ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ಅನುಸಾರ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ, ಡಾಂಬರೀಕರಣ ರಸ್ತೆ, ಚರಂಡಿ ನಿರ್ಮಾಣ, ಪಟ್ಟಣದ ಅರಳಿಕಟ್ಟಿಯಿಂದ ಅಂಬೇಡ್ಕರ್ ವೃತ್ತದವರೆಗೆ ವಿದ್ಯುತ್ ಕಂಬ ಮತ್ತು ವಿದ್ಯುತ್ ದೀಪಾಲಂಕಾರ ಅಳವಡಿಕೆ, ಪಟ್ಟಣದ ನಂದಿ ಮಾರುಕಟ್ಟೆ ಅಭಿವೃದ್ಧಿ ಪಡಿಸುವದು, ಪಟ್ಟಣದ ರಾಜು ಪಟ್ಟಣಶೆಟ್ಟಿ ಬಡಾವಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆಗೆ ಶೆಡ್ ನಿರ್ಮಾಣ ಮತ್ತು ಸಂಗಮ ಅಗಸರ ಮನೆ ಹತ್ತಿರ ಸಿಸಿ ರಸ್ತೆ ನಿರ್ಮಾಣ,ಪಟ್ಟಣದ ಮೆಗಾ ಮಾರುಕಟ್ಟೆ ಮೊದಲನೆ ಮಹಡಿ ಮುಂದುವರೆದ ಕಾಮಗಾರಿ ಹಾಗೂ ಕೂಡಲಸಂಗಮ ಮಂಗಲ ಕಾರ್ಯಾಲಯದ ಅಭಿವೃದ್ಧಿ ಕಾಮಗಾರಿ, ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಮಾರುತಿ ಮಂದಿರ ಹತ್ತಿರ ಸಭಾ ಭವನ ನಿರ್ಮಾಣ,ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಜ.೩ ರಂದು ಬೆಳಗ್ಗೆ ೧೧ ಗಂಟೆಗೆ ಭೂಮಿ ಪೂಜೆ ನೆರವೇರಿಸುವರು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
