Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ ನಡೆದಿದೆ.ಅಧ್ಯಕ್ಷರಾಗಿ ನಿಂಗನಗೌಡ ಪಾಟೀಲ್(ಮೋರಟಗಿ), ಉಪಾಧ್ಯಕ್ಷರಾಗಿ ಸಿದ್ದಯ್ಯ ಮಠಪತಿ (ದೇವಣಗಾಂವ) ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ರಾವುತಪ್ಪ ಬಿರಾದಾರ ಪ್ರಧಾನ ಕಾರ್ಯದರ್ಶಿ, ಗುರುಲಿಂಗಪ್ಪ ನೌಟಾಕ ಖಜಾಂಚಿ, ಗುರುಪಾದಪ್ಪ ನೆಲ್ಲಗಿ ಜಿಲ್ಲಾ ಪ್ರತಿನಿಧಿ ಹಾಗೂ ರಾಮನಗೌಡ ಪಾಟೀಲ, ಚೆನ್ನಪ್ಪ ಸಾಲೋಟಗಿ, ಸಿದ್ದರಾಮ ಶೀಲವಂತ, ರಮೇಶ ಬಿರಾದಾರ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಕೋಟ್ ” ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲ ಆಗುವ, ಅವರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.” – ನಿಂಗನಗೌಡ ಪಾಟೀಲನೂತನ ಅಧ್ಯಕ್ಷರು

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾವಿತ್ರಿಬಾಯಿ ಫುಲೆ ಅವರು ಅವರು ಸ್ವಾತಂತ್ರö್ಯ ಪೂರ್ವದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿದರು. ಸಗಣಿ, ಕಲ್ಲುಗಳಿಂದ ಹೊಡೆಸಿಕೊಂಡು ಅವಮಾನಗಳನ್ನು ಸಹಿಸಿದರು. ಶಿಕ್ಷಣ ನೀಡಿ ಮಾತೆಯಾದರು. ಅವರ ಕೆಲಸವು ಭಾರತದಲ್ಲಿ ಮಹಿಳಾ ಹಕ್ಕುಗಳ ಚಳುವಳಿಗೆ ಅಡಿಪಾಯ ಹಾಕಿತು, ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡಿತು ಎಂದು ಬಂಜಾರಾ ಪ್ರೌಢ ಶಾಲೆಯ ಶಿಕ್ಷಕಿ ಜೆ.ಕೆ.ರಾಠೋಡರವರು ಹೇಳಿದರು.ನಗರದ ಬಂಜಾರಾ ಪ್ರೌಢ ಶಾಲೆಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ‘ಸಾವಿತ್ರಿಬಾಯಿ ಫುಲೆ’ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕರಲ್ಲಿ ಒಬ್ಬರಾದ ‘ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ’ ಭಾರತದ ಮೊದಲ ಮಹಿಳಾ ಶಿಕ್ಷಕಿ, ಸ್ತ್ರೀವಾದಿ ಮತ್ತು ಸಮಾಜ ಸುಧಾರಕ ಅವರ ಜನ್ಮದಿನವನ್ನು ಗುರುತಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡುತ್ತ. ಸಾವಿತ್ರಿ ಬಾಯಿ ಫುಲೆ, ಸ್ವತಂತ್ರ ಪೂರ್ವ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದ ಒಬ್ಬ ಭಾರತೀಯ ಸುಧಾರಕ, ಕವಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಅವರು ಭಾರತದಲ್ಲಿ ಮೊದಲ ಮಹಿಳಾ ಶಾಲೆಯನ್ನು ತೆರೆದ ಮೊದಲ…

Read More

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಮುಂಬರುವ ೨೦೨೬ಕ್ಕೆ ಕೇಂದ್ರ ಸರ್ಕಾರ ೮ನೇ ವೇತನ ಆಯೋಗ ಜಾರಿಗೆ ತರಲಿದ್ದು, ಅದನ್ನು ಯಥಾವತ್ತಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಯಾಗುವಂತೆ ಕ್ರಮ ಜರುಗಿಸಲಾಗುವದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.ಅವರು ಶುಕ್ರವಾರ ಇಂಡಿ ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಸಭಾ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಸರಕಾರದಿಂದ ೨೫ ಆದೇಶಗಳನ್ನು ಮಾಡಿಸಿದ್ದೇನೆ. ಇದನ್ನು ಅರಿತ ರಾಜ್ಯದ ನೌಕರರು ಸಂಘಟನೆಯ ಸತ್ಯ ಮತ್ತು ನ್ಯಾಯವನ್ನು ಕಂಡು ಮತ್ತೊಮ್ಮೆ ನನಗೆ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವದಾಗಿ ಹೇಳಿದರು.ಸಂಘದ ಸಂವಿಧಾನವನ್ನು ತಿದ್ದಿ ೧೨೨ ಪುಟಗಳಿಗೆ ಹೆಚ್ಚಿಸಿದ್ದೇನೆ. ಇದರ ಅಡಿಯಲ್ಲಿ ಎಲ್ಲಾ ನೌಕರರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ. ಭ್ರಷ್ಟಾಚಾರ ಕೊನೆಗೊಳಿಸಲು ಸಂಕಲ್ಪ ತೊಡಲಾಗಿದೆ. ಸರ್ಕಾರದ ೨೫…

Read More

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಮುಂಬರುವ ೨೦೨೬ಕ್ಕೆ ಕೇಂದ್ರ ಸರ್ಕಾರ ೮ನೇ ವೇತನ ಆಯೋಗ ಜಾರಿಗೆ ತರಲಿದ್ದು, ಅದನ್ನು ಯಥಾವತ್ತಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಜಾರಿಯಾಗುವಂತೆ ಕ್ರಮ ಜರುಗಿಸಲಾಗುವದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಭರವಸೆ ನೀಡಿದರು.ಅವರು ಶುಕ್ರವಾರ ಇಂಡಿ ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಸಭಾ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕಳೆದ ೫ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಸರಕಾರದಿಂದ ೨೫ ಆದೇಶಗಳನ್ನು ಮಾಡಿಸಿದ್ದೇನೆ. ಇದನ್ನು ಅರಿತ ರಾಜ್ಯದ ನೌಕರರು ಸಂಘಟನೆಯ ಸತ್ಯ ಮತ್ತು ನ್ಯಾಯವನ್ನು ಕಂಡು ಮತ್ತೊಮ್ಮೆ ನನಗೆ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುವದಾಗಿ ಹೇಳಿದರು.ಸಂಘದ ಸಂವಿಧಾನವನ್ನು ತಿದ್ದಿ ೧೨೨ ಪುಟಗಳಿಗೆ ಹೆಚ್ಚಿಸಿದ್ದೇನೆ. ಇದರ ಅಡಿಯಲ್ಲಿ ಎಲ್ಲಾ ನೌಕರರಿಗೂ ನ್ಯಾಯ ಸಿಗುವಂತೆ ಮಾಡಲಾಗಿದೆ. ಭ್ರಷ್ಟಾಚಾರ ಕೊನೆಗೊಳಿಸಲು ಸಂಕಲ್ಪ ತೊಡಲಾಗಿದೆ. ಸರ್ಕಾರದ ೨೫…

Read More

ಇಂಡಿಯಲ್ಲಿ ಸಂಸದ ಜಿಗಜಿಣಿಗಿ ವಿರುದ್ಧ ಪ.ಜಾತಿ ಬಲ ಸಮಾಜ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಇಂಡಿ: ಬಲ ಸಮಾಜ ಮತದಾನ ಮಾಡಿಲ್ಲವೆಂದು ಬಲ ಸಮಾಜಕ್ಕೆ ಸಂಸದ ರಮೇಶ್ ಜಿಗಜಿಣಿಗಿ ಅವರು ಅವಮಾನ ಮಾಡಿದ್ದಾರೆ. ಅದು ಅವರ ರಾಜಕೀಯಕ್ಕೆ ಶೋಭೆ ತರುವಂತದಲ್ಲ. ಅದಲ್ಲದೆ ಹಳ್ಳಿಯಲ್ಲಿ ಅಣ್ಣ ತಮ್ಮ ಎಂದು ಸೌಹಾರ್ದತೆಯಿಂದ ಬಾಳ್ವೆ ಮಾಡುವ ನಮ್ಮ ಜನರಲ್ಲಿ ಬಲ, ಎಡ ಎಂದು ಒಡಕು ಭಾವನೆ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ‌ ಎಂದು ತಾಲ್ಲೂಕಿನ ಡಿ‌ ಎಸ್ಎಸ್ ಸಾಗರ ಬಣದ ಸಂಚಾಲಕ ರಮೇಶ್ ನಿಂಬಾಳಕ ಆಕ್ರೋಶ ವ್ಯಕ್ತಪಡಿಸಿದರು‌. ಕೂಡಲೇ ಬಲ ಸಮಾಜಕ್ಕೆ ಕ್ಷಮೆಯಾಚಿಸಲು ಆಗ್ರಹಿಸಿದರು.ಶುಕ್ರವಾರ ಪಟ್ಟಣದ ಖಾಸಗಿ ಹೋಟೆಲ್ ಯೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಬಿಜೆಪಿ ಸಭೆಯಲ್ಲಿ ಪತ್ರಕರ್ತರು ಸಂಸದ ರಮೇಶ್ ಜಿಗಜಿಣಿಗೆ ಅವರಿಗೆ ಕೇಳಿದ ಪ್ರಶ್ನೆಗೆ ಬಲ ಸಮಾಜದವರು ನನ್ನ ರಾಜಿನಾಮೆ ಕೇಳಲು ಅವರಿಗೇನು ಅರ್ಹತೆ‌ ಇದೆ. ಅವರೇನು ನನಗೇನು ಮತ ಹಾಕಿದ್ದಾರೇನು ಎಂದು ಬಲ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಮಾತನಾಡಿದರು.1983…

Read More

ದೇವರಹಿಪ್ಪರಗಿಯಲ್ಲಿ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ | ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ ಕರೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೇಶದಲ್ಲಿ ಶುಚಿತ್ವ ಹಾಗೂ ರುಚಿತ್ವ ಇರುವ ಏಕೈಕ ಭಾಷೆ ಕನ್ನಡವಾಗಿದೆ ಎಂದು ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವಶ್ರೀಗಳು ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.ಕನ್ನಡ ಕೇವಲ ಆಡಳಿತ ಭಾಷೆಯಾಗಿರದೇ ಕಲಿಕಾಮಾರ್ಗವೂ ಆಗಿರಬೇಕು. ನಾವು ಕನ್ನಡ ಸಾಹಿತ್ಯದ ಶಕ್ತಿ ಅರಿಯಬೇಕಿದೆ. ಕನ್ನಡಕ್ಕಿರುವ ಶಕ್ತಿ ಯಾವ ಭಾಷೆಗೂ ಇಲ್ಲ. ಅದಕ್ಕಾಗಿ ಹೃದಯ ತಟ್ಟುವ, ಮುಟ್ಟುವ ಮಾತೃಭಾಷೆ ಕನ್ನಡವನ್ನು ಪ್ರೀತಿಸಿ, ಗೌರವಿಸಿ, ನಿತ್ಯ ಜೀವನದಿ ಅಳವಡಿಸಿಕೊಳ್ಳೊಣ. ಇಂಗ್ಲೀಷ ವ್ಯಾಮೋಹದಿಂದ ನಮ್ಮ ಮಕ್ಕಳನ್ನು ಹೊರಗೆ ತರೋಣ. ಕನ್ನಡ ಭಾಷೆಗೂ ಅಗಾಧ ಶಕ್ತಿಯಿದೆ ಅದನ್ನು ಜಗತ್ತಿಗೆ ತೋರಿಸುವ ಕಾಯಕವಾಗಬೇಕೆಂದರು.ಇಂಡಿ ಉಪವಿಭಾಗಾಧಕಾರಿ ಅಬೀದ್ ಗದ್ಯಾಳ ಮಾತನಾಡಿ, ಕನ್ನಡ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಹೊಟ್ಟೆ ಹೊರೆಯುವ ಭಾಷೆಯಾಗಬೇಕು. ಹೃದಯವಂತಿಕೆಯಿಂದ ಕನ್ನಡ ಭಾಷೆ ಅರಿತರೆ ಯಶಸ್ಸು ಸಾಧ್ಯ. ಕನ್ನಡವೇ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಂದ ವಿವಿಧ ಪತ್ರಿಕಾಲಯಗಳಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.ಒಟ್ಟು ಐವರು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ತಿಂಗಳ ಅವಧಿಗೆ ವಿವಿಧ ಪತ್ರಿಕಾ ಕಚೇರಿಗಳಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಮಾಸಿಕ 20,000 ರೂ. ಶಿಷ್ಯವೇತನ ನೀಡಲಾಗುವುದು.ಅಭ್ಯರ್ಥಿಗಳು ರಾಜ್ಯದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ವಯಸ್ಸು 28 ವರ್ಷ ಮೀರಿರಬಾರದು. ಅರ್ಹತಾ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.ಆಸಕ್ತ ಅಭ್ಯರ್ಥಿಗಳು ಜನವರಿ 20 ರ ಒಳಗಾಗಿ ತಮ್ಮ ಸ್ವವಿವರ, ದೂರವಾಣಿ ಸಂಖ್ಯೆ, ಇ-ಮೇಲ್‌ ವಿಳಾಸ, ಆರ್ಥಿಕ ಸ್ಥಿತಿ, ಅಂಕಪಟ್ಟಿಗಳ ಮಾಹಿತಿಯನ್ನು ಸ್ಕ್ಯಾನ್‌ ಮಾಡಿ karnatakamediaacademy@gmail.com ಗೆ ಇ-ಮೇಲ್‌ ಮೂಲಕ ಕಳುಹಿಸಬಹುದಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಎಸ್ ಬಿ ಐ ಹಾಗೂ ಇತರ ಬ್ಯಾಂಕ್ ಅಧಿಕಾರಿ, ಗುಮಾಸ್ತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು 45 ದಿನಗಳ ತರಬೇತಿಯನ್ನು ಮೈಸೂರು ಕೇಂದ್ರ ಕಛೇರಿಯಲ್ಲಿ ನಡೆಸಲಾಗುವುದು.ಆಸಕ್ತರು ಜನವರಿ 8ರ ಸಂಜೆ 4ಗಂಟೆಯೊಳಗಾಗಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2515944ಗೆ ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರದಲ್ಲಿ ಸರ್ಕಾರ ಕೋಟಾದಡಿ ಖಾಲಿ ಉಳಿದಿರುವ ವಿಜಯಪುರದ MCA ಕೋರ್ಸಿನ ಸೀಟುಗಳ ಭರ್ತಿಗಾಗಿ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜನವರಿ 9 ಆಯಾ ಕೇಂದ್ರದಲ್ಲಿ ನಡೆಸಲಾಗುವುದು.ಅರ್ಹ ಅಭ್ಯರ್ಥಿಗಳು UUCMS ತಂತ್ರಾಂಶದಲ್ಲಿ ಜನವರಿ 3 ರಿಂದ ಜ.7ರ ವರೆಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಯೊಂದಿಗೆ ನಿಗಧಿತ ಶುಲ್ಕ ಭರಿಸಿ, ಧೃಡಿಕೃತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ನಾತಕೋತ್ತರ ಕೇಂದ್ರದ ಗಣಕ ವಿಜ್ಞಾನ ವಿಭಾಗದಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯದ ಜಾಲತಾಣ www.rcub.ac.in ಹಾಗೂ ದೂರವಾಣಿ ಸಂಖ್ಯೆ 0831-2565244ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯು ತಿಳಿಸಿದೆ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೇಂದ್ರ ಕಾರಾಗೃಹದ ತೋಟದಲ್ಲಿರುವ ಹುಣಸೇ ಹಣ್ಣಿನ ಮರಗಳಲ್ಲಿ ಬಿಟ್ಟಿರುವ ಹಣ್ಣನ್ನು ಜನವರಿ 20ರ ಬೆಳಿಗ್ಗೆ 11ಗಂಟೆಗೆ ಬಹಿರಂಗ ಹರಾಜು ಮಾಡಲು ನಿರ್ಧರಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08352-272044ಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರಕಾರಾಗೃಹ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More