ಉದಯರಶ್ಮಿ ದಿನಪತ್ರಿಕೆ
ಜಮಖಂಡಿ:: 2024-25ನೇ ಸಾಲಿನ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಜಮಖಂಡಿಯ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ರೇಖಾ ದೊಡವಾಡ ಅವರು ಪ್ರಥಮ ರ್ಯಾಂಕ್ ಪಡೆದು ನಾಲ್ಕು ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ಭಾರತೀಯ ಕಾವ್ಯಮೀಮಾಂಸೆ’ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಆರತಿ ತಳವಾರ ಅವರು ಬಂಗಾರದ ಪದಕಕ್ಕೆ ಪಾತ್ರರಾಗಿದ್ದಾರೆ.
ಇನ್ನೂ ಸವಿತಾ ಗುಡ್ಲಮನಿ ನಾಲ್ಕನೇ ರ್ಯಾಂಕ್ ಹಾಗೂ ಶೃತಿ ನಾವಿ ಐದನೇ ರ್ಯಾಂಕ್ ಪಡೆದು ಮಹಾವಿದ್ಯಾಲಯದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ.
ಈ ಸಾಧನೆಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುನಂದಾ ಎಸ್. ಶಿರೂರ, ಸಂಯೋಜಕರಾದ ಡಾ. ವೈ.ವೈ. ಕೊಕ್ಕನವರ, ಡಾ. ವಿ.ಆರ್. ದಳವಾಯಿ, ಡಾ. ಎಂ.ಎಂ. ಮಂಟೂರ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗವು ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ತಿಳಿಸಿ ಶುಭಾಶಯ ಕೋರಿದ್ದಾರೆ.

