ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೇಂದ್ರ ಗೃಹ ಸಚಿವ ಅಮೀತ್ ಶಹಾ ರಾಜೀನಾಮೆ ನೀಡಿ, ದೇಶದ ಜನರ ಕ್ಷಮೆ ಕೇಳಬೇಕು. ಅದಲ್ಲದೇ ಅಮೀತ್ ಶಹಾ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಭುವನೇಶ್ವರಿ ಕಾಂಬಳೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.
ಲೋಕಸಭೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಕುರಿತ ಹೇಳಿಕೆಯನ್ನು ಖಂಡಿಸಿ, ಶ್ರೀಮತಿ ರಮಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯಕರ್ತರು ಹಾಗೂ ರಾಜಶೇಖರ ಸಿಂಧೆ, ಶಿರಗೂರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ನಗರ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಿಸಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ ಹಾಗೂ ಪ್ರಮುಖ ರಸ್ತೆಯಲ್ಲಿ ವಿವಿಧ ಘೋಷಣೆಗಳನ್ನು ಕೂಗುವ ಹಾಗೂ ತಮಟೆ ಬಾರಿಸುವ ಮೂಲಕ ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗ ಅಧಿಕಾರ ಅಬೀದ್ ಗದ್ಯಾಳ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರದ ಗೃಹ ಸಚಿವ ಅಮೀತ್ ಶಹಾ ಚಳಿಗಾಲದ ಅಧಿವೇಶನದಲ್ಲಿ ನೀಡಿರುವ ಹೇಳಿಕೆಯು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಪಮಾನಗೊಳಿಸಿದೆ. ಆದ್ದರಿಂದ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷ ಇಂದಿರಾಗಾಂಧಿ ಹೊಸಮನಿ, ಸುಶೀಲಾ ಬನಸೊಡೆ, ಬೈಜಾಬಾಯಿ ಹರಿಜನ, ಮಹಾದೇವಿ ಶಿವಶರಣ, ಭಾಗವ್ವ ದಶವಂತ, ಯಲಬಾಯಿ ಬನಸೊಡೆ, ಲಕ್ಷ್ಮೀ ದ್ರಾವಿಡ, ರೇಣುಕಾ ದಶವಂತ, ಪವಿತ್ರ ಮಾದರ, ಸುನಂದ ದಶವಂತ, ಜ್ಯೋತಿ ಹೊಸಮನಿ, ರೂಪಾ ಕಾಲೇಬಾಗ, ಪವಿತ್ರ ಸಾವಳಸಂಗ, ಸರೋಜನಿ ಕಟ್ಟಿಮನಿ, ಶೋಭಾ ಲೋಗಿ, ಗುಂಡವ್ವ ಕಾಂಬಳೆ, ಸುಜಾತ ಬಬಲಾದಿ,ಸುಭಾಸ ತಳಕೇರಿ, ಪಾಂಡುರಂಗ ರೇವಪ್ಪ ಹೊಸಮನಿ, ವಿಕಾಸ ಬನಸೋಡೆ, ಆನಂದ ಅಗರಖೇಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.