Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೊಳಗಾದ ರೈತರ ಅಹವಾಲು ಕೇಳಲು ರಾಜ್ಯ ಬಿಜೆಪಿ ವತಿಯಿಂದ ತಂಡ ರಚಿಸಲಾಗಿದೆ.ಸಂಸದ ಗೋವಿಂದ ಕಾರಜೋಳ, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ ಶಹಾಪುರ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಕಲ್ಮರುಡಪ್ಪ ತಂಡವು ಅ.೨೯ ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಸಮೀಪವಿರುವ ನಗನೂರು ಗ್ರಾಮದ ರೈತ ದಂಪತಿ ಪದ್ಮಾವತಿ ಗಂಡ ಚಂದ್ರಶೇಖರ ಲಕ್ಕುಂಡಿ ಇವರ ಸುಪುತ್ರಿ ಕುಮಾರಿ ಶಿವಲೀಲಾ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಏಕೈಕ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಬೆಂಗಳೂರಲ್ಲಿ, 2018-19 ರಿಂದ 2023-24 ರವರೆಗೆ ಬ್ಯಾಚುಲರ್ ಆಫ್ ಹೋಮಿಯೋಪತಿ ವೈದ್ಯಕೀಯ ಶಿಕ್ಷಣ ಪೂರೈಸಿದ ಗ್ರಾಮೀಣ ಪ್ರತಿಭೆ.ಇತ್ತೀಚೆಗೆ ಚೌಡಯ್ಯ ಮೆಮೋರಿಯಲ್ ಹಾಲ್ ಬೆಂಗಳೂರಲ್ಲಿ, ಹೋಮಿಯೋಪತಿ ರಾಷ್ಟ್ರೀಯ ಆಯೋಗ ನವದೆಹಲಿ, ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಮತ್ತು ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಜರುಗಿದ 34 ನೇ ಪದವಿ ಪ್ರಧಾನ ಸಮಾರಂಭದಲ್ಲಿ, ಡಾ ಶೈಲೇಂದ್ರ ಜಿ ಬೆಲ್ದಾಳೆ ಶಾಸಕರು ದಕ್ಷಿಣ ಮತಕ್ಷೇತ್ರ ಬೀದರ್. ಡಾ ರಿಯಾಜ್ ಬಾಷ, ಕುಲಸಚಿವರು ಮೌಲ್ಯ ಮಾಪನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು. ಡಾ ಎ ಬಿ ಪಾಟೀಲ್ ನಿವೃತ್ತ ನಿರ್ದೇಶಕರು ಆಯುಷ್ ಇಲಾಖೆ ಬೆಂಗಳೂರು, ಡಾ ವಿ ಗುರುಪ್ರಸಾದ್ ನಿವೃತ್ತ…
– ನಳಿನಾ ದ್ವಾರಕಾನಾಥ್ ಉದಯರಶ್ಮಿ ದಿನಪತ್ರಿಕೆ ಜೀವಜೀವಗಳು ಬೆಸೆವ ಮಧುರ ಮಿಲನವುಹೃದಯವೇ ಸುಮಧುರ ಸುಂದರ ತಾಣವುಮಧುರವಾಗಿದೆ ರಸಮಯ ಒಲವಗಾನವುಚೆಲುವಿನ ಒಲವಿನ ಸುಂದರವಾದ ಕ್ಷಣವು ಜೀವಗಳ ಭಾವದಲ್ಲಿದೇ ಸುಮಧುರ ಚೇತನಹೊಸತನದಿ ಹೊಮ್ಮಿ ಬಂದಿದೆ ನಲಿವಮನಅಂತರಂಗವು ಹೇಳ ಬಯಸಿದೆ ಮಧುವನಅದುವೇ ಇಂಪಾದ ಪ್ರೀತಿಯ ಮಧುರಗಾನ ಚೆಂದದ ಚೆಲುವಿನಲಿ ಮೂಡಿದೆ ಅನುರಾಗಮನಗಳೆರಡು ಬೆರೆತು ತಂದಿದೆ ಶುಭಯೋಗಮನಮನ ಸ್ಪಂದಿಸುತಾ ಹಾಡಿವೆ ಹೊಸರಾಗತೋರಿವೆ ಒಲವಿನ ಸುಂದರ ಪ್ರೇಮಾನುರಾಗ
ಲೇಖನ – ಡಾ. ರಾಜಶೇಖರ ನಾಗೂರ ಉದಯರಶ್ಮಿ ದಿನಪತ್ರಿಕೆ ಜವಾಬ್ದಾರಿ ಎನ್ನುವುದು ಚಿಕ್ಕ ಪದ ಆದರೆ ಸಾಗರರದಷ್ಟು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಜವಾಬ್ದಾರಿ ಎಲ್ಲರಿಂದ ಸಾಧ್ಯವೂ ಇಲ್ಲಾ. ಸಮಾಜವಿರಲಿ, ರಾಜಕೀಯವಿರಲಿ, ಕುಟುಂಬವಿರಲಿ, ಗುಂಪುಗಳಲ್ಲಿ ಜವಾಬ್ದಾರಿ ಹೊರುವವ ಮಾತ್ರ ನಾಯಕನಾಗಲು ಸಾಧ್ಯ. ಜಪಾನ್ ದೇಶದಲ್ಲಿ ಸಾಗರ/ಸಮುದ್ರದ ಹಬ್ಬ ಎಂದು ಆಚರಿಸುವ ರೂಢಿ ಇದೆ. ಆ ದಿನ ಸಾಗರದ ದಡದಲ್ಲಿರುವ ಊರಿನವರು ಸಾಗರದ ಹತ್ತಿರ ಬಂದು ಸಾಗರದ ಮರಳಿನಲ್ಲಿ ಉಂಡು, ತಿಂದು, ನಲಿದು ದೇವರ ಆರಾಧನೆ ಮಾಡಿ ಮನೆಗೆ ಮರಳುವುದು. ಜಪಾನಿನ ಸಾಗರದ ದಡವೊಂದರ ಹತ್ತಿರವಿರುವ ಎತ್ತರದ ಬೆಟ್ಟದ ಮೇಲೆ ನೂರಾರು ಮನೆಗಳಿರುವ ಊರೊಂದಿತ್ತು. ಆ ಸಾಗರದ ಹಬ್ಬವನ್ನು ಆಚರಿಸಲು ಆ ಊರಿನ ಎಲ್ಲ ಮಕ್ಕಳು, ಹಿರಿಯರು, ಕಿರಿಯರು ಆ ಬೆಟ್ಟದ ಮೇಲಿಂದ ಕೆಳಗಿಳಿದು ಹತ್ತಿರದ ಸಾಗರದ ಮರಳಿನ ಮೇಲೆ ಬಂದಿಳಿದು, ನಕ್ಕು-ನಲಿದು ಹಬ್ಬವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಚರಿಸತೊಡಗಿದ್ದರು. ಈ ಹಬ್ಬದ ದಿನದಂದು ಎಲ್ಲರೂ ಕೆಳಗಡೆ ಬಂದಾಗ ಆ ಊರಿನ ಮನೆಗಳನ್ನು ಕಾಯುವವರು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಇಸ್ರೇಲ್ ಹಾಗೂ ಇರಾಕ್ ಎರಡು ದೇಶದ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮದಿಂದ ಹವಾಮಾನ ವೈಪರೀತ್ಯ ಉಂಟಾಗಿ ವಿಶ್ವದ ಅನೇಕ ದೇಶಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ ಎಂದು ಕಾಲಜ್ಞಾನ ಬ್ರಹ್ಮ ಡಾ.ಶರಣಬಸವ ಮಹಾಸ್ವಾಮಿಗಳು ತಳ್ಳಿಹಾಳ ಕೋಡಿಮಠ ಗಜೇಂದ್ರಗಡ ಹೇಳಿದರು.ನಾಡು ಸಂಚಾರ ಪ್ರಯುಕ್ತ ಭಕ್ತರ ತಿಂಗಳ ಬೇಟಿ ಕಾರ್ಯಕ್ರಮದ ನಿಮಿತ್ಯ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಗದ್ಗುರು ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಸಂಘದವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕಾರ್ತೀಕ ಮಾಸದ ಕಾಲಜ್ಞಾನವನ್ನು ನುಡಿದ ಅವರು ಈ ತಿಂಗಳಿನಲ್ಲಿ ಮಕ್ಕಳಿಗೆ ಯುವಕರಿಗೆ ಶೀತಭಾದೆ ಚಳಿಜ್ವರದಂತಹ ರೋಗವು ವ್ಯಾಪಕವಾಗಿ ಹರಡುವದು ಸ್ವಾಮಿಗಳಿಗೆ ಕಂಟಕ ಬರುವುದು ಎಂದ ಅವರು ಇದರಿಂದ ಭಾರತ ದೇಶದ ಜನರಿಗೆ ಅಷ್ಟೇನು ಮಾರಕವಲ್ಲ ರಾಜಕೀಯದಲ್ಲಿ ಸ್ಥಾನಪಲ್ಲಟ ಏರಿಳಿತವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ರಾಜಶೇಖರಯ್ಯ ಹಿರೇಮಠ, ಗುರುಸಿದ್ದಯ್ಯ ಪರಡಿಮಠ, ರುದ್ರಯ್ಯ ಮಠಪತಿ, ವಿದ್ಯಾಧರ ದೇಸಾಯಿ, ಬಸಯ್ಯ ಗಣಾಚಾರಿ, ಈರಯ್ಯ ಗಣಕುಮಾರ ಹಾಗೂ ಬ್ಯಾಂಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಚಿಮ್ಮಡ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ | ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಚಾಂಪಿಯನ್ ಟ್ರೋಫಿ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಶರವೇಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಕ್ರೀಢೆ ಕಬ್ಬಡ್ಡಿಯಲ್ಲಿ ತರಬೇತಿ ಪಡೆಯುತ್ತಿರುವ ಗ್ರಾಮೀಣ ಭಾಗದ ಕ್ರೀಢಾ ಪಟುಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಬಾಗಲಕೋಟ ಜಿಲ್ಲಾ ಅಮೇಚೂರ ಅಧ್ಯಕ್ಷರಾದ ಶಾಸಣ್ಣ ಕುಬಕಡ್ಡಿ ಹೇಳಿದರು.ಇಲ್ಲಿನ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಶನಿವಾರ ಓಂ ಪ್ರಭುಲಿಂಗೇಶ್ವರ ನ್ಯೂ ಕಬ್ಬಡ್ಡಿ ತಂಡ ಹಾಗೂ ಬಾಗಲಕೋಟ ಜಿಲ್ಲಾ ಕಬ್ಬಡ್ಡಿ ಅಮೇಚೋರ ಅಸೋಶಿಯೇಷನ್ ಸಂಯುಕ್ತ ಆಶೃಯದಲ್ಲಿ ಹಮ್ಮಿಕೊಂಡಿದ್ದ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಂದು ಉಪ ವಿಭಾಗ ಮಟ್ಟದಲ್ಲಿ ೭೦ಕ್ಕೂ ಅಧಿಕ ತಂಡಗಳಿದ್ದು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಇಂತಹ ಚಾಂಪಿಯನ್ ಟ್ರೋಫಿಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುವ ಮೂಲಕ ಅವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ ಎಂದರು.ಬಾಗಲಕೋಟ ಜಿಲ್ಲಾ ಅಮೇಚೋರ ಅಸೋಶಿಯೇಷನ್ ಕಾರ್ಯದರ್ಶೀ ಮಹಾಂತೇಶ ಮುಕ್ಕನ್ನವರ ಮಾತನಾಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಚಿಮ್ಮಡ ಕಬ್ಬಡ್ಡಿ ವೈಭವ-೨೦೨೪ ಕಾರ್ಯಕ್ರಮಕ್ಕೆ ಅತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಸಾಹಿತ್ಯದ ಸುದೀರ್ಘ ಇತಿಹಾಸದಲ್ಲಿ ಸರಳ ಬದುಕಿನ ಸಾರ ಕವನ ಸಂಕಲನಗಳ ಮೂಲಕ ಹೇಳಿದ ಮಹಾನ ವ್ಯಕ್ತಿತ್ವ ಬೇಂದ್ರೆಯವರು ಹೊಂದಿದ್ದರು. ಅವರು ಬದುಕಿನ ಸಾಮರಸ್ಯ ಕವಿಯಾಗಿ ಹೊರಹೊಮ್ಮಿದವರು ಎಂದು ಡಾ.ಡಾ.ಭಾರತಿ ಖಾಸನಿಸ್ ಹೇಳಿದರು.ಶನಿವಾರ ಅ.೨೬ ರಂದು ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಡಾ ದ ರಾ ಬೇಂದ್ರೆ ಪುಣ್ಯ ಸ್ಮರಣೋತ್ಸವ ನಿಮಿತ್ಯ ಚಿಂತನೆ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇಂದ್ರೆ ಕವನಗಳನ್ನು ಅಧ್ಯಯನ ಮಾಡುವ ಅತ್ಯವಶ್ಯಕತೆ ಇದೆ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು,ಡಾ ದ ರಾ ಬೇಂದ್ರೆ ಕುರಿತು ಉಪನ್ಯಾಸ ನೀಡಿದ ಪಿಡಿಜೆ ಕಾಲೇಜ್ ಉಪನ್ಯಾಸಕ ಸಂತೋಷ ಕುಲಕರ್ಣಿ ಮಾತನಾಡುತ್ತ, ಕನ್ನಡ ಸಾಹಿತ್ಯಕ್ಕೆ ನಾಕುತಂತಿ ಕವನ ಸಂಕಲನ ನೀಡುವದರ ಮೂಲಕ ಜ್ಞಾನಪೀಠ ಪ್ರಶಸ್ತಿ ಪಡೆದು ನಾಡಿಗೆ ಗೌರವ ತಂದವರು. ಕಷ್ಟದಲ್ಲಿ ನೋವುಂಡು ಬೆಳದು ೩೭ ಕವನ ಸಂಕಲನ ಬರೆಯುವದರ ಮೂಲಕ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ಸಂಸ್ಥಾಪಿತ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸ್ಕೆಟಿಂಗ್ ಅಕಾಡಮಿ ಸ್ಪರ್ದೆಯಲ್ಲಿ ೨ಬಂಗಾರ, ೩ಬೆಳ್ಳಿ ಮತ್ತು ೫ ಕಂಚಿನ ಪದಕಗಳನ್ನು ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.ಅ.೨೬ ಮತ್ತು ೨೭ ರಂದು ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಅಕಾಡಮಿಯ ವಿದ್ಯಾರ್ಥಿಗಳಾದ ವಿಕ್ರಾಂತ ಶಾರದಳ್ಳಿ, ಅನೂಪ ತುಪ್ಪದ, ಅದಿತಿ ನಾಗೂರ, ಸಾದ್ವಿ ನಾಗೂರ, ಕೃತಿಕಾ ತುಪ್ಪದ, ಶಕುಂತಲಾ ಶಾರದಳ್ಳಿ ಭಾಗವಹಿಸಿದ್ದರು.೫೦೦ಮೀ ಮತ್ತು ೧೦೦೦ಮೀ ಸ್ಪರ್ದೆಯಲ್ಲಿ ಕೃತಿಕಾ ತುಪ್ಪದ ಬಂಗಾರದ ಪದಕ, ವಿಕ್ರಾಂತ ೫೦೦ಮೀ ಕಂಚಿನ ಮತ್ತು ೧೦೦೦ಮೀ ನಲ್ಲಿ ಬೆಳ್ಳಿಯ ಪದಕ, ಅದಿತಿ ೫೦೦ಮೀ ಮತ್ತು ೧೦೦೦ಮೀ ನಲ್ಲಿ ಬೆಳ್ಳಿಯ ಪದಕ, ಶ್ರೇಯಾ ಮತ್ತು ಶಕುಂತಲಾ ಕಂಚಿನ ಪದಕ ಪಡೆದು ತಾಲೂಕಿನ ಹಿರಿಮೆಯನ್ನ ಹೆಚ್ಚಿಸಿದ್ದಾರೆ.ಇವರ ಸಾಧನೆಗೆ ಅಕಾಡಮಿಯ ವಿದ್ಯಾರ್ಥಿಗಳ ಪಾಲಕರಾದ ಬಸವರಾಜ ನಾಗೂರ, ಉಮಾ ಶಾರದಳ್ಳಿ, ನಾಗೇಂದ್ರ ಶಿವಶಿಂಪಿ, ಮಲ್ಲನಗೌಡ ಕಡಕಲ್ಲ,…
ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವೆಲ್ಲರೂ ಇಲ್ಲಿ ಒಗ್ಗಟ್ಟಿನಿಂದ ಇರುವ ಕಾರಣಕ್ಕೆ ವಿಜಯಪುರ ನಗರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ವಾರ್ಡ ನಂ.೧೫ ರಲ್ಲಿ ಬರುವ ಟ್ರೇಜರಿ ಕಾಲೊನಿಯ ಅಯ್ಯಪ್ಪ ದೇವಸ್ಥಾನ ಹತ್ತಿರ ಭಾನುವಾರ ೨೦೨೦-೨೧ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಲಾದ ರೂ.೧೦ ಲಕ್ಷ ಅನುದಾನದಲ್ಲಿ ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ನಡೆಸಿದರೂ ಯಾರ ಆಟವು ನಡೆಯಲಿಲ್ಲ. ಹಿಂದಿನ ಚುನಾವಣೆಗಿಂತಲೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದೆ. ಅದರ ಫಲವಾಗಿ ಎಂದೂ ಅಭಿವೃದ್ಧಿ ಕಾಣದ ಬಡಾವಣೆ, ಕಾಲನಿಗಳು ಸೇರಿ ನಗರದ ಒಳ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಇದರಿಂದ ನಮ್ಮ ನಗರ ದೂಳು…
ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡಕ್ಕೆ ಸಚಿವ ಎಂ.ಬಿ.ಪಾಟೀಲರಿಂದ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ನಾಗರಿಕ ಸೌಲಭ್ಯ ವಸತಿ ನಿಲಯದಿಂದ ಹಲವು ಬಡಜನರಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ೨೦೨೪-೨೫ನೇ ಸಾಲಿನಲ್ಲಿ ಶ್ರೀಮತಿ ಸುಧಾ ಮೂರ್ತಿ ರಾಜ್ಯಸಭಾ ಸಂಸದರು ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಾಗರಿಕ ಸೌಲಭ್ಯ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ದಿ ಹೊಂದಲು ಸಮಾಜದ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತರಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಸಹ ಅತಿ ಹೆಚ್ಚಿನ ಅನುದಾನ ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.ಈ…
