ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಾಲತವಾಡ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ೨೦೨೫-೨೬ನೆಯ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಎಸ್ಸೆಸ್ಸೆಲ್ಸಿ ಪಾಸಾದ ಹಾಗೂ ಪಿಯುಸಿ ಅನುತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಹೊಸದಿಲ್ಲಿಯ ಎನ್ ಸಿವಿಟಿಯಿಂದ ಸಂಯೋಜನೆಯಾದ ೨ ವರ್ಷಗಳ ಮತ್ತು ಹೊಸದಾಗಿ ಟಾಟಾ ಉದ್ಯೋಗದಡಿ ಪ್ರಾರಂಭ ಮಾಡಲಾಗುವ ಪ್ರತಿಷ್ಟಿತ ಕೋರ್ಸ್ ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಕಾಲೇಜ್ ಗೆ ಖುದ್ದಾಗಿ ಭೇಟಿ ಮಾಡಿ ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಭಾರ ಪ್ರಾಚಾರ್ಯರಾದ ಪೂಜಪ್ಪ ಪೂಜಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಾಲತವಾಡ, ರಾಜ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಮೊಬೈಲ್ ಸಂಖ್ಯೆ :೯೯೮೬೧೨೩೮೯೩,೯೦೦೮೬೯೨೨೭೦,೯೯೦೨೮೩೫೬೨೬, ೯೯೮೦೨೩೦೭೧೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
