Author: editor.udayarashmi@gmail.com

ಅರಣ್ಯದ ಮಡಿಲಲ್ಲಿ ಮಂಜಿನ ಸೆರಗು ಹೊದ್ದು ಮಿನುಗುತ್ತಿರುವ ಸಾವಳಗಿ ಗುಡ್ಡ | ಮಳೆಗಾಲದಲ್ಲಿ ಪ್ರಕೃತಿ ಪ್ರೀಯರ ಆಕರ್ಷಣೆ | ಜಮಖಂಡಿಯಿಂದ ಕೇವಲ 25 ಕಿ.ಮೀ ದೂರ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಬೆಳಗಿನ ಜಾವ ಗುಡ್ಡದ ಮೇಲೆ ಕಾಲಿಟ್ಟರೆ ಸುತ್ತಮುತ್ತಲಿನ ಬೆಟ್ಟಗಳನ್ನು ಆವರಿಸಿಕೊಂಡಿರುವ ಮಂಜಿನ ಹೊದಿಕೆ, ಪಿಸುಗುಟ್ಟುವ ತಂಗಾಳಿ, ಮಳೆಯ ಹನಿಗಳಿಂದ ಪರಿಮಳ ಬೀರುವ ಮಣ್ಣಿನ ಸುವಾಸನೆ, ಪಕ್ಷಿಗಳ ಕಲರವ, ಗಾಳಿಗೆ ತೂಗಾಡುವ ಮರಗಳು – ಇವೆಲ್ಲವೂ ಸೇರಿ ಪ್ರಕೃತಿಯ ಅದ್ಭುತ ಲೋಕವನ್ನೇ ಸೃಷ್ಟಿಸುತ್ತವೆ. ನಗರ ಜೀವನದ ಗದ್ದಲ ಮತ್ತು ಒತ್ತಡದಿಂದ ದೂರವಾಗಿ ಕೆಲ ಕ್ಷಣ ನೆಮ್ಮದಿಯಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಪ್ರಕೃತಿಯೇ ನೀಡಿರುವ ಅಮೂಲ್ಯ ಉಡುಗೊರೆಯಾಗಿದೆ.ಉತ್ತರ ಕರ್ನಾಟಕ ಎಂದರೆ ಬಿಸಿಲು, ಬರ, ಒಣ ಭೂಮಿ ಎಂಬ ಕಲ್ಪನೆ ಅನೇಕರಲ್ಲಿದೆ. ಆದರೆ ಆ ಕಲ್ಪನೆಯನ್ನು ಕ್ಷಣಾರ್ಧದಲ್ಲಿ ಬದಲಾಯಿಸುವಂತಹ ಪ್ರಕೃತಿಯ ಅಪರೂಪದ ಸ್ವರ್ಗ ಜಮಖಂಡಿ ತಾಲೂಕಿನಲ್ಲೇ ಅಡಗಿದೆ. ಅದುವೇ ಸಾವಳಗಿ ಗುಡ್ಡ.ಅರಣ್ಯದ ಮಡಿಲಲ್ಲಿ ನೆಲೆಸಿರುವ ಈ ಗುಡ್ಡ ಮಳೆಗಾಲದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೀರಶೈವ ಲಿಂಗಾಯತರು ಬಸವಣ್ಣ ಕಂಡಂತಹ ಸಮುದಾಯವಿದೆ. ಅವರ ವಿಚಾರಧಾರೆ ಮೆಚ್ಚುವಂತಹದ್ದು. ದಾಸೋಹ, ದಾನಧರ್ಮ ಸಂಸ್ಕೃತಿ ಸಂಸ್ಕಾರ ಇರುವುದೇ ವೀರಶೈವ ಲಿಂಗಾಯತರಲ್ಲಿ. ಸಂಪ್ರದಾಯ, ಅನ್ನಪ್ರಸಾದ ಶಿಕ್ಷಣದ ಮಹತ್ವ ಮೂಲಕ ಸಮಾಜದ ಜನರಿಗೆ ಒಳ್ಳೆಯದನ್ನು ಮಾಡಬೇಕು ಹಿತವನ್ನು ಬಯಸುವ ನಮ್ಮ ವೀರಶೈವ ಲಿಂಗಾಯತರು ಒಂದಾಗಬೇಕು. ಒಗ್ಗೂಡಬೇಕು ಅಂದಾಗ ಮಾತ್ರ ಸಮಾಜ ಸಮೃದ್ಧಿಯಾಗಲು ಸಾಧ್ಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಅವರು ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಸದ್ಗುರು ಅಭಿನವ ಸಿದ್ದಾರೂಢ ಸ್ವಾಮಿಗಳು ಆಶೀರ್ವಚನ ನೀಡಿ ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗೂಡುವ ಕಾರ್ಯವಾಗಬೇಕು. ಮತ್ತೊಬ್ಬರ ಮನ್ಸನ್ನು ಮುರಿಯುವಂತಹ ಕೆಲಸವಾಗಬಾರದು. ಅಭಿಯಾನ, ಸ್ವಾಭಿಮಾನ ದೊಡ್ಡದು, ಸದೃಢ ಸಮಾಜವಾಗಬೇಕು ವೀರಶೈವ…

Read More

ಲೇಖನ- ಶೀತಲ್ ಹೆಗಡೆ ಉದಯರಶ್ಮಿ ದಿನಪತ್ರಿಕೆ ‘ರಾಜನ ಮಗ ರಾಜ’ ಇದು ಮೊದಲಿನಿಂದಲೂ ನಡೆದು ಬಂದ ಘೋಷ ವಾಕ್ಯ. ಅದು ಒಂದು ರೀತಿಯಲ್ಲಿ ಸತ್ಯವೂ ಹೌದು. ಅದೆಷ್ಟೋ ರಾಜರ ಮಕ್ಕಳೇ ಮುಂದೆ ವಂಶಪಾರಂಪರ್ಯವಾಗಿ ಆಳ್ವಿಕೆ ನಡೆಸಿದ ಉದಾಹರಣೆಗಳೆಷ್ಟಿಲ್ಲ. ರಾಜ ಎಂಬ ಪದವಿ ಅವರಿಗೆ ಮಾತ್ರ ಸೀಮಿತವಾ, ಅವರದ್ದೇ ಸ್ವತ್ತಾ, ಅವರಿಗೆ ಮಾತ್ರ ಅಧಿಕಾರಕ್ಕೆ ಬರಲು ಆಸ್ಪದವಾ, ಹೀಗೆ ಹತ್ತು ಹಲವಾರು ಪ್ರಶ್ನೆಗಳು ವಿಚಾರಗಳನ್ನು ಪ್ರಸ್ತುತಕ್ಕೆ ಸಂಬಂಧಿಸಿ ಅವಲೋಕಿಸಿದಾಗ ಕಂಡುಬರುವ ಉತ್ತರ ಒಂದೇ ‘ಖಂಡಿತ ಅಲ್ಲ’.ಹಾಗಾದರೆ ಯಾವತ್ತೂ ರಾಜರ ಮಕ್ಕಳೇ ಆಳ್ವಿಕೆ ಅಧಿಕಾರವನ್ನು ನಡೆಸುವವರಾ, ಬೇರೆಯವರಿಗೆ ಅವಕಾಶ ಇಲ್ಲವಾ ಅನ್ನುವ ಮಾತಿಗೆ ಸಂಪೂರ್ಣವಾದ ಒಮ್ಮತದ ಉತ್ತರ ದೊರೆಯುವುದು ಕಷ್ಟಸಾಧ್ಯ. ಹಾಗಾದರೆ ಈ ಮಾತಿಗೆ ಉತ್ತರವಾಗಿ ನಮ್ಮಲ್ಲಿ ಅನೇಕ ದೃಷ್ಟಾಂತಗಳನ್ನು ಕಂಡಿದ್ದೇವೆ.ಇಲ್ಲಿ ರಾಜನ ಮಗನು ರಾಜನಾಗುವುದು ವಂಶಪರಂಪರೆಯಿಂದಾದರೆ, ಅವನ ಸಾಧನೆಯಿಂದಾದರೆ ಮಾತ್ರ ಅವನು ಜನಮಾನಸದಲ್ಲಿ ಅಮರವಾಗಿ ಉಳಿದು ಇತಿಹಾಸ ಸೃಷ್ಟಿಸುತ್ತಾನೆ ಹೊರತು ಕೇವಲ ರಾಜನ ಮಗನಾಗಿ ಅಲ್ಲವೆಂಬುದು ಸತ್ಯ.ರಾಜ ಅಂದರೆ ಕೇವಲ ಸಿಂಹಾಸನವನ್ನೇರಿ ದರ್ಪ…

Read More

ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಒಳಗಿನ ದನಿ ಜೋರಾದಾಗ ಹೊರಗಿನ ಶಬ್ದ ಕೇಳಿಸದು. ಈ ಮಾತಿನ ಅರ್ಥದಂತೆ ಅದೆಷ್ಟೋ ಬಾರಿ ಈ ಅನುಭವ ನಮಗೆ ಆಗಿಯೇ ಇರುತ್ತದೆ.”ಏನಪ್ಪಾ.. ಇಷ್ಟು ಹೊತ್ತು ಕರೆದರೂ ಕೇಳಿಸಲಿಲ್ಲವಾ? ಆವಾಗಿನಿಂದ ಕೂಗುತ್ತಿರುವೆ” ಎಂದು ಕೆಲವೊಮ್ಮೆ ಯಾರಾದರೂ ಕೇಳಿದಾಗ “ಅಯ್ಯೋ ಹೌದಾ! ಕ್ಷಮಿಸಿ ನಾನು ಯಾವುದೋ ವಿಚಾರದಲ್ಲಿದ್ದೆ” ಎಂದು ಉತ್ತರಿಸಿರುತ್ತೇವೆ.ಇದು ಕೇವಲ ಮಾತಲ್ಲ, ಮಾನವ ಮನಸ್ಸಿನ ಅದ್ಭುತ ಕಾರ್ಯವೈಖರಿ.ಮನುಷ್ಯನ ಕಿವಿಗಳು ಶಬ್ದವನ್ನು ಕೇಳುತ್ತವೆ. ಆದರೆ ಆ ಶಬ್ದಕ್ಕೆ ಅರ್ಥ ಕೊಡುವುದು ಮೆದುಳು. ಮೆದುಳು ಯಾವ ವಿಷಯದ ಮೇಲೆ ಆಳವಾಗಿ ಕೇಂದ್ರೀಕೃತವಾಗುತ್ತದೆಯೋ ಆಗ ಉಳಿದ ಮಾಹಿತಿಯನ್ನು ಕೆಲವೊಮ್ಮೆ ಕಡೆಗಣಿಸುತ್ತದೆ. ಅದಕ್ಕೇ ಅತಿಯಾದ ಚಿಂತೆ, ದುಃಖ, ಭಯ ಅಥವಾ ಆಳವಾದ ಆಲೋಚನೆಯಲ್ಲಿ ಮುಳುಗಿರುವಾಗ ಹೊರಗಿನಿಂದ ಯಾರಾದರೂ ಕರೆದರೂ ತಕ್ಷಣ ಗಮನಕ್ಕೆ ಬರುವುದಿಲ್ಲ. ಮನಸ್ಸಿನೊಳಗಿನ ಸಂಭಾಷಣೆ ಕೆಲವೊಮ್ಮೆ ಹೊರಗಿನ ಜಗತ್ತಿಗಿಂತ ಜೋರಾಗಿರುತ್ತದೆ.ನಮ್ಮೊಳಗೆ, ಮುಂದೇನು? ಏಕೆ ಹೀಗಾಯಿತು? ನಾನು ಏನು ಮಾಡಬೇಕು? ಎಂಬ ಚಿಂತನೆಗಳು ಮನಸ್ಸನ್ನು ಸಂಪೂರ್ಣವಾಗಿ ಕೆಲವೊಮ್ಮೆ…

Read More

ಸಿದ್ಧಾಪುರ ಗ್ರಾಮದಲ್ಲಿ “ವಿಬಿ ಜಿ ರಾಮ ಜಿ” ಜನ ಜಾಗೃತಿ | ತಾಪಂ ಇಓ ಆನಂದಕುಮಾರ ಮ್ಯಾಗೇರಿ ಕರೆ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಸಿದ್ಧಾಪುರ ಕೆ ಗ್ರಾಮ ಪಂಚಾಯತಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಹಮ್ಮಿಕೊಂಡ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ – ವಿಬಿ ಜಿ ರಾಮ ಜಿ” ಯೋಜನೆಯ ಜನಜಾಗೃತಿ ಕಾರ್ಯಕ್ರಮಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಆನಂದಕುಮಾರ ಮ್ಯಾಗೇರಿ ಚಾಲನೆ ನೀಡಿ ಮಾತನಾಡಿದರು.ಯೋಜನೆಯ ಕುರಿತು ಮಾತನಾಡಿದ ಅವರು, ಮನರೇಗಾ ಬದಲಾಗಿ ಈ ಯೋಜನೆಯು ಜುಲೈ 01 ರಿಂದ ಆರಂಭವಾಗಿದೆ. ಆದ್ದರಿಂದ ಈ ಯೋಜನೆಯ ಕುರಿತು ಮನೆ ಮನೆಗೂ ಮಾಹಿತಿಯನ್ನು ತಲುಪಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಎಲ್ಲಾ ಅಧಿಕಾರಿಗಳು & ಸಿಬ್ಬಂದಿಗಳು ಕ್ರೀಯಾಶೀಲರಾಗಿ ಈ ಜನಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಮಾಡಬೇಕು ಎಂದರು.ಈ ಹೊಸ ಯೋಜನೆಯಡಿ ಗ್ರಾಮೀಣ ಕೂಲಿಕಾರರಿಗೆ ಹಲವು ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಮುಖ್ಯವಾಗಿ ಕೂಲಿ ಏರಿಕೆ, ಹಿಂದೆ ಇದ್ದ ರೂ…

Read More

ವಿಜಯಪುರದಲ್ಲಿ ನಡೆದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಇದೊಂದು ಮಹತ್ವಾಕಾಂಕ್ಷಿಯ ಕಾರ್ಯಕ್ರಮ ಜಿಲ್ಲೆಯಲ್ಲಿನ ಎಲ್ಲ ನರರೋಗ ಸಂಬಂಧಿತ ಕಾಯಿಲೆಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ ಸಹಕಾರಿಯಾಗಲಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.ಹಿಂದಿನ ಕಾಲದ ಜನರು ತಮ್ಮ ಜೀವನಶೈಲಿ ಚೆನ್ನಾಗಿ ಕಾಪಾಡಿಕೊಳ್ಳುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ, ಕೆಲಸ ಕಾರ್ಯಗಳನ್ನು ನಿಯಮಿತವಾಗಿ ನಿರ್ವಹಿಸುತ್ತಿದ್ದರು. ಆ ಕಾರಣಕ್ಕಾಗಿ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರಿಗೆ ಕಾಯಿಲೆಗಳು ಬಾಧಿಸುತ್ತಿರಲಿಲ್ಲ. ಇಂದಿನ ಪೀಳಿಗೆಯು ಜೀವನಶೈಲಿ ಬದಲಾಯಿಸಿಕೊಳ್ಳುವುದರ ಮೂಲಕ ಮೆದುಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಬುಧವಾರ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

Read More

ಮೂಕ ಜೀವಿಗೆ ಮಾನವೀಯ ವಿದಾಯ | ತದ್ದೇವಾಡಿಯಲ್ಲಿ ಮಂಗನಿಗೆ ಅದ್ಧೂರಿ ಅಂತಿಮ ಸಂಸ್ಕಾರ | ಗ್ರಾಮಸ್ಥರಿಂದ ವಿಶಿಷ್ಟ ಗೌರವ ಉದಯರಶ್ಮಿ ದಿನಪತ್ರಿಕೆ ವರದಿ: ರಾಜಶೇಖರ ಡೋಣಜಮಠಚಡಚಣ: ಮೂಕ ಜೀವಿಗಳ ಮೇಲಿನ ಪ್ರೀತಿ, ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಅಪರೂಪದ ಘಟನೆಯೊಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿ ಮರಣ ಹೊಂದಿದ ಮಂಗನಿಗೆ (ವಾನರನಿಗೆ) ಗ್ರಾಮಸ್ಥರು ಮನುಷ್ಯರಿಗೆ ಸಲ್ಲಿಸುವ ರೀತಿಯಲ್ಲಿಯೇ ಗೌರವಪೂರ್ವಕವಾಗಿ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಿ, ಸಂಪ್ರದಾಯಬದ್ಧವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಮಂಗವು ಗ್ರಾಮದ ಜನರೊಂದಿಗೆ ಬೆರೆತು ಬದುಕುತ್ತಿತ್ತು. ಗ್ರಾಮಸ್ಥರು ಅದನ್ನು ತಮ್ಮ ಕುಟುಂಬದ ಸದಸ್ಯನಂತೆಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಂಗವು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಯಿತು. ಬಳಿಕ ಗ್ರಾಮಸ್ಥರು ಸೇರಿ ಮಂಗನ ಪಾರ್ಥಿವ ಶರೀರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹೂವಿನ ಹಾರಗಳಿಂದ ಹಾಗೂ ಹೊಸ ಬಟ್ಟೆಗಳಿಂದ ಅಲಂಕರಿಸಿದರು.ನಂತರ ಗ್ರಾಮದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೨೦೨೬-೨೭ನೇ ಸಾಲಿನ ಸಾಮಾನ್ಯ-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅರ್ಜಿ ಆಹ್ವಾನಿಸಿದೆ.ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ, ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಸೇವಾಸಿಂಧು Sevಚಿsiಟಿಜhu.ಏಚಿಡಿಟಿಚಿಣಚಿಞಚಿ.gov.iಟಿ ಮುಖಾಂತರ ಜು. ೨೨ ರಿಂದ ಆ. ೨೦ ರ ಸಂಜೆ ೫.೩೦ ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.ಸರ್ಕಾರದ ಮಾರ್ಗಸೂಚಿಯನ್ನು ಸೇವಾಸಿಂದು :ತಿತಿತಿ.ಏಚಿಟಿಟಿಚಿಜಚಿsiಡಿi.ಏಚಿಡಿಟಿಚಿಣಚಿಞಚಿ.gov.iಟಿ ಪೋರ್ಟಲ್ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೦-೨೪೪೧೦೫೭೪, ೦೮೦೨೨೨೧೩೫೩೦, ೯೯೮೬೮೩೭೦೩೭, ೦೮೦೨೨೨೪೧೩೨೫, ವಿಜಯಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ: ೦೮೩೫೨-೨೫೧೨೬೧ ಮತ್ತು ವಿಜಯಪುರ ಜಿಲ್ಲೆಯ ವ್ಯವಸ್ಥಾಪಕರು, ಸೇವಾಸಿಂಧು ಇವರನ್ನು ಸಂಪರ್ಕಿಸಬಹುದಾಗಿದೆ.ನಿಗದಿತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವರ್ಕ್ಶಾಪ್ ಕ್ಯಾಲ್ಕುಲೇಷನ್ ಅಂಡ್ ಸೈನ್ಸ್ ಹಾಗೂ ಎಲೆಕ್ಟ್ರಿಷಿಯನ್ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಇಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಬಿ. ಇ ಅಥವಾ ಡಿಪ್ಲೊಮಾ ಎಲೆಕ್ಟ್ರಿಕಲ್,ಮೆಕ್ಯಾನಿಕಲ್ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ನಾಲತವಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಖುದ್ದಾಗಿ ಭೇಟಿ ನೀಡಬಹುದಾಗಿದೆ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೋ ೯೯೮೬೧೨೩೮೯೩, ೯೦೦೮೬೯೨೨೭೦ ಹಾಗೂ ೮೦೫೦೩೨೨೯೮೦ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರದಲ್ಲಿ ಬೆಳೆ ವಿಮೆ ಜಾಗೃತಿ ವಾಹನಗಳಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ. ಆನಂದ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ ಜಿಲ್ಲೆಯ ರೈತರಲ್ಲಿ ಬೆಳೆ ವಿಮೆ ಯೋಜನೆ ಕುರಿತು ವ್ಯಾಪಕ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಬೆಳೆ ವಿಮೆ ಜಾಗೃತಿ ವಾಹನಗಳಿಗೆ ಜಿಲ್ಲಾಧಿಕಾರಿಗಳಾದ ಡಾ. ಆನಂದ್ ಕೆ. ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಜಿಲ್ಲಾದ್ಯಾಂತ ವ್ಯಾಪಕ ಜಾಗೃತಿ ಮೂಡಿಸುವ ಸಂಚಾರಿ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕೃಷಿಯು ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿಯಾಗಿದ್ದು, ಅನಿರೀಕ್ಷಿತ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಗಾಳಿ, ಕೀಟ ಹಾಗೂ ರೋಗಬಾಧೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕವಾಗಿ ಆಸರೆಯಾಗುವ ಪ್ರಮುಖ ಯೋಜನೆಯೇ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪುಸಕ್ತ…

Read More