ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿರುವ ಐತಿಹಾಸಿಕ ಗೋಲಗುಮ್ಮಟ ಸ್ಮಾರಕಕ್ಕೆ M/s.Renew Private Limitedಸಂಸ್ಥೆ ರವರು ಸಿ.ಎಸ್.ಆರ್ (ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ) ಅನುದಾನದಡಿಯಲ್ಲಿ ‘ಗೋಳಗುಮ್ಮಟ ಸ್ಮಾರಕಕ್ಕೆ ಸೋಲಾರ ವಿದ್ಯುತ ದೀಪಾಲಂಕಾರ” ಅಳವಡಿಸಲಾಗಿರುತ್ತದೆ.
ಡಿ.೨೧ರಂದು ಸಂಜೆ ೬ ಗಂಟೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಗೋಲಗುಮ್ಮಟಕ್ಕೆ ಸೋಲಾರ ವಿದ್ಯುತ್ ದೀಪಾಲಂಕಾರಕ್ಕೆ ಉದ್ಘಾಟನೆ ನೆರವೇರಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.