ರೈತ ಹೋರಾಟಗಾರ ಅರವಿಂದ ಕುಲಕರ್ಣಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ನ್ಯಾಯವಾದಿ ಎಚ್.ಎಸ್.ಗುರಡ್ಡಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೂತನ ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಇತ್ತಿಚೆಗೆ ಸರಕಾರ ಪ್ರತ್ಯೇಕವಾಗಿ ರಚಿಸಿದ್ದು ಈ ಪ್ರಾಧಿಕಾರಕ್ಕೆ ಕಂದಾಯ ಸಚಿವರನ್ನು ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಮಾಡಿರುವುದು ತಪ್ಪು ನಿರ್ಣಯ ಸರಕಾರ ತೆಗೆದುಕೊಂಡಿದ್ದಾರೆ ಅದೆ ಕೂಡಲ ಸಂಗಮ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಆದರೆ ಬಸವನ ಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರಕಾರ ಮಲತಾಯಿ ದೋರಣೆ ಅನುಸರಿಸಿದೆ ಆದ್ದರಿಂದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿ ಇರಬೇಕೆಂದು ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಹಾಗೂ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ನ್ಯಾಯವಾದಿ ಎಚ್.ಎಸ್.ಗುರಡ್ಡಿ ಪತ್ರಿಕಾ ಗೋಷ್ಟಿಯಲ್ಲಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಗುರುವಾರದಂದು ಬಸವನ ಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಕ್ಕೆ ತಂದಿದ್ದು ಈ ಪ್ರಾಧಿಕಾರದ ಕೆಳಗಡೆ ಇಂಗಳೇಶ್ವರ ಹೋರಿಮಟ್ಟಿ ಗುಡ್ಡ ಮಸಬಿನಾಳ ದೇಗಿನಾಳ ದೇವರ ಹಿಪ್ಪರಗಿ ಶಿವಣಗಿ ತಂಗಡಗಿ ಈ ಗ್ರಾಮಗಳನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿದ್ದಾರೆ. ಆದರೂ ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಶರಣರು ಜನ್ಮಸ್ಥಳ ಗ್ರಾಮಗಳಿದ್ದು ಅದರಲ್ಲಿ ದೇವರ ಹಿಪ್ಪರಗಿಯ ಮಡಿವಾಳ ಮಾಚಿದೇವರು ಶಿವಣಗಿಯ ನೂಲಿ ಚಂದಯ್ಯ ಸಿಂದಗಿ ತಾಲೂಕಿನ ಗೋಲಗೇರಿಯ ಕುರುಬ ಗೊಲ್ಲಾಳೇಶ್ವರ ಇಂಡಿ ತಾಲೂಕಿನ ಹಾವಿನಾಳ ಕಲ್ಲಯ್ಯ ಚಿಮ್ಮಲಗಿಯ ಚಂದಿಮರಸರು ಮುದ್ದೇಬಿಹಾಳ ತಾಲೂಕಿನ ಬಾವೂರು ಬೊಮ್ಮಯ್ಯನವರು ಬೈರವಾಡಗಿಯ ಆಯ್ದಕ್ಕಿ ಲಕ್ಕಮ್ಮ ಆಲಮೇಲ ತಾಲೂಕಿನ ನಾಗರಹಳ್ಳಿ ಗ್ರಾಮದ ಗೊಲ್ಲಾಳೇಶ್ವರ ದೇವಸ್ಥಾನ ಅಗ್ರಹಾರಗಳಾದ ಮನಗೂಳಿ, ಮುತ್ತಗಿ ಸೇರಿದಂತೆ ಇನ್ನೂ ಹಲವಾರು ಶರಣರು ಜನ್ಮತಾಳಿದ ಗ್ರಾಮಗಳನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಸೇರ್ಪಡೆಗೊಳಿಸಬೇಕು. ರಾಜ್ಯ ಸರ್ಕಾರ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿದೇಯಕದ ಸಂದರ್ಭದಲ್ಲಿ ಸರ್ಕಾರ ಕೆಲವು ತಪ್ಪು ನಿರ್ಣಯಗಳನ್ನು ತೆಗೆದುಕೊಂಡಿದೆ. ಬಾಗೇವಾಡಿ ನೂತನ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಂದಾಯ ಸಚಿವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿಕೊಂಡಿದೆ. ಈ ನಿರ್ಣಯವನ್ನು ತೆಗೆದುಕೊಂಡಿರುವುದು ಸರಿಯಲ್ಲ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಆದರೆ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಾದ ಕ್ರಮವಲ್ಲ. ಹಾಗೂ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಿರಿಯ ಶ್ರೇಣಿ ಕೆ.ಎ.ಎಸ್ ಅಧಿಕಾರಿಯನ್ನು ನೇಮಕ ಮಾಡಿರುವುದು ಸೂಕ್ತವಲ್ಲ ಜಿಲ್ಲಾಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡಬೇಕು ಅಥವಾ ಇದಕ್ಕಾಗಿಯೆ ಪ್ರತ್ಯೇಕ ಐ,ಎ.ಎಸ್ ಆಗಿರುವ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡಬೇಕು ಮತ್ತು ಬಸವನ ಬಾಗೇವಾಡಿಯ ಸ್ಥಳೀಯ ಪುರಸಭೆಯ ಪ್ರತಿನಿಧಿಗಳನ್ನು ಪದ ನಿಮಿತ್ಯ ಸದಸ್ಯರನ್ನಾಗಿ ಬಸವನ ಬಾಗೇವಾಡಿ ಅಭಿವೃದ್ಧಿ ಮಂಡಳಿಗೆ ತೆಗೆದುಕೊಂಡಿರುವುದು ಸರಿಯಲ್ಲ ಹಿಂದಿನ ಐ.ಎ.ಎಸ್ ಅಧಿಕಾರಿಯಾಗಿದ್ದ ಹಾಗೂ ಶರಣರ ಕ್ಷೇತ್ರಗಳ ಎಲ್ಲ ಅಭಿವೃದ್ಧಿ ಪ್ರಾಧೀಕಾರದ ವಿಶೇಷ ಅಧಿಕಾರಿಯಾಗಿದ್ದ ಡಾ|| ಎಸ್.ಎಮ್. ಜಾಮದಾರ್ ಅವರನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶೇಷ ಸಲಹೆಗಾರರನ್ನಾಗಿ ನೇಮಕ ಮಾಡಬೇಕು. ಕೂಡಲೆ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಣಯಗಳನ್ನು ಕೈಬಿಡಬೇಕೆಂದು ರೈತ ಮುಖಂಡ ಹಾಗೂ ಇಂಗಳೇಶ್ವರ ಗ್ರಾಮದ ವಿಶ್ವಗುರು ಬಸವ ಮಾತಾ ಮಾದಲಾಂಬಿಕೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ
ನ್ಯಾಯವಾದಿ ಎಚ್.ಎಸ್.ಗುರಡ್ಡಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ಈರಣ್ಣ ದೇವರಗುಡಿ, ಸಾಹಿತಿ ನಾಗಣ್ಣ ಚಿಗರಿ, ಹಣಮಂತ್ರಾಯ ಗುಣಕಿ ಇದ್ದರು.