ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಉಪ ಕೇಂದ್ರಗಳಾದ ೧೧೦/೧೧ಕೆವ್ಹಿ ನಿಡಗುಂದಿ ಹಾಗೂ ಮುಕರ್ತಿಹಾಳ ೧೧೦ಕೆವ್ಹಿ, ೩೩ಕೆವ್ಹಿ ಮತ್ತು ೧೧ ಕೆವ್ಹಿ ಬೇಗಳ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ೧೧೦/೧೧ಕೆವ್ಹಿ ನಿಡಗುಂದಿ ಹಾಗೂ ಮುಖರ್ತಿಹಾಳ ಉಪಕೇಂದ್ರದಿಂದ ಹೊರಹೋಗುವ ಎಲ್ಲ ೧೧೦ಕೆವ್ಹಿ, ೩೩ಕೆವ್ಹಿ ಹಾಗೂ ೧೧ ಕೆವ್ಹಿ ಮಾರ್ಗಗಳಲ್ಲಿ ಡಿ.೨೧ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಉಪಕೇಂದ್ರದಿಮದ ಹೊರಹೋಗುವ ಎಲ್ಲ ೧೧ಕೆವ್ಹಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.