ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರದಲ್ಲಿ ಸರ್ಕಾರ ಕೋಟಾದಡಿ ಖಾಲಿ ಉಳಿದಿರುವ ವಿಜಯಪುರದ MCA ಕೋರ್ಸಿನ ಸೀಟುಗಳ ಭರ್ತಿಗಾಗಿ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜನವರಿ 9 ಆಯಾ ಕೇಂದ್ರದಲ್ಲಿ ನಡೆಸಲಾಗುವುದು.
ಅರ್ಹ ಅಭ್ಯರ್ಥಿಗಳು UUCMS ತಂತ್ರಾಂಶದಲ್ಲಿ ಜನವರಿ 3 ರಿಂದ ಜ.7ರ ವರೆಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಯೊಂದಿಗೆ ನಿಗಧಿತ ಶುಲ್ಕ ಭರಿಸಿ, ಧೃಡಿಕೃತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ನಾತಕೋತ್ತರ ಕೇಂದ್ರದ ಗಣಕ ವಿಜ್ಞಾನ ವಿಭಾಗದಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯದ ಜಾಲತಾಣ www.rcub.ac.in ಹಾಗೂ ದೂರವಾಣಿ ಸಂಖ್ಯೆ 0831-2565244ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯು ತಿಳಿಸಿದೆ
