ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ವಿಜಯಪುರ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ವಿಜಯಪುರ ಇವರ ಸಹಯೋಗದಲ್ಲಿ, ಏ.೧೫ರ ಬೆಳಿಗ್ಗೆ ೧೦ ಗಂಟೆಗೆ ನಗರದ ಬಾಗಲಕೋಟ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಅವರಣದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಈ ಸಂದರ್ಶನದಲ್ಲಿ ಪ್ರತಿಷ್ಠಿತ ಕಂಪನಿಯಾದ . SUZLON Energy Ltdಭಾಗವಹಿಸಿ, ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ಭಾರತದಾದ್ಯಂತ ಅಭ್ಯರ್ಥಿಗಳನ್ನುಆಯ್ಕೆ ಮಾಡಿಕೊಳ್ಳಲಿದೆ.
ಡಿಪ್ಲೋಮಾ ಪದವಿಯಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಮ್ಯುನಿಕೇಶನ್ ಆಟೋಮೊಬೈಲ್ ಪೂರೈಸಿದ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ತಮ್ಮ ಸ್ವ-ವಿವರ (ಖesume) ಮತ್ತು ವಿದ್ಯಾರ್ಹತೆ ಸಂಬಂಧಿತ ಮೂಲ ದಾಖಲಾತಿಗಳು ಹಾಗೂ ನೆರಳಚ್ಚು (ಝೆರಾಕ್ಸ್) ಪ್ರತಿಗಳೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗುವಂತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ ೯೭೪೧೬೫೦೫೬೮ ಹಾಗೂ ೯೯೪೫೦೦೦೭೯೩ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
