ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವಿಜಯಪುರ ಅವತಿಯಿಂದ ದಿನಾಂಕ ೨೮-೧೨-೨೦೨೪ ರಂದು ಪ್ರಕತಿ ಪರ ಸಂಘಟನೆಗಳ ಒಕ್ಕೂಟವರು ಒಂದು ದಿನದ ಬಂದ್ ಗೆ ಕರೆ ನೀಡಿರುವುದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಸದರಿ ದಿನದಂದು ಕೃಷಿ ಉತ್ಪನ್ನ ವ್ಯಾಪಾರ ವಹಿವಾಟಿಗೆ ತೋಮದರೆಯಾಗುವ ಸಂಭವವಿರುವುದರಿಂದ ರೈತ ಭಾಂದವರು ಯಾವುದೇ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯ ಪ್ರಾಂಗಣಕ್ಕೆ ತರದೆ ಇರಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.