ಉದಯರಶ್ಮಿ ದಿನಪತ್ರಿಕೆ
ಚಡಚಣ: ಎಂ.ಇ.ಎಸ ಶಿಕ್ಷಣ ಸಂಸ್ಥೆ ಮತ್ತು ಚಡಚಣ ಪೋಲಿಸ ಠಾಣೆಯ ಸಂಯುಕ್ತ ಆಶ್ರಯದಲ್ಲಿನಗರದ ಎಂ.ಇ.ಎಸ್ ಶಾಲೆಯಲ್ಲಿ ಶುಕ್ರವಾರ ಅಪರಾಧ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಚಡಚಣ ಠಾಣೆಯ ಪೋಲಿಸ ಅಪರಾಧ ವಿಭಾಗದ ಪೋಲಿಸ ಸಬ್ ಇನ್‌ಸ್ಪೆಕ್ಟರ್ ಅಪನಾಯಕ ರವರು ಮಾತನಾಡಿ, ‘ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ’.
ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಎಸ್ಐ ಶಿವಪುರ ಮತ್ತು ಪೋಲಿಸ ಸಿಬ್ಬಂದಿಯಾದ ವಿಜಯಕುಮಾರ ಬನಸೋಡೆ, ಸಿದ್ದು ಕಲ್ಯಾಣಶೆಟ್ಟಿ, ಹಾಗೂ ಎಂ.ಇ.ಎಸ್ ಶಾಲೆಯ ಮುಖ್ಯ ಗುರುಮಾತೆ ಜಿ.ಡಿ. ಗಚ್ಚಿನಕಟ್ಟಿ, ಎಂ.ಎಸ.ಬಿರಾದಾರ, ಕವಿತಾ ಮೇತ್ರಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ ಸಿ ಗಚ್ಚಿನಕಟ್ಟಿ , ಎಂ.ಎಸ್.ನಿವರಗಿ ಇದ್ದರು.