಗಳನ್ನು ಹೇಗೆ ಆಧುನಿಕರಣಕ್ಕೆ ಸಂಬಂಧಿಸಿದಂತೆ ಮತ್ತು ಬೇಡಿಕೆಗಳ ಅನುಗುಣವಾಗಿ ಹೇಗೆ ತಯಾರಿಸಬೇಕು ಎಂಬುದನ್ನು ತಿಳಿಯಬೇಕು. ಇಂದಿನ ದಿನಗಳಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ತಯಾರಿಸಿದ ಆಭರಣಗಳು ನೇರವಾಗಿ ಮಾರುಕಟ್ಟೆಗೆ ಹೋಗಬೇಕೆಂದರೆ ಮತ್ತು ಅದರ ನೇರ ಲಾಭ ಪಡೆಯಬೇಕೆಂದರೆ ಆನ್‌ಲೈನ್ ಮಾರ್ಕೆಟಿಂಗ್‌ನ್ನು ತಿಳಿದಿರಬೇಕು ಎಂದು ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡಾ.ಚಂದ್ರಶೇಖರ್ ಮಠಪತಿ ಹೇಳಿದರು.ರವಿವಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ಗ್ರಾಮ ಪಂಚಾಯತ್, ಬರಟಗಿ ಸಹಕಾರದೊಂದಿಗೆ “೧೦ ದಿನಗಳ ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರ” ದಲ್ಲಿ ಅವರು “ಡಿಜಿಟಲ್ ಯುಗದಲ್ಲಿ ಮಾರ್ಕೆಟಿಂಗ್ ತಂತ್ರಗಳು” ಎಂಬ ವಿಷಯ ಕುರಿತು ಮಾತನಾಡಿದರು.ಫೇಸ್‌ಬುಕ್, ವಾಟ್ಸ್ಪ್, ಅಮೇಜಾನ್, ಫ್ಲಿಪ್‌ಕಾರ್ಟ್ ಮುಂತಾದವುಗಳಲ್ಲಿ ಹೇಗೆ ಸೇಲ್‌ರ್ ಅಕೌಂಟ್ ಒಪನ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ ಅವರು, ಪ್ರಾದೆಶೀಕವಾಗಿ ಮಾರುಕಟ್ಟೆ ಮಳಿಗೆಗಳಿಗೆ ಬೇಟಿ…
Udayarashmi kannada daily newspaper
ಸೂರ್ಯ ಫೌಂಡೇಶನ್ ನಿಂದ ಮಹತ್ತರ ಹೆಜ್ಜೆ | ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಯಶಸ್ವಿ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ನಿರುದ್ಯೋಗ ಕ್ಷೇತ್ರದಲ್ಲಿ ಸುಧಾರಣೆಗೆ ಅಗಾಧ ಅವಕಾಶವಿದ್ದು, ನಾಡಿನ ನಿರುದ್ಯೋಗಿ ಯುವಕ,ಯುವತಿಯರಿಗೆ ಮತ್ತು ಪದವೀಧರರಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸಿ, ಕುಟುಂಬದ ಆರ್ಥಿಕತೆಯನ್ನು ಬಲಪಡಿಸುವದೇ ನಮ್ಮ ಸೂರ್ಯ ಫೌಂಡೇಶನ್ ಮುಖ್ಯ ಗುರಿಯಾಗಿದೆ ಎಂದು ಸೂರ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸೋಮೇಶ್ ನವೋದಯ ಹೇಳಿದರು.ಅವರು ನಗರದ ಹೆಸರಘಟ್ಟದ ಹುರುಳಿ ಚಿಕ್ಕನಹಳ್ಳಿಯಲ್ಲಿರುವ ಇಂಡೋಗ್ಲೋಬ್ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ, ಇಂಡೋಗ್ಲೋಬ್ ಇನ್ ಸ್ಟಿಟ್ಯೂಷನ್ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಸಹಯೋಗದಲ್ಲಿ ಜರುಗಿದ ‘ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ’ದ ಎರಡನೇ ದಿನದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸೂರ್ಯ ಫೌಂಡೇಶನ್ ಮೂಲಕ ನಿರುದ್ಯೋಗಿ ಯುವಕರಿಗೆ ಅವರ ಇಚ್ಚೆಯನುಸಾರ ಉದ್ಯೋಗಕ್ಕೆ ಸಂಬಂಧಿತ ಕೌಶಲ್ಯಗಳು ಮತ್ತು ತರಬೇತಿಯನ್ನು ನೀಡಿ, ಸ್ವಯಂ ಪ್ರೇರಿತರಾಗಿ ಉದ್ಯೋಗದಲ್ಲಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರ ಬಡಾವಣೆಯಲ್ಲಿ ತೆರವುಗೊಳಿಸಲಾದ ಶೆಡ್ ನ ನೊಂದ ದಲಿತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ನಗರದ ಎಸ್‌ಸಿಎಸ್‌ಟಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳ ಮೂಲಕ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.ತೆರವು ಜಾಗೆಯಿಂದ ಶುರುವಾದ ಪ್ರತಿಭಟನೆ ಪಟ್ಟಣದ ತಂಗಡಗಿ ಮುಖ್ಯ ರಸ್ತೆ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿಎಸ್‌ಎಸ್ ಮುಖಂಡ ಹರೀಶ ನಾಟೆಕಾರ ಮಾತನಾಡಿ, ದುಡಿದು ತಿನ್ನುವ ನಮ್ಮ ಜನರ ಮನೆಗಳನ್ನು ನೆಲಸಮ ಮಾಡಲಾಗಿದೆ ಈ ಘಟನೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ನಿವಾಸಿಗಳ ಬಳಿ ಕೊಳಚೆ ಮಂಡಳಿ ನೀಡಿದ ಹಕ್ಕುಪತ್ರ, ನ್ಯಾಯಾಲಯದ ಸ್ಟೇ ಪ್ರತಿ ಇದ್ದರೂ ಕೂಡ ಯಾವುದನ್ನೂ ಲೆಕ್ಕಿಸಿಲ್ಲ. ಹುಡ್ಕೋ ಗೇಟ್ ಬಳಿ ಇರುವ ಬೆಂಗಳೂರು ಬೇಕರಿ ಕಿತ್ತದೇ ನಮ್ಮವರ ಮನೆಗಳನ್ನು ಕಿತ್ತಿದ ಇವರ ನಡವಳಿಕೆ…
ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಕೆ | ಕಾಂಗ್ರೆಸ್ ನಗರಸಭಾ ಸದಸ್ಯ ಪರಶುರಾಮ ಹೊಸಮನಿ ದೂರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ನಿಂದಿಸಿದ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಕಾಂಗ್ರೆಸ್ ನಗರಸಭಾ ಸದಸ್ಯ ಪರಶುರಾಮ ಹೊಸಮನಿ ಅವರ ದೂರಿನ ಮೇರೆಗೆ ಶುಕ್ರವಾರ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 15 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಅವರು ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹೊಸಮನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.ಅವರ ದೂರಿನ ಆಧಾರದ ಮೇಲೆ, ಯತ್ನಾಳ್ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಶಾಂತಿ ಕದಡುವ ಉದ್ದೇಶಪೂರ್ವಕ ಅವಮಾನ ಮತ್ತು ಸುಳ್ಳು ಮತ್ತು ತಪ್ಪು ಮಾಹಿತಿ ಹರಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಶಾಂತಿ ಸೌಹಾರ್ಧವನ್ನು ಕೆಡಿಸುವ ದುರುದ್ದೇಶದಿಂದ ಸಾರ್ವಜನಿಕವಾಗಿ ಇತರೆ ಧರ್ಮದವರನ್ನು ಹೀಯಾಳಿಸಿ,…
ಸಿಎಂ ಸಿದ್ದರಾಮಯ್ಯ ರಕ್ಷಿಸಲು ಹುನ್ನಾರ | ಸಿಎಂ ರಾಜೀನಾಮೆಗೆ ಆಗ್ರಹ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಸುಟ್ಟು ಹಾಕಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮೈಸೂರಿಗೆ ಹೋಗಿದ್ದರು. 1997ರ ನಂತರದ ಎಲ್ಲಾ ಕಡತಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದರು. ಆ ಕಡತಗಳು ಎಲ್ಲಿ ಹೋದವು? ನಿಮ್ಮ ರಕ್ಷಣೆಗಾಗಿ ಮುಡಾದ ಎಲ್ಲಾ ಕಡತಗಳು ಸಚಿವ ಸುರೇಶ್ ಒಯ್ದು ಸುಟ್ಟು ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಾರೆ.ಇದೇ ವೇಳೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲದೆ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಕೇವಲ ಸಿದ್ದರಾಮಯ್ಯನವರ ಬಾಮೈದ ಹಾಗೂ ಜಮೀನು…
