ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ಅಧ್ಯಕ್ಷರಾಗಿ ನಿಂಗನಗೌಡ ಪಾಟೀಲ್(ಮೋರಟಗಿ), ಉಪಾಧ್ಯಕ್ಷರಾಗಿ ಸಿದ್ದಯ್ಯ ಮಠಪತಿ (ದೇವಣಗಾಂವ) ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ರಾವುತಪ್ಪ ಬಿರಾದಾರ ಪ್ರಧಾನ ಕಾರ್ಯದರ್ಶಿ, ಗುರುಲಿಂಗಪ್ಪ ನೌಟಾಕ ಖಜಾಂಚಿ, ಗುರುಪಾದಪ್ಪ ನೆಲ್ಲಗಿ ಜಿಲ್ಲಾ ಪ್ರತಿನಿಧಿ ಹಾಗೂ ರಾಮನಗೌಡ ಪಾಟೀಲ, ಚೆನ್ನಪ್ಪ ಸಾಲೋಟಗಿ, ಸಿದ್ದರಾಮ ಶೀಲವಂತ, ರಮೇಶ ಬಿರಾದಾರ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಕೋಟ್
” ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲ ಆಗುವ, ಅವರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.”
– ನಿಂಗನಗೌಡ ಪಾಟೀಲ
ನೂತನ ಅಧ್ಯಕ್ಷರು

