Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಷ್ಟ್ರೀಯ ಗ್ರಾಹಕರ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿದ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಗ್ರಾಹಕರಿಗೆ ತಮ್ಮ ಹಕ್ಕುಗಳ ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸೇವಾ ಸಮಿತಿಯ ವತಿಯಿಂದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯಗಳು ಹಾಗೂ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಈ ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮಾನವ ಹಕ್ಕುಗಳನ್ನು ಘೋಷಿಸಲಾಯಿತು.…
ಇಂದು ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ (೧೯೨೪ ಡಿಸೆಂಬರ್ ೨೬ – ೨೭) ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಕುರಿತ ವಿಶೇಷ ಲೇಖನ ಲೇಖನ- ಡಾ.ಪೂರ್ಣಿಮಾ ಧಾಮಣ್ಣವರಕನ್ನಡ ಅತಿಥಿ ಉಪನ್ಯಾಸಕರುರಾಣಿ ಚನ್ನಮ್ಮ ವಿಶ್ವವಿದ್ಯಾಲಯಪಿ.ಜಿ ಸೆಂಟರ್, ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ೩೯ನೇ ಅಧಿವೇಶನಕ್ಕೆ ಸಾಕ್ಷಿಯಾದ ನೆಲ ಬೆಳಗಾವಿ. ೧೯೨೪ ರಲ್ಲಿ ನಡೆದ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಮಹಾತ್ಮಾ ಗಾಂಧೀಜಿಯವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವವಹಿಸಿ ೧೦೦ ವರ್ಷಗಳಾಗಿರುವ ಶುಭಗಳಿಗೆ ಇವತ್ತು ನಮ್ಮದಾಗಿದೆ.ಬೆಳಗಾವಿಯು ಪುರಾತನವಾದ, ಸಾಂಸ್ಕೃತಿಕವಾಗಿ ವೈಭವಯುತವಾದ ಹಾಗೂ ಐತಿಹಾಸಿಕ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಈ ನಗರ ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಶೈಕ್ಷಣಿಕವಾಗಿ, ರಾಜಕೀಯವಾಗಿ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅದೇ ರೀತಿ ಐತಿಹಾಸಿಕವಾಗಿ ಗುರುತಿಸುವುದಾದರೆ ೧೯೨೪ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಒಂದೇ ಘಟನೆ ಸಾಕು ಇಡೀ ಪ್ರಪಂಚ ಹಿಂದೆ ತಿರುಗಿ…
ಅಭಿಮತ – ವೀರೇಶ ಧೂಪದಮಠ ಉದಯರಶ್ಮಿ ದಿನಪತ್ರಿಕೆ ಜನಪ್ರತಿನಿಧಿ ಎನಿಸಿಕೊಂಡಿರುವ ರಾಜಕಾರಣಿಗಳು ಜನರ ಸೇವೆಯನ್ನು ಮಾಡಲು ರಾಜಕೀಯಕ್ಕೆ ಬಂದವರು. ಜನರ ಕಷ್ಟ, ಸಮಸ್ಯೆಗಳನ್ನು ಕಾನೂನಿನ ಪ್ರಕಾರ ಸರಿಪಡಿಸಲು ಯಾವ ರೀತಿ ಸಾಧ್ಯತೆ ಇದೆ, ಅದನ್ನು ಜಾರಿಗೆ ತರಲು ರಾಜಕಾರಣಿಗಳು ಪ್ರಯತ್ನಿಸುತ್ತಾರೆ. ಆದರೆ ಇತ್ತೀಚಿನ ರಾಜಕೀಯದಲ್ಲಿ ಜನಪ್ರತಿನಿಧಿಗಳ ಬೆಳವಣಿಗೆ ಜನರ ಸಮಸ್ಯೆ, ರಾಜ್ಯದ ಸಮಸ್ಯೆಗಳನ್ನೆಲ್ಲ ಬದಿಗೊತ್ತಿ, ಪರಸ್ಪರ ರಾಜಕೀಯ ನಾಯಕರ ಕಿತ್ತಾಟ. ಆರೋಪ ಪ್ರತ್ಯರೋಪ, ಜಾತಿ, ಧರ್ಮದಲ್ಲಿ ರಾಜಕೀಯ, ನೆಲ, ಜಲ, ಭಾಷೆ ವಿಷಯದಲ್ಲಿ ಕಿರಿಕ್ ಸೇರಿದಂತೆ ಅವಾಚ್ಯ ಶಬ್ದ, ಅವಹೇಳನಕರ ಭಾಷಣಕ್ಕೆ ಹೆಸರುವಾಸಿಯಾಗುತ್ತಿದೆ.ಈ ಮೇಲಿನ ಯಾವುದೇ ಘಟನೆ ಆಕಸ್ಮಿಕವಾಗಿ ಬಾಯಿ ತಪ್ಪಿನಿಂದ ನಡೆದರು ಬಹಿರಂಗವಾಗಿ ಕ್ಷಮೆ ಯಾಚನೆ ಇಲ್ಲ, ಕ್ಷಮಾಪಣೆಯ ಲಿಖಿತ ಪತ್ರ ಇಲ್ಲ. ಹೀಗೆ ತಿಂಗಳುಗಟ್ಟಲೆ ಬೆಳೆಸಿಕೊಂಡು ಹೋಗಿ ಬಿಡುವುದು. ಒಟ್ಟಿನಲ್ಲಿ ಇಂತಹ ಸನ್ನಿವೇಶ ದಿನನಿತ್ಯ ನೋಡಿ ತಲೆನೋವಿನ ಮಾತ್ರೆ ತಗೊಳ್ಳುವ ಹಂತಕ್ಕೆ ಬರುತ್ತದೆ. ರಾಜಕಾರಣಿಗಳು ಎನಿಸಿಕೊಂಡವರಿಗೆ ಬೇಕಾದಷ್ಟು ಕೆಲಸ ಕಾರ್ಯಗಳಿವೆ. ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು ದಕ್ಷಿಣ ಕರ್ನಾಟಕ ಮಗ/ಮಗಳು…
– ಗೀತಾ ವಸಂತ ಜೋಶಿ ಉದಯರಶ್ಮಿ ದಿನಪತ್ರಿಕೆ ಮಾಗಿಯ ಚಳಿಯಲಿ ಮೈ ನಡುಗಿರಲುಬೆಚ್ಚನೆಯ ಹೊದಿಕೆ ಮೈ ಮೇಲೆ ಇರಲುಕಾಡುವ ಶೀತಲತೆಗೆ ನಾ ಮಲಗಿರಲುಬೆಚ್ಚನೆಯ ಕಾಫಿಯು ಹಿತ ತಂದಿರಲು ತಣ್ಣನೆಯ ಗಾಳಿ ಮೈ ಸೋಕಿದಾಗಆಹಾ ಇದೆಂತಹ ಆನಂದ ನನಗಾಗಹೂವಿನಲಿ ದುಂಬಿಯ ಝೇಂಕಾರಕಂಡು ನಲಿಯುತ ಕುಣಿದೆ ಸರಸರ ಸೂರ್ಯಾಸ್ತಮಾನಕೆ ಮುಗಿಲಿನ ರಂಗುವಾತವರಣ ಕಂಡು ನಾನಾದೆ ದಂಗುಬಾನಾಡಿಗಳು ಮರಳಿ ಗೂಡಿಗೆ ಬಂದ್ವುಸಂಜೆಯಲಿ ಎಲ್ಲ ಮನೆ ಸೇರಿದ್ವು ಚುಮು ಚುಮು ಛಳಿಗೆ ಬಿಸಿಯೂಟಶೀತಲತೆಗೆ ಸೃಷ್ಟಿಯ ಸುಂದರ ನೋಟಬೆಚ್ಚನೆಯ ರಗ್ಗು ಬಿಸಿನೀರು ಬೇಕುಸೂರ್ಯನ ಬಿಸಿಲು ಹಿತ ಎಲ್ಲಕು
ಸಣ್ಣ ಕಥೆ ಲೇಖಕರು-ವಿಜಯಲಕ್ಷ್ಮಿ ಮೂರ್ತಿ ✍️ ಉದಯರಶ್ಮಿ ದಿನಪತ್ರಿಕೆ
ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದಲ್ಲಿ ನಾವು ಖರೀದಿಸಿದ ವಸ್ತುವಿಗೆ ಗ್ರಾಹಕರಾಗುತ್ತೇವೆ. ಖರೀದಿಸಿದ ವಸ್ತು ನಿಖರತೆಯಿಂದ ಕೂಡಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರವಿಂದ ಹಾಗರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಅಂಜುಮನ್ ಕಾನೂನು ಮಹಾವಿದ್ಯಾಲಯ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ “ಗ್ರಾಹಕರೆ ರಾಜರು ಗ್ರಾಹಕರೆ ದೇವರು” ಎಂಬ ಘೋಷ ವಾಕ್ಯದೊಂದಿದೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ೨೦೨೪ ಕುರಿತು ಗ್ರಾಹಕ ನ್ಯಾಯದಲ್ಲಿ ವರ್ಚುವಲ್ ಅಹವಾಲು ಆಲಿಸುವಿಕೆ ಮತ್ತು ಡಿಜಿಟಲ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಭಾರತ ಸರ್ಕಾರದ ಅಧೀನ ಸಂಸ್ಥೆಯಾದ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆರ್ಥಿಕ ಮತ್ತು ಅಭಿವೃದ್ಧಿ ಕಾಪೋರೇಷನ್ ವತಿಯಿಂದ ಡಿಸೆಂಬರ್ ೨೩ರಿಂದ ಡಿಸೆಂಬರ್ ೨೭ರವರೆಗೆ ಮ್ಯಾನುವೇಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.೨೦೧೩ ಅಥವಾ ತದನಂತರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕೆಲಸದಲ್ಲಿ ತೊಡಗಿಸಿಕೊಂಡವರು, ಒಣ ಮಲದ ಗುಂಡಿಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ತೆರೆದ ಮತ್ತು ಸ್ವಚ್ಚತೆ ಇಲ್ಲದ ಗುಂಡಿಯಲ್ಲಿ ಸಂಗ್ರಹವಾಗಿರುವ ಅನಾರೋಗ್ಯಕರ ಶೌಚಾಲಯಗಳ ಮಾನವರು ಮಲವನ್ನು ಶುಚಿಗೊಳಿಸುವುದು. ಒಂದು ಗುಂಡಿಯ ಶೌಚಾಲಯವನ್ನು ದೈಹಿಕ ಶ್ರಮದಿಂದ ಸ್ವಚ್ಛಗೊಳಿಸುವುದು, ಶೌಚಾಲಯದಿಂದ ಮಲ ಸೇರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಯಾವುದೇ ವ್ಯಕ್ತಿಗಳು ಇದ್ದಲ್ಲಿ, ವಿಜಯಪುರ ಜಿಲ್ಲೆಯ ಕೆಳಕಂಡ ಸ್ಥಳದಲ್ಲಿ ಆಯೋಜಿಸಿರುವ ಸಮೀಕ್ಷೆ ಮತ್ತು ಗುರುತಿಸುವಿಕೆಯ ಶಿಬಿರದಲ್ಲಿ ಭಾಗವಹಿಸಿ ಹೆಸರನ್ನು ನೋಂದಾಯಿಸಿಕೊಳ್ಳುವುದು.ವಿಜಯಪುರ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಡಿಸೆಂಬರ್ ೨೩ರಂದು ಬೆಳಿಗ್ಗೆ ೧೦ ಗಂಟೆಗೆ (ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ೯೯೪೫೪೧೩೨೦೫, ೮೧೨೩೩೭೬೭೭೦), ತಿಕೋಟಾ ತಾಲೂಕ ಪಂಚಾಯತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ೨೦೨೪-೨೫ ಸಾಲಿನ ಮಹಾತ್ಮ ಗಾಂಧಿ ಗ್ರಾಮ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಂಗನಗೌಡ ಬಿರಾದಾರ ಅವರು ಬೂದು ನೀರು ನಿರ್ವಹಣೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಸಾಲಿನ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ೯೪. ೦೦ ಲಕ್ಷ ವೆಚ್ಚದ ಕಾಮಗಾರಿಯನ್ನು ಬ್ರಹ್ಮದೇವನಮಡು ಗ್ರಾಮದಲ್ಲಿ ಕೈಗೊಂಡಿದ್ದೇವೆ ಎಂದರು.ಗ್ರಾಮದ ಸಹಕಾರದೊಂದಿಗೆ ಈ ಯೋಜನೆಗಳನ್ನು ಹಂತ ಹಂತವಾಗಿ, ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದೇನೆ. ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಯನ್ನು ನನ್ನ ಅಧಿಕಾರ ಅವಧಿಯಲ್ಲಿ ಮಾಡಿಸಿದ್ದೇನೆ. ಸರ್ಕಾರ ಮಟ್ಟದಲ್ಲಿ ಕಾಮಗಾರಿಗಳಿಗೆ ಮಂಜೂರಾತಿಯನ್ನು ಮಾಡಿಸಿಕೊಂಡು ಬಂದು ಪ್ರತಿ ಗ್ರಾಮದ ಕುಂದು ಕೊರತೆಗಳನ್ನು ಪರಿಶೀಲಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇನೆ ಎಂದರು.ನಂತರ ಮಾತನಾಡಿದ ಸಿಂದಗಿ ತಾಲೂಕು ಕಾಂಗ್ರೆಸ್ ಮುಖಂಡ ವಿಜುಗೌಡ ಬಿರಾದಾರ ಅವರು, ಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗಾಗಿ ನಮ್ಮ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೇಂದ್ರ ಗೃಹ ಸಚಿವ ಅಮೀತ್ ಶಹಾ ರಾಜೀನಾಮೆ ನೀಡಿ, ದೇಶದ ಜನರ ಕ್ಷಮೆ ಕೇಳಬೇಕು. ಅದಲ್ಲದೇ ಅಮೀತ್ ಶಹಾ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಭುವನೇಶ್ವರಿ ಕಾಂಬಳೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.ಲೋಕಸಭೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಕುರಿತ ಹೇಳಿಕೆಯನ್ನು ಖಂಡಿಸಿ, ಶ್ರೀಮತಿ ರಮಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯಕರ್ತರು ಹಾಗೂ ರಾಜಶೇಖರ ಸಿಂಧೆ, ಶಿರಗೂರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತುನಗರ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಿಸಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ ಹಾಗೂ ಪ್ರಮುಖ ರಸ್ತೆಯಲ್ಲಿ ವಿವಿಧ ಘೋಷಣೆಗಳನ್ನು ಕೂಗುವ ಹಾಗೂ ತಮಟೆ ಬಾರಿಸುವ ಮೂಲಕ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗ ಅಧಿಕಾರ ಅಬೀದ್ ಗದ್ಯಾಳ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.ಕೇಂದ್ರದ ಗೃಹ ಸಚಿವ ಅಮೀತ್ ಶಹಾ ಚಳಿಗಾಲದ ಅಧಿವೇಶನದಲ್ಲಿ ನೀಡಿರುವ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಾಂತರಾಜ ವರದಿಯಂತೆ ಪೂರ್ಣಗೊಂಡ ಜಾತಿಗಣತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಿಂದುಳಿದ, ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಜು ಅಲಗೂರ ಹೇಳಿದರು.ಮಂಗಳವಾರ ಆಲಮೇಲ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಜಿಲ್ಲೆಯ ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತ ಹೇಳಿದರು.ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರದ ಮೀಸಲಾತಿ ಪಡೆದುಕೊಳ್ಳಲು ಜಾತಿಗಣತಿ ವರದಿ ಜಾರಿಯಾಗಬೇಕು. ಈ ಜಾತಿಗಣತಿ ವರದಿಯನ್ನು ಜಾರಿಗೋಳಿಸವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾದ್ಯ. ಅದಕ್ಕೆ ಅವರ ಅವಧಿಯಲ್ಲೆ ಜಾತಿಗಣತಿ ವರದಿ ಜಾರಿಗೋಳಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ಶೋಷಿತ ವರ್ಗಗಳ ಹಾಗೂ ಅಹಿಂದ ಸಂಘಟನೆ ಮತ್ತು ಕಾಂಗ್ರೆಸ್ ಪಕ್ಷದಿಂದ ಲಕ್ಷಾಂತರ ಜನರ ಬ್ರಹತ್ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದರು.ಜಾತಿಗಣತಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಪೂರ್ಣಗೊಂಡ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ…
