Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಬಲಾದಿಯ ಅರ್ಥಾರ್ಥ ಸಾರವಾಡದ ಕಾಲಜ್ಞಾನ ಬಹಳ ಅದ್ಭುತವಾದದ್ದು. ಈ ಭವ್ಯ ಪರಂಪರೆಯ ಮೂಲಪುರುಷನೇ ಸಾರವಾಡದ ಚಿಕ್ಕಪ್ಪಯ್ಯ ಎಂದು ಸಾರವಾಡದ ಓಂಕಾರಯ್ಯ ಶ್ರೀಗಳು ಹೇಳಿದರು.ಅವರು ಬುಧವಾರ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಸದಾಶಿವ ಅಜ್ಜನ ಮಠದಲ್ಲಿ ಚಿಕ್ಕಬೇವನೂರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.ಸಾರವಾಡದ ಅಧಿದೇವತೆ ಚಿಕ್ಕಪ್ಪಯ್ಯ ಮೊಟ್ಟಮೊದಲು ಕಾಲಜ್ಞಾನದ ಹಾಡುಗಳನ್ನು ಬರೆದು ಶ್ರೀಕಾರ ಹಾಕಿದರು. ನಂತರ ಈ ಪರಂಪರೆಯನ್ನು ಆತನ ಕೃಪಾಪುತ್ರ ಸದಾಶಿವ ಮುತ್ಯ ಮುಂದುವರೆಸಿಕೊಂಡು ಬಂದರು ಕಾಲಜ್ಞಾನದಲ್ಲಿ ಅವರು ಹೇಳಿದ ನುಡಿಗಳು ಇಂದಿಗೂ ಸತ್ಯವಾಗಿದೆ ಎಂದು ಹೇಳಿದರು.ಅಕ್ಕಮಹಾದೇವಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಉಮೇಶ ಬಳಬಟ್ಟಿ ಮಾತನಾಡಿ, ತ್ರಿಕಾಲ ಜ್ಞಾನ ಹೊಂದಿದ ಸಾರವಾಡದ ಶ್ರೀ ಮಠದ ಶಾಖಾ ಮಠ ಚಿಕ್ಕಬೇವನೂರ ಗ್ರಾಮದಲ್ಲಿಯೂ ಪ್ರಾರಂಭವಾಗಿದ್ದು ಸಂತಸ ತಂದಿದೆ. ಗ್ರಾಮಸ್ಥರು ಪ್ರತೀ ವರ್ಷವೂ ಸಹ ಜಾತ್ರಾ ಮಹೋತ್ಸವ ನೆರವೇರಿಸುವ ಜೊತೆಗೆ ಸಾಮೂಹಿಕ ವಿವಾಹ, ಧರ್ಮ ಸಭೆಗಳನ್ನು ಏರ್ಪಡಿಸಿ ಬಡವರ ಪಾಲಿಗೆ ಆಸರೆಯಾಗಬೇಕು ಎಂದು ಸಲಹೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಸಿ.ಎಸ್.ಷಡಕ್ಷರಿ ಅವರು ಜನೇವರಿ ೩ ಶುಕ್ರವಾರದಂದು ಇಂಡಿ ನಗರಕ್ಕೆ ಆಗಮಿಸಲಿದ್ದು, ಅವರಿಗೆ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾವೂರ ಹೇಳಿದರು.ಅವರು ಗುರುವಾರ ಪಟ್ಟಣದ ಸರಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಶುಕ್ರವಾರ ಬೆಳಿಗ್ಗೆ ೧೧ ಘಂಟೆಗೆ ಇಂಡಿ ಪಟ್ಟಣದ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಅಭಿನಂದನಾ ಸಮಾರಂಭದಲ್ಲಿ ನೌಕರ ಸಂಘದ ರಾಜ್ಯಧ್ಯಕ್ಷ ಷಡಕ್ಷರಿ ಹಾಗೂ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಇಲಾಖೆಯ ನೌಕರರು ಭಾಗವಹಿಸಿ, ನಮ್ಮ ಒಳಿತಿಗಾಗಿ ಸದಾ ಹೋರಾಟ ನಡೆಸುತ್ತಿರುವ ಷಡಕ್ಷರಿ ಅವರಿಗೆ ಅಭಿನಂದಿಸೋಣ ಎಂದರು.ಎನ್‌ಪಿಸಿ ರದ್ದುಗೊಳಿಸಿ ಓಬಿಸಿ ಜಾರಿಮಾಡಬೇಕು. ಎಲ್ಲ ನೌಕರ ಕುಟುಂಬಗಳಿಗೆ ಆರೋಗ್ಯ ರಕ್ಷಣೆಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂಗಾರು ಹಂಗಾಮಿನಲ್ಲಿ ನಿಂಬೆ ಬೆಳೆಗೆ ಸೊರಗೆ ರೋಗ, ಕಜ್ಜಿ ರೋಗ, ಹಿಟ್ಟು ತಿಗಣೆಯ ಬಾಧೆ ಕಂಡು ಬರುತ್ತಿದ್ದು ಸಮಗ್ರ ನಿರ್ವಹಣಾ ಕ್ರಮ ಅನುಸರಿಸಲು ಡಾ.ಹೀನಾ ಹೇಳಿದರು.ಕೃಷಿ ವಿಜ್ಞಾನ ಕೇಂದ್ರ ಇಂಡಿ ವತಿಯಿಂದ ಸಾಲೋಟಗಿ ಗ್ರಾಮದ ಬಾಬು ಅವಟಿಯವರ ತೋಟದಲ್ಲಿ ನಿಂಬೆ ಬೆಳೆಯಲ್ಲಿ ಬಹಾರ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡುತ್ತಿದ್ದರು.ಸಮಗ್ರ ರೋಗ ನಿರ್ವಹಣೆಗೆ ಕೈ ಕೊಡರ್ಮ ಮತ್ತು ಸುಡಮನಾಸ್ ಜೈವಿಕ ರೋಗ ನಿರೋಧಕ ಇವುಗಳನ್ನು ತಿಪ್ಪಿ ಗೊಬ್ಬರ ದಲ್ಲಿ ಬೆರೆಸಿ ಮರದ ಬುಡಕ್ಕೆ ಬಿಡಬೇಕು. ಹಾಗೂ ಕಾಂಡಗಳಿಗೆ ಬೋರ್ಡೋ ಪೇಸ್ಟ ತಯಾರಿಕೆ ಮಾಡಿ ಲೇಪನ ಮಾಡುವದರಿಂದ ರೋಗವನ್ನು ಹತೋಟೆ ಮಾಡಬಹುದು ಎಂದರು.ಡಾ. ಪ್ರೇಮಚಂದ್ರ, ಡಾ. ವೀಣಾ ಚಂದಾವರಿ ಮತ್ತು ಡಾ. ಬಾಲಾಜಿ ನಾಯ್ಕ ಮಾತನಾಡಿದರು.ಶ್ರೀಕಾಂತ ಅವಟಿ, ಸೋಮಣ್ಣ ಕೆರುರ ಭೀಮಾಶಂಕರ ಅವರಾದಿ ಸೇರಿದಂತೆ ಸುಮಾರು ೨೦ ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ಅನುಸಾರ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ ರಸ್ತೆ, ಚರಂಡಿ ನಿರ್ಮಾಣ, ಪಟ್ಟಣದ ಅರಳಿಕಟ್ಟಿಯಿಂದ ಅಂಬೇಡ್ಕರ್ ವೃತ್ತದವರೆಗೆ ವಿದ್ಯುತ್ ಕಂಬ ಮತ್ತು ವಿದ್ಯುತ್ ದೀಪಾಲಂಕಾರ ಅಳವಡಿಕೆ, ಪಟ್ಟಣದ ನಂದಿ ಮಾರುಕಟ್ಟೆ ಅಭಿವೃದ್ಧಿ ಪಡಿಸುವದು, ಪಟ್ಟಣದ ರಾಜು ಪಟ್ಟಣಶೆಟ್ಟಿ ಬಡಾವಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆಗೆ ಶೆಡ್ ನಿರ್ಮಾಣ ಮತ್ತು ಸಂಗಮ ಅಗಸರ ಮನೆ ಹತ್ತಿರ ಸಿಸಿ ರಸ್ತೆ ನಿರ್ಮಾಣ,ಪಟ್ಟಣದ ಮೆಗಾ ಮಾರುಕಟ್ಟೆ ಮೊದಲನೆ ಮಹಡಿ ಮುಂದುವರೆದ ಕಾಮಗಾರಿ ಹಾಗೂ ಕೂಡಲಸಂಗಮ ಮಂಗಲ ಕಾರ್ಯಾಲಯದ ಅಭಿವೃದ್ಧಿ ಕಾಮಗಾರಿ, ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಮಾರುತಿ ಮಂದಿರ ಹತ್ತಿರ ಸಭಾ ಭವನ ನಿರ್ಮಾಣ,ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಜ.೩ ರಂದು ಬೆಳಗ್ಗೆ ೧೧ ಗಂಟೆಗೆ ಭೂಮಿ ಪೂಜೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಾಡಕಚೇರಿಯ ಆವರಣದಲ್ಲಿ ರೈತ ಬಾಂಧವರು ತೊಗರಿ ಬೆಲೆ ದಿಢೀರನೆ ಕಡಿಮೆಯಾಗಿರುವದನ್ನು ಖಂಡಿಸಿ ಗುರುವಾರ ತೊಗರಿಯನ್ನು ನೆಲಕ್ಕೆ ಚೆಲ್ಲಿ ಕೇಂದ್ರ ಸರ್ಕಾರ ತೊಗರಿ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರಧಾನಮಂತ್ರಿ ಅವರಿಗೆ ಬರೆದ ಮನವಿಯನ್ನು ಉಪತಹಸೀಲ್ದಾರ ಮೂಲಕ ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ರೂ. ೧೨ ಸಾವಿರ ಇದ್ದ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಾಲ್‌ಗೆ ರೂ. ೭,೫೫೦ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡಲು ಹೊರಟಿದೆ. ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರ ಸಲಹೆ ಮೇರೆಗೆ ದರ ನಿಗದಿಪಡಿಸಬೇಕು. ರೈತರು ಬೆಳೆ ಬೆಳೆಯಲು ಸಾಕಷ್ಟು ಶ್ರಮಿಸುವ ಜೊತೆಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಜ.೫ ರಂದು ಬೆಳಿಗ್ಗೆ ೧೧ ಗಂಟೆಗೆ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲೇಬಗಿರಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ನಾಗಮೂರ್ತೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಮುರನಾಳದ ಮಹಾ ಪರುಷ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಮಹಾಸ್ವಾಮಿಗಳು, ನಾಲತವಾಡದ ಬ್ರಹ್ಮಾಂಡಭೇರಿ ಮಠದ ಪಂಪಾಪತಿ ಮಹಾಸ್ವಾಮಿಗಳು, ವಿಜಯಪುರದ ಮೂರುಝಾವದ ಮಠದ ಮಹೇಂದ್ರ ಮಹಾಸ್ವಾಮಿಗಳು, ದೇವರ ಹಿಪ್ಪರಗಿಯ ಮೂರುಝಾವದ ಶಾಖಾ ಮಠದ ದೇವೆಂದ್ರ ಮಹಾಸ್ವಾಮಿಗಳು, ಸಾಸನೂರಿನ ಮೂರುಝಾವದ ಮಠದ ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಾವೂರಿನ ಪ್ರಭಾಕರ ಪತ್ತಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಯಚೂರಿನ ಪತ್ರಕರ್ತರಾದ ಮಾರುತಿ ಬಡಿಗೇರ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಲಕ್ಷ್ಮಿಪುರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ಉಪಾಧ್ಯಕ್ಷರಾದ ಪ್ರಮೋದ ಬಡಿಗೇರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ದಿ ಆಲಮೇಲ ಅರ್ಬನ್ ಕೋ-ಆಪರೇಟಿವ್ಹ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಬಾನುವಾರ ಬ್ಯಾಂಕಿನ ಕೇಂದ್ರ ಕಛೆರಿಯಲ್ಲಿ ಜರುಗಿತು.ಒಟ್ಟು ೧೩ ಸ್ಥಾನ ಆಡಳಿತ ಮಂಡಳಿ ನಿರ್ದೇಶಕ ಆಯ್ಕೆಯಲ್ಲಿ ಇಬ್ಬರು ಮಹಿಳಾ ಮಿಸಲಾತಿಯಲ್ಲಿ ಒಂದು ಪರಿಶಿಷ್ಟ ಜಾತಿ ಮಿಸಲಾತಿಯಲ್ಲಿ ಈ ಮೂರು ಜನ ಅವಿರೋದ ಆಯ್ಕೆಯಾಗಿದ್ದಾರೆ. ಉಳಿದ ೧೦ ಸ್ಥಾನಕ್ಕೆ ಬಾನುವಾರ ಚುನಾವಣೆ ಜರುಗಿತು. ೯೨೭ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹತೆ ಹೊಂದಿದ್ದು ಅದರಲ್ಲಿ ೭೫೦ ಜನ ಮತದಾನ ಮಾಡಿದ್ದಾರೆ. ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆವರೆಗೂ ಮತದಾನ ಮಾಡಲಾಗಿದೆ ನಂತರ ಮತ ಯಣಿಕೆ ಆರಂಬಗೊಡು ರಾತ್ರಿ ೮:೩೦ಕ್ಕೆ ವರೆಗೂ ಜರುಗಿತು.ಸಾಮಾನ್ಯ ಕ್ಷೇತ್ರ ೭ ಸ್ಥಾನಕ್ಕೆ ೯ ಜನ ಸ್ಪರ್ದಿಸಿದ್ದು ಅದರಲ್ಲಿ ಶಿವುಕುಮಾರ ಗುಂದಗಿ, ಡಾ| ರಾಜೇಶ ಪಾಟೀಲ, ಬಸವರಾಜ ಜಾನ, ಸಿದ್ದಪ್ಪ ಉಪ್ಪಿನ, ಸಿದ್ರಾಮ ಕೊಳಾರಿ, ಮಲ್ಲಿನಾಥ ಧನಶ್ರೀ, ಸಂಜಯಕುಮಾರ ಗುಂದಗಿ ಜಯಗಳಸಿದ್ದಾರೆ. ಹಿಂದೂಳಿದ ವರ್ಗ “ಅ” ಮಿಸಲಿನಲ್ಲಿ ೩ ಜನ ಸ್ಪರ್ದಿಸಿದ್ದು ಮುಖ್ತಾರಹ್ಮದ…

Read More

ನಾಳೆ ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಹಾಗೂ ಕಾಲೇಜು ಆವರಣದಲ್ಲಿ ಆರಂಭಗೊಳ್ಳಲಿದೆ.ಶುಕ್ರವಾರ ಬೆಳಿಗ್ಗೆ ೮.೦೦ ಕ್ಕೆ ಧ್ವಜಾರೋಹಣ ಸಮಾರಂಭದೊಂದಿಗೆ ಆರಂಭಗೊಳ್ಳಲಿರುವ ಸಮ್ಮೇಳನದ ಪ್ರಧಾನ ವೇದಿಕೆಗೆ ಮಡಿವಾಳ ಮಾಚಿದೇವರು, ಮುಖ್ಯ ಮಹಾದ್ವಾರಕ್ಕೆ ಮೊಹರೆ ಹಣಮಂತ್ರಾಯ, ದಾಸೋಹಮನೆಗೆ ನಟಕೇಸರಿ ಸಿದ್ರಾಮಪ್ಪ ಹಂದಿಗನೂರ ಹಾಗೂ ಪುಸ್ತಕ ಮಳಿಗೆಗೆ ಕೇಶಿರಾಜ ಎಂದು ನಾಮಕರಣ ಮಾಡಲಾಗಿದೆ.ಬೆಳಿಗ್ಗೆ ೮.೩೦ ಕ್ಕೆ ವೈವಿಧ್ಯಮಯ ಕಲಾ ತಂಡಗಳೊಂದಿಗೆ ಮಡಿವಾಳ ಮಾಚಿದೇವರ ದೇವಸ್ಥಾನದಿಂದ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದವರೆಗೆ ಸಮ್ಮೇಳಾನಾಧ್ಯಕ್ಷ ಸಾಹಿತಿ ಸಂಗಮೇಶ ಕೆರೆಪ್ಪಗೋಳ ಅವರ ಮೆರವಣಿಗೆ ಜರುಗಲಿದೆ. ನಂತರ ೧೦.೦೦ ಘಂ.ಗೆ ಶ್ರೀಮಡಿವಾಳ ಮಾಚಿದೇವರ ಮುಖ್ಯ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನೆ ಜರುಗಲಿದೆ. ನಂತರ ಕರ್ನಾಟಕ ಸುವರ್ಣ ಸಂಭ್ರಮ ೫೦ರ ನಿಮಿತ್ತ ದೇವರಹಿಪ್ಪರಗಿ ತಾಲ್ಲೂಕು ಸಾಹಿತ್ಯ ಪರಿಷತ್ತಿನಿಂದ ಗೌರವ ಸನ್ಮಾನ ಜರುಗಲಿದೆ.ಮಧ್ಯಾಹ್ನ ೧೨.೩೦ ಕ್ಕೆ ಜರುಗುವ ಶರಣ ಗೋಷ್ಠಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2024-25ನೇ ಸಾಲಿನ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್.ಡಿ ಅಧ್ಯಯನ ಪ್ರಾರಂಭಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ -I, II(ಎ), III(ಎ) ಹಾಗೂ III(ಬಿ) ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಾಂಗ ವೇತನ/ ಫೆಲೋಶಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಪ್ರಥಮ ವರ್ಷ ಪಿಎಚ್ ಡಿ ಅಧ್ಯಯನ ಮಾಡುತ್ತಿರುವ ಹೊಸ ಅಭ್ಯರ್ಥಿಗಳು ಜನವರಿ 20 ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ವಿವರಣೆಗಾಗಿ ಇಲಾಖೆ ವೆಬ್-ಸೈಟ್ https://bcwd.karnataka.gov.in ಹಾಗೂ ಮೊ.ಸಂ. 8050770004ಗ ಗೆ ಸಂರ್ಕಿನಸಬಹುದು ಎಂದು ಪ್ರಕಟಣೆ ತಿಳಿಸಿದೆ

Read More

ಸಿದ್ದೇಶ್ವರ ಶ್ರೀಗಳ ಹೆಸರಿನ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಸಿದ್ದೇಶ್ವರ ಸ್ವಾಮೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಬಾಲ್ಕಿ ಬಸವಲಿಂಗ ದೇವರು ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಸರ್ಗವನ್ನು ಪ್ರೀತಿಸುವವರು ದೇವರಿಗೆ ಹತ್ತಿರವಿದ್ದಂತೆ ಎಂಬಂತೆ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ಲೀನರಾಗಿದ್ದಾರೆ ಎಂದು ಬಾಲ್ಕಿ ಬಸವಲಿಂಗ ದೇವರು ಹೇಳಿದರು.ಗುರುವಾರ ಮಮದಾಪುರದಲ್ಲಿರುವ ಸಿದ್ದೇಶ್ವರ ಶ್ರೀಗಳ ಹೆಸರಿನ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಭಗವಂತ ನಿಸರ್ಗ ಪ್ರೀಯನಾಗಿದ್ದಾನೆ. ನಿಸರ್ಗದಲ್ಲಿಯೇ ಭಗವಂತನನ್ನು ಕಾಣಬೇಕು. ಮನುಷ್ಯನಿಗೆ ಪರಿಸರದಲ್ಲಿಯೇ ಎಲ್ಲವೂ ದೊರಕುತ್ತದೆ. ಪರಿಸರವನ್ನು ಮಾನವ ಕಾಪಾಡಿದರೇ ಮಾನವನನ್ನು ಪರಿಸರ ಕಾಪಾಡುತ್ತದೆ. ಯುವಪೀಳಿಗೆ ಸುಂದರ ನಿಸರ್ಗ ನಿರ್ಮಾಣ ಮಾಡುವಲ್ಲಿ ಶ್ರಮವಹಿಸಿದರೆ, ಬದುಕು ಸುಂದರವಾಗುತ್ತದೆ ಎಂದರು.ಕಾಖಂಡಕಿ ಗುರುದೇವಾಶ್ರಮದ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಕೇವಲ 40 ವರ್ಷಗಳಲ್ಲಿ ಪರಿಸರದಲ್ಲಿ ತಾಪಮಾನ ಹೆಚ್ಚಾಗಿದೆ. ಸದ್ಯದ ತಾಪಮಾನ ಇನ್ನಷ್ಟು ಹೆಚ್ಚು ಆಗದಂತೆ ಪ್ರತಿಯೊಬ್ಬರು ಸಸಿ ನೆಟ್ಟರೆ ಪರಿಸರದಲ್ಲಿ ಸಮತೋಲನ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಅದಕ್ಕಾಗಿ ಪರಿಸರ ಸಂರಕ್ಷಣೆ ಕುರಿತ…

Read More