– ಗೀತಾ ವಸಂತ ಜೋಶಿ
ಉದಯರಶ್ಮಿ ದಿನಪತ್ರಿಕೆ
ಮಾಗಿಯ ಚಳಿಯಲಿ ಮೈ ನಡುಗಿರಲು
ಬೆಚ್ಚನೆಯ ಹೊದಿಕೆ ಮೈ ಮೇಲೆ ಇರಲು
ಕಾಡುವ ಶೀತಲತೆಗೆ ನಾ ಮಲಗಿರಲು
ಬೆಚ್ಚನೆಯ ಕಾಫಿಯು ಹಿತ ತಂದಿರಲು
ತಣ್ಣನೆಯ ಗಾಳಿ ಮೈ ಸೋಕಿದಾಗ
ಆಹಾ ಇದೆಂತಹ ಆನಂದ ನನಗಾಗ
ಹೂವಿನಲಿ ದುಂಬಿಯ ಝೇಂಕಾರ
ಕಂಡು ನಲಿಯುತ ಕುಣಿದೆ ಸರಸರ
ಸೂರ್ಯಾಸ್ತಮಾನಕೆ ಮುಗಿಲಿನ ರಂಗು
ವಾತವರಣ ಕಂಡು ನಾನಾದೆ ದಂಗು
ಬಾನಾಡಿಗಳು ಮರಳಿ ಗೂಡಿಗೆ ಬಂದ್ವು
ಸಂಜೆಯಲಿ ಎಲ್ಲ ಮನೆ ಸೇರಿದ್ವು
ಚುಮು ಚುಮು ಛಳಿಗೆ ಬಿಸಿಯೂಟ
ಶೀತಲತೆಗೆ ಸೃಷ್ಟಿಯ ಸುಂದರ ನೋಟ
ಬೆಚ್ಚನೆಯ ರಗ್ಗು ಬಿಸಿನೀರು ಬೇಕು
ಸೂರ್ಯನ ಬಿಸಿಲು ಹಿತ ಎಲ್ಲಕು


