Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ, ಮಕ್ಕಳಿಗೆ ಚಿಕ್ಕವರಿರುವಾಗಲೇ ಒಳ್ಳೆಯ ಸಂಸ್ಕಾರ ಕಲಿಸಿ ಸಂಸ್ಕಾರವಂತರನ್ನಾಗಿ ರೂಪಿಸಿದರೆ ಅವರ ಜೀವನದಲ್ಲಿ ಬೇಕಾದದ್ದನ್ನು ಸಾಧಿಸಬಹುದಾಗಿದೆ ಎಂದು ಬಿಸರಳ್ಳಿಯ ಗವಿಸಿದ್ದೇಶ್ವರ ಶಾಖಾಮಠದ ಶಿವಶಾಂತವೀರ ಮಹಾಸ್ವಾಮಿಗಳು ನುಡಿದರು.ರವಿವಾರರಂದು ಶ್ರೀ ಗ್ರಾಮದೇವತಾ ಜಾತ್ರೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಏರ್ಪಡಿಸಲಾದ ಧರ್ಮಸಭೆಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಮಕ್ಕಳಲ್ಲಿ ಒಳ್ಳೆಯ ಜ್ಞಾನ ಬೆಳೆಯುವಂತೆ ಪಾಲಕರು ಎಚ್ಚರ ವಹಿಸಬೇಕು. ನಮ್ಮ ಸಂಸ್ಕೃತಿಯನ್ನು ಅರಿತ ವಿದೇಶಿಗರು ನಮ್ಮ ದೇಶಕ್ಕೆ ಬಂದಾಗ ಕಾಲಲ್ಲಿಯ ಚಪ್ಪಲ ಬಿಟ್ಟು ಭೂತಾಯಿಗೆ ನಮಿಸಿ ಬರುವಂತಹ ಕಾರ್ಯ ನಡೆದಿದೆ. ನಮ್ಮ ಭಾರತೀಯ ಸಂಸ್ಕೃತಿಯೆಂಬುದನ್ನು ಇಲ್ಲಿಯ ಜ್ಞಾನವನ್ನೇ ಉಸಿರಾಗಿಸಿಕೊಂಡು ಬದುಕುವವರೇ ನಿಜವಾದ ಭಾರತೀಯರೆಂದರು.ಶ್ರೀ ಖಾಸ್ಗತೇಶ್ವರ ಮಠದ ಪೀಠಾದಿಪತಿ ಬಾಲಶಿವಯೋಗಿ ಸಿದ್ದಲಿಂಗದೇವರು ಮಾತನಾಡಿ, ಮಳೆಯಾಗಮನದಿಂದ ರೈತರ ಮೊಗದಲ್ಲಿ ಹರ್ಷ ಮೂಡಲಿದೆ. ರೈತರ ಖುಷಿ ಮುಂದೆ ನಮ್ಮ ಖುಷಿ ಇಲ್ಲ. ರೈತ ಇಲ್ಲದಿದ್ದರೆ ಮಣ್ಣು ತಿನ್ನುವ ಪರಿಸ್ಥಿತಿ, ಅದರಂತೆ ಸೈನಿಕ ಇಲ್ಲದಿದ್ದರೆ ದೇಶದ ರಕ್ಷಣೆಯಾಗಲು ಸಾಧ್ಯವಿಲ್ಲ ಎಂದರು.ವೇದಿಕೆಯ ಮೇಲೆ ಜಿ.ಪಂ. ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಭಾಜಪ…
ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ ಎಂದು ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಕೂಡಲೇ ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದುಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರವೀಂದ್ರ ಲೋಣಿ ಒತ್ತಾಯಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಕೇವಲ ಒಂದು ರೂ. ಮಾತ್ರ ಟ್ರಸ್ಟ್ ನೀಡಿದೆ, ಯಾವ ಅನುದಾನವನ್ನು ಸರ್ಕಾರದಿಂದ ಮಂದಿರ ನಿರ್ಮಾಣಕ್ಕೆ ಬಿಡುಗಡೆಯಾಗಿಲ್ಲ, ಆದರೆ ಜನರ ತೆರಿಗೆ ದುಡ್ಡು ಬಳಕೆ ಮಾಡಿ ಮಂದಿರ ನಿರ್ಮಾಣ ಮಾಡಿದ್ದಾರೆ ಎಂದು ತಪ್ಪು ಗ್ರಹಿಕೆ ಮಾಡುವ ಪ್ರಯತ್ನ ಮಾಡಿರುವ ಎಸ್.ಎಂ. ಪಾಟೀಲ ಗಣಿಹಾರ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದರು.ನಿಜವಾಗಿಯೂ ನಿಮಗೆ ಕಾಳಜಿ ಇದ್ದರೆ ಅಲ್ಪಸಂಖ್ಯಾತ ಬಗ್ಗೆ ಕಾಳಜಿ ಇದ್ದರೆ ವಕ್ಫ್ ಆಸ್ತಿ ಅತಿಕ್ರಮಣ ಬಗ್ಗೆ ಮಾತನಾಡಿ, ಅದರ ಬಗ್ಗೆ…
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು ಅದನ್ನು ಉಳಿಸಲು ಶ್ರಮಿಸಿದವರು, ತಮ್ಮ ಮನೆಯನ್ನು ಮಾರಿ ಪ್ರಿಂಟಿಂಗ್ ಪ್ರೆಸ್ಸನ್ನು ತೆರೆದು, ಊರೂರು ಹಾಗೂ ಮಠಮಾನ್ಯಗಳನ್ನು ಅಲೆದು ತಾಳೆಗರಿಗಳನ್ನು ಹುಡುಕಿಕೊಂಡು ಬಂದು ಶರಣರ ವಚನ ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿದವರು ವಚನ ಪಿತಾಮಹ ಡಾ. ಪ ಗು ಹಳಟ್ಟಿಯವರು, ಅವರು ನಿತ್ಯ ಸ್ಮರಣಾರ್ಹರು. ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಸಂಸ್ಕಾರಯುತ ಜೀವನವನ್ನು ನಡೆಸಬೇಕು ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಮದಾಪುರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದಿ. ಶ್ರೀ ಬಾಳಾಸಾಹೇಬಗೌಡ ಪಾಟೀಲ್ ರವರ ಸ್ಮರಣೆಗಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.ಸಮಾರಂಭದ ದಿವ್ಯ ಸಾನಿಧ್ಯವನ್ನು…
ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಕೋಹಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶೌಕತಲಿ ಇಸ್ಮಾಯಿಲ್ ಡೊಂಗರಗಾಂವ ಹಾಗೂ ಉಪಾಧ್ಯಕ್ಷರಾಗಿ ಶಿವನವ್ವ ವಿಠಲ ಡಂಬಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಒಟ್ಟು 12 ನಿರ್ದೇಶಕರ ಪೈಕಿ 7 ನಿರ್ದೇಶಕರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸೇರಿದಂತೆ ನಿರ್ದೇಶಕರ ಮಂಡಳಿಯ ಸದಸ್ಯರು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಭೇಟಿ ನೀಡಿ, ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಅಭಿನಂದನೆ ಸಲ್ಲಿಸಿ ಸತ್ಕರಿಸಿದರು.ನೂತನ ಅಧ್ಯಕ್ಷ ಶೌಕತಲಿ ಇಸ್ಮಾಯಿಲ್ ಡೊಂಗರಗಾಂವ ಅವರು ಮಾತನಾಡಿ, “ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕ ಆಡಳಿತ ನೀಡುತ್ತೇವೆ. ರೈತರಿಗೆ ಅಗತ್ಯವಿರುವ ಸಾಲ, ಕೃಷಿ ಸಂಬಂಧಿತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್‌ಡಿಇಎ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಗ್ರಂಥಾಲಯದ ವತಿಯಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ “ಲೈಬ್ರರಿ ಎಸೆನ್ಷಿಯಲ್ಸ್: ಎಂಪವರಿಂಗ್ ಯೋರ್ ಅಕಾಡೆಮಿಕ್ ಜರ್ನಿ” ಎಂಬ ಶೀರ್ಷಿಕೆಯಡಿ ಗ್ರಂಥಾಲಯ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಡಾ. ಶಿವಗಂಗಾ ಸಾಲೋಟಗಿ ಅವರು ಗ್ರಂಥಾಲಯದಲ್ಲಿರುವ ಮುದ್ರಿತ ಹಾಗೂ ಡಿಜಿಟಲ್ ಸಂಪನ್ಮೂಲಗಳು, OPAC (Online Public Access Catalogue), ಪುಸ್ತಕ ವಿತರಣೆ ಸೇವೆ, ಉಲ್ಲೇಖ ವಿಭಾಗ, ಪತ್ರಿಕೆಗಳು, ನಿಯತಕಾಲಿಕೆಗಳು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು, ಇ-ಸಂಪನ್ಮೂಲಗಳು ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ಶೈಕ್ಷಣಿಕ ಸೇವೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸಂಶೋಧನಾ ಸಾಮರ್ಥ್ಯ ಹಾಗೂ ಮಾಹಿತಿ ಸಾಕ್ಷರತೆಯನ್ನು ವೃದ್ಧಿಸುವಲ್ಲಿ ಗ್ರಂಥಾಲಯದ ಮಹತ್ವವನ್ನು ಅವರು ವಿವರಿಸಿದರು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ವಿವಿಧ ವಿಭಾಗಗಳು, ಸಂಗ್ರಹಗಳು ಹಾಗೂ ಸೇವೆಗಳ ಪರಿಚಯವಾಗುವಂತೆ ಮಾರ್ಗದರ್ಶಿತ ಗ್ರಂಥಾಲಯ ಪ್ರವಾಸ (Library Tour) ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಪರೀಕ್ಷಾ ನಿಯಂತ್ರಕರಾದ ಡಾ. ಭಾರತಿ ಮಠ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬಿ.ಬಿ.ಇಂಗಳಗಿ ಗ್ರಾಮದ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬ ಮುರಿದು ಬಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಕೂಡಲೇ ಬದಲಾಯಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗ್ರಾಮದ ಕೊಂಡಗೂಳಿ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಯಾವುದೇ ವಾಹನ ಡಿಕ್ಕಿಯಾದ ಪರಿಣಾಮ ಕಳೆದ ಐದು ದಿನಗಳಿಂದ ಮುರಿದು ಬಾಗಿದ್ದು ಬೀಳುವ ಸ್ಥಿತಿಯಲ್ಲಿದೆ.ಈ ಕುರಿತು ಗ್ರಾಮದ ಪಂಚಾಯಿತಿ ನಿಕಟಪೂರ್ವ ಸದಸ್ಯ ಸಲೀಮ್ ವಠಾರ ಮಾತನಾಡಿ, ಇಲ್ಲಿನ ಬೀಳುವ ಸ್ಥಿತಿಯಲ್ಲಿನ ಕಂಬಕ್ಕೆ ಹೆಸ್ಕಾಂ ದೇವರಹಿಪ್ಪರಗಿ ಉಪವಿಭಾಗದ ಕೋರವಾರ ಶಾಖೆಯ ಶಾಖಾಧಿಕಾರಿ ಶರಣಬಸು ಮ್ಯಾಗೇರಿ ಭೇಟಿ ನೀಡಿದ್ದು, ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ವಿಚಾರಿಸಲಾಗಿ ಕಂಬಕ್ಕೆ ಅಪಾಯ ಮಾಡಿದ ವಾಹನದ ಮೇಲೆ ದೂರು ನೀಡಿ ನಂತರ ಕಂಬ ಬದಲಾವಣೆ ಮಾಡಲಾಗುತ್ತದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ.ಅಪಾಯ, ಅನಾಹುತ ಯಾರನ್ನು ಕೇಳಿ ಬರುವುದಿಲ್ಲ. ಈಗ ಆಷಾಢ ಮಾಸದಲ್ಲಿ ಗಾಳಿ ಪ್ರಬಲವಾಗಿ ಬೀಸುತ್ತಿದ್ದು ಒಂದು ವೇಳೆ ಹಗಲಿನಲ್ಲಿ ಬಿದ್ದರೇ ಅನಾಹುತ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ರಸ್ತೆಯಲ್ಲಿ ನಿತ್ಯ ಶಾಲಾಮಕ್ಕಳು,…
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ ನೇ ಸಾಲಿನಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೪೭.೫೦ ಕೋಟಿ ರೂ. ಮಂಜೂರಾತಿ ನೀಡಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಪ್ರಮುಖವಾಗಿ, ಮಹಾತ್ಮಾ ಗಾಂಧಿಜೀ ವೃತ್ತ ಅಭಿವೃದ್ಧಿ, ಸರೋವರ (ಕೆರೆ)ಪುನಶ್ಚೇತನ ಕಾಮಗಾರಿ, ನಗರದ ಸಂಚಾರ ಸುವ್ಯವಸ್ಥೆಗೆ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳ ಅಳವಡಿಕೆ, ನಗರದ ವಿವಿಧ ಭಾಗಗಳಲ್ಲಿ ಸ್ಮಶಾನಗಳ ಅಭಿವೃದ್ಧಿ, ಪ್ರಮುಖ ರಸ್ತೆಗಳಲ್ಲಿ ಯೋಜನಾ ಬದ್ಧವಾಗಿ ಬಸ್ ಶೆಲ್ಟರ್ ಗಳ ನಿರ್ಮಾಣ, ನಗರದ ವಿವಿಧ ಭಾಗಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳು, ೫ ಕೋಟಿ ರೂ. ಮೊತ್ತವನ್ನು ಕೋಟೆ ಗೋಡೆಯ ಸುತ್ತಲೂ ಇರುವ ಕಂದಕ ಅಭಿವೃದ್ಧಿ ಕಾಮಗಾರಿ, ನಗರದ ಕೆಲವು ಭಾಗಗಳಲ್ಲಿ ಮೇಲ್ಮಟ್ಟದ ಜಲ ಸಂಗ್ರಹಗಾರ ಹಾಗೂ ಇತರೆ ಕಾಮಗಾರಿಗಳನ್ನು ಒಳಗೊಂಡು ಅಂದಾಜು ೪೭.೫೦ ಕೋಟಿ ರೂ. ಗಳಲ್ಲಿ ಕಾಮಗಾರಿ ಕೈಕೊಳ್ಳಲು ಮಂಜೂರಾತಿ ನೀಡಿ ನಿಯಮಾನುಸಾರ ಕ್ರಮ ಅನುಸರಿಸಲು…
ಯಡ್ರಾಮಿ ವಿರಕ್ತಮಠದ ಲಿಂ. ಸಿದ್ಧರಾಮ ಮಹಾಸ್ವಾಮಿಗಳ 5ನೇ ಪುಣ್ಯಾರಾಧನೆ ನಿಮಿತ್ತ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ 11ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ. ಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಐದನೇ ವರ್ಷದ ಪುಣ್ಯಾರಾಧನೆ ನಿಮಿತ್ಯವಾಗಿ ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಇಂದು ಮಂಗಳವಾರ ಪುರಾಣ ಕಾರ್ಯಕ್ರಮ ಪ್ರಾರಂಭವಾಗುವುದು.ಜು.21ರಿಂದ ಆ.1ರವರೆಗೆ 11ದಿನಗಳ ಪರ್ಯಂತರ ಶರಣ ಶ್ರೀ ಗೋಲಗೇರಿ ಗೊಲ್ಲಾಳೇಶ್ವರರ ಪುರಾಣವನ್ನು ಸಿದ್ಧಾಪುರ ಹಿರೇಮಠದ ವೇ.ಮೂ. ಶಿವಲಿಂಗಯ್ಯ ಶಾಸ್ತ್ರಿಗಳು ನಡೆಸಿಕೊಡುವರು. ವೇ.ಮೂ. ಶಿವಲಿಂಗಯ್ಯಸ್ವಾಮೀಜಿ ಹಾಗೂ ವೇ.ಮೂ.ಸಿದ್ದಲಿಂಗೇಶ್ವರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಮಂಗಳವಾರ ಸಾಯಂಕಾಲ ಪುರಾಣ ಕಾರ್ಯಕ್ರಮದಲ್ಲಿ ಮಾಗಣಗೇರಿ ಬ್ರಹನ್ಮಠದ ಪೂಜ್ಯ ಡಾ. ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಸೊನ್ನ ವಿರಕ್ತ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 11ದಿನಗಳಲ್ಲಿವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ನಾಡಿನ ವಿವಿಧ ಹರ, ಗುರು, ಚರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಮತಕ್ಷೇತ್ರದಲ್ಲಿ ೨,೯೦,೪೭೯ ಮತದಾರರಿದ್ದು, ಈ ಪೈಕಿ ೨,೬೩,೨೧೧ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಿ ಅಧಿಕಾರಿ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಶೇ.೭೭.೬೮ ರಷ್ಟು ಮತದಾರರು ಮ್ಯಾಪ್ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಮನೆ ಮನೆ ಭೇಟಿ ಹಾಗೂ ಆನ್ ಲೈನ್ ಮೂಲಕ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಡಿಜಿಟಲೀಕರಣ ಪ್ರಕ್ರಿಯೆಯು ಚುರುಕಾಗಿ ನಡೆದಿದೆ ಎಂದವರು ತಿಳಿಸಿದ್ದಾರೆ.ಒಟ್ಟು ೧,೨೫,೯೫೫ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‌ಲೈನ್ ನಲ್ಲಿ ೨,೨೭೪ ಮತದಾರರು ಸಲ್ಲಿಸಿದ್ದಾರೆ. ೧,೮೮೦ ಮತದಾರರು ಮರಣ ಹೊಂದಿದ್ದನ್ನು ದೃಢಪಡಿಸಲಾಗಿದೆ. ಹೊಸಾಗಿ ೧,೮೯೨ ಮತದಾರರು ನೋಂದಾಯಿಸಿಕೊಂಡಿದ್ದಾರೆ.೧,೧೧೬ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ೪೪ ಗೈರುಹಾಜರಾದ ಮತದಾರರು ಹಾಗೂ ೯೪ ಇತರೆ ಎಂದವರು ತಿಳಿಸಿದ್ದಾರೆ.ಎಸ್ ಐಆರ್ ಕಾರ್ಯಕ್ಕೆ ಮತದಾರರು ತಮ್ಮ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು, ಈ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘ (ರಿ) ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘ (ರಿ)ದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮೋಹನ ಕುಲಕರ್ಣಿಯವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಎಸ್. ಮಂಜುನಾಥ ನೇಮಕ ಮಾಡಿ ಆದೇಶಿಸಿದ್ದಾರೆ.ರಾಜ್ಯದಲ್ಲಿ ಸಂಘದ ಬೆಳವಣಿಗೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ಸಂಘದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಅಧ್ಯಕ್ಷ ಎಸ್.ಮಂಜುನಾಥ ಸೂಚಿಸಿದ್ದಾರೆ.
