Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಬಂಜಾರ ಸಮಾಜ ಬಾಂಧವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಂಜಾರ ಸಮಾಜ ಬಾಂಧವರ ಬೇಡಿಕೆಯನ್ನು ಈಡೇರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕರ್ನಾಟಕ ಬಂಜಾರ ನಿಗಮದ ಮಾಜಿ ನಿರ್ದೇಶಕ, ನ್ಯಾಯವಾದಿ ಮಲ್ಲಿಕಾರ್ಜುನ ನಾಯಕ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿದ ಬಂಜಾರ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸಚಿವ ಸಂಪುಟದಲ್ಲಿ ಬಂಜಾರ ಸಮಾಜದ ಸಚಿವರು ಇಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರು, ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ನಮ್ಮ ಸಮಾಜಕ್ಕೆ ಸೇರಿದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಇಲ್ಲವೇ ಪ್ರಕಾಶ ರಾಠೋಡ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.ವಿಜಯಪುರ ಜಿಲ್ಲೆಯ ಮುತ್ಸದ್ದಿ ರಾಜಕಾರಣಿಯಾಗಿರುವ ಪ್ರಕಾಶ ರಾಠೋಡ ಅವರ ಎಂಎಲ್‌ಸಿ ಅವಧಿ ಮುಕ್ತಾಯವಾಗಿದೆ. ಪ್ರಕಾಶ ರಾಠೋಡ ಅವರ ತಂದೆ ದಿ.ಕೆ.ಟಿ.ರಾಠೋಡ ಅವರು ಸೇರಿದಂತೆ ಪ್ರಕಾಶ ರಾಠೋಡ ಅವರು ಬಂಜಾರ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಸರ್ಕಾರ ಮತ್ತೊಮ್ಮೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇತ್ತೀಚೆಗೆ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಶಿವನಗೌಡ ಬಿರಾದಾರ ಆಯ್ಕೆಯಾದ ಹಿನ್ನಲೆಯಲ್ಲಿ ಶುಕ್ರವಾರ ವಿಜಯಪುರ ನಗರದಲ್ಲಿ ಜವಳಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಸವೇಶ್ವರ ಕೋ ಅಪ್ರೇಟಿವ್ಹ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಸವರಾಜ ಸೋಂಪುರ(ಮನಗೂಳಿ), ಶಂಕರಗೌಡ ಪಾಟೀಲ, ಬಸನಗೌಡ ಚಿಕ್ಕೊಂಡ, ಸಂಗನಗೌಡ ಚಿಕ್ಕೊಂಡ , ಶೇಖರಗೌಡ ಬಿರಾದಾರ, ಬಸನಗೌಡ ಪಾಟೀಲ ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬಸವನಬಾಗೇವಾಡಿ ಬ್ಲಾಕಿನ ಬೀದಿ ಬದಿ ವ್ಯಾಪಾರಿಗಳ ವಿಭಾಗದಿಂದ ಬಸವೇಶ್ವರ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಮುತ್ತು ನಾಲತವಾಡ, ಉಪಾಧ್ಯಕ್ಷ ಮಹ್ಮದತೌಫಿಕ ಶಾಬಾದಿ ಮಾತನಾಡಿ, ಸ್ವತಂತ್ರ ಸ್ವಾವಲಂಬಿಗಳಾಗಿ ಬದುಕು ನಡೆಸಲು ಬೀದಿ ಬದಿ ವ್ಯಾಪಾರ ಅನೇಕರ ಬಾಳಿಗೆ ಆಶಾಕಿರಣವಾಗಿದೆ. ಶ್ರಮದ ಬದುಕಿನಲ್ಲಿ ಸಾರ್ಥಕತೆಯಿದೆ. ಸಾರ್ಥಕತೆಯ ಶ್ರಮ ಜೀವನ ನಡೆಸುತ್ತಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳಿಗೆ ನಮ್ಮ ವಿಭಾಗವು ಸದಾ ಸ್ಪಂದಿಸಿ ಕಾರ್ಯನಿರ್ವಹಿಸಲಿದೆ ಎಂದರು.ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ವಿಭಾಗದ ಉಪಾಧ್ಯಕ್ಷ ಮಹಿಬೂಬ ಅತ್ತಾರ, ಬೀದಿ ಬದಿ ವ್ಯಾಪಾರಿಗಳಾದ ಮುಕ್ತುಮ ಹೊಕ್ರಾಣಿ, ಜಾಕೀರ ಬೆಲೀಪ್, ಮುಕ್ತುಮ ಬೈರವಾಡಗಿ, ಮೋಹನ ರಾಠೋಡ, ವಿಜಯ ಶೆಟ್ಟಿ, ಯಲ್ಲವ್ವ ಪೂಜಾರಿ, ಅಮೀಜಾ ಅತ್ತಾರ, ಹುಸೇನಬಿ ಜಮಖಂಡಿ, ಶಕೀನಾ ಬಾಗವಾನ, ಸೈನಜಾ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಕೀಲರ ಸಂಘದ ಸದಸ್ಯ ಈರಣ್ಣ ಶಂಕರಗೌಡ ವಡವಡಗಿ (ಗುಳಬಾಳ) ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ವಕೀಲರು ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.ವಕೀಲರು ನ್ಯಾಯಾಲಯದ ಹತ್ತಿರದ ವಿಜಯಪುರ ರಸ್ತೆಯಲ್ಲಿ ರಸ್ತೆ ತಡೆದು ಕೆಲಹೊತ್ತು ಪ್ರತಿಭಟನೆ ನಡೆಸಿದರು.ಘಟನಾ ಸ್ಥಳಕ್ಕೆ ಆಗಮಿಸಿದ ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ, ಪೊಲೀಸ್ ಇನ್ಸಪೆಕ್ಟರ್ ಗುರುಶಾಂತ ದಾಶ್ಯಾಳ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಸ್ತೆ ತಡೆಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ತಡೆ ನಿಲ್ಲಿಸಿ ಎಂದು ವಕೀಲರಿಗೆ ಮನವಿ ಮಾಡಿ ಮನವೊಲಿಸಿದರು.ನಂತರ ನ್ಯಾಯಾಲಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ವಕೀಲರಾದ ವಿ.ಬಿ.ಮರ್ತುರ, ಮಲ್ಲಿಕಾರ್ಜುನ ದೇವರಮನಿ, ಎಸ್.ಎಸ್.ಕೊಳೂರ, ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯತ್ತಿವೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಕೀಲರ ಸಂಘದ ಸದಸ್ಯ ಈರಣ್ಣ ವಡವಡಗಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ…
ನವದೆಹಲಿಯ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ಸಿದ್ಧಗೊಂಡಿರುವ ರಾಜ್ಯದ ಸ್ತಬ್ಧಚಿತ್ರ ಉದಯರಶ್ಮಿ ದಿನಪತ್ರಿಕೆ ನವದೆಹಲಿ: ಜನವರಿ ೨೬ರ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನವದೆಹಲಿಯ ‘ಕರ್ತವ್ಯ ಪಥ’ದಲ್ಲಿ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ” ಲಕ್ಕುಂಡಿಯ ಶಿಲ್ಪ ಕಲೆಯ ತೊಟ್ಟಿಲು” ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರದ ಅಂತಿಮ ಹಂತದ ಸಿದ್ಧತೆಗಳು ಪೊಲೀಸ್ ಬಿಗಿಭದ್ರತೆ ಇರುವ ರಕ್ಷಣಾ ಮಂತ್ರಾಲಯದ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ಭರದಿಂದ ಸಾಗುತ್ತಿದೆ.ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಎಂ.ಇಮಕೊಂಗ್ಲ್ ಜಮೀರ್ ಅವರು ರಾಷ್ಟ್ರೀಯ ರಂಗಶಾಲಾ ಶಿಬಿರಕ್ಕೆ ಶುಕ್ರವಾರ (ಜ.೨೪) ರಂದು ಭೇಟಿ ನೀಡಿ, ಸ್ತಬ್ಧಚಿತ್ರವನ್ನು ವೀಕ್ಷಿಸಿ,ಮೆಚ್ಚುಗೆ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಧಿಕಾರಿಗಳು ರಾಜ್ಯ ಸ್ತಬ್ಧಚಿತ್ರದ ಕುರಿತ ಮಾಹಿತಿ ವಿವರ ನೀಡಿದರು.ಈ ಸಂದರ್ಭ ನವದೆಹಲಿಯ ಕರ್ನಾಟಕ ಭವನದ ಸಹಾಯ ನಿವಾಸಿ ಆಯುಕ್ತರೂ ಆದ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಸಿ.ಮೋಹನ ಕುಮಾರ್ , ವ್ಯವಸ್ಥಾಪಕರಾದ ಕೆ.ಆರ್.ವೆಂಕಟೇಶ, ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕಿ ಎಂ.ಶಾಲಿನಿ,ಪ್ರತಿರೂಪಿ ಸಂಸ್ಥೆಯ ರಾಜಕುಮಾರ್ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಲು ಮತದಾರರ ಪಾತ್ರ ಬಹು ಮುಖ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಹೇಳಿದರು.೧೫ನೇ ರಾಷ್ಟ್ರೀಯ ಮತದಾರರ ದಿನಾಚರಣೆ ೨೦೨೫ ಅಂಗವಾಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿವರ್ಷ ಭಾರತದಲ್ಲಿ ಲಕ್ಷಾಂತರ ಜನರು ಹೊಸದಾಗಿ ಮತದಾನದ ಹಕ್ಕನ್ನು ಹೊಂದುವರು. ಅಂತಹ ಮತದಾರರಿಗೆ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.ಮತದಾನದಲ್ಲಿ ಹೆಚ್ಚು ಜನರು ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವ ಅಗತ್ಯವಿದೆ. ಚುನಾವಣೆ ಬಂದಾಗ ಮತದಾರರನ್ನು ಜಾಗ್ರತಗೊಳಿಸುವ ಕಾರ್ಯಗಳು ನಿರಂತರವಾಗಿ ಜರುಗಬೇಕು ಎಂದು ಅವರು ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಶಂಕರಗೌಡ ಸೋಮನಾಳ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ಕಾರ್ಯದರ್ಶಿಗಳಾದ ಡಾ. ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ,…
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೈಕ್ರೊ ಫೈನಾನ್ಸ್ ಹಾಗೂ ಚಿಟ್ ಫಂಡ್ಸ್ ಹಾವಳಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರದಂದು ಜರುಗಿದ ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಂತೆೆ ವಿಜಯಪುರ ಜಿಲ್ಲೆಯಲ್ಲಿಯೂ ಕೂಡ ಕೇಲವು ಫೈನಾನ್ಸ್ ಕಂಪನಿಗಳಿಂದ ತಡರಾತ್ರಿ ವರೆಗೂ ಮನೆಗೆ ಬಂದು ಕಂತು ತುಂಬಲು ಹಾಗೂ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವ ಕುರಿತು ಇಲ್ಲಿಯ ಮಹಿಳೆಯರು ದೂರನ್ನು ನೀಡಿದ್ದು, ಈ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಇಲಾಖೆಗಳಲ್ಲಿ ಆತಂರಿಕ ದೂರು ಸಮೀತಿ ರಚಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಕಳೆದ ಎರಡು ದಿನಗಳಿಂದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ, ಮಹಿಳೆಯರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ೨೦೨೪-೨೫ನೇ ಸಾಲಿನ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಸಣ್ಣ ಉದ್ಯಮಿದಾರರಿಗೆ ಉತ್ತೇ್ತಜಿಸಲು ೫ ಲಕ್ಷದ ವರೆಗಿನ ಸಹಾಯ ಸೌಲಭ್ಯಕ್ಕೆ ಪ.ಜಾ/ಪ.ಪಂ ದವರಿಂದ ಅರ್ಜಿ ಆಹ್ವಾನಿಸಿದೆ.ಈ ಯೋಜನೆಯಡಿ ಅಭ್ಯರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಿ ಮೋಬೈಲ್ ಕ್ಯಾಂಟಿನ್ ವಾಹನ ಖರೀದಿಸಲು ೫ಲಕ್ಷ ರೂ. ಸಹಾಯ ಧನ ನೀಡಲಾಗುವುದು. ತರಬೇತಿ ಕಾರ್ಯಾನುಷ್ಠನಕ್ಕೆ ಜಿಲ್ಲೆಯಲ್ಲಿ ೩ ಪ.ಪಂ ಮತ್ತು ೭ ಪ.ಜಾತಿ ಅಭ್ಯರ್ಥಿಗಳ ಗುರಿ ನಿಗದಿ ಪಡಿಸಲಾಗಿದೆ.ಆಸಕ್ತರು ಜ.೩೧ರ ಒಳಗಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೦೮೩೫೨-೨೫೦೩೫೯ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಪಿಯುಸಿ, ಡಿಪ್ಲೋಮಾ, ಐ.ಟಿ.ಐ, ಪದವಿ ಮತ್ತು ಸ್ನಾತಕೋತರ ಕೋರ್ಸುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಎಸ.ಎಸ್.ಪಿ ಪೋರ್ಟ್ನಲ್ಲಿ ಶುಲ್ಕ ಮರುಪಾವತಿಗೆ ಯೋಜನೆಯಡಿ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಜ.೩೧ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.ಅರ್ಹ ಅಭ್ಯರ್ಥಿಗಳು : https://ssp.postmatric.karnataka.gov.inನಲ್ಲಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ :https://dom.karnataka.gov.inಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ “ಯುವನಿಧಿ” ಯೋಜನೆಯಡಿ ‘ವಿಶೇಷ ನೊಂದಣಿ ಅಭಿಯಾನ’ವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಫೆ. ೧೫ರ ವರೆಗೆ ಹಮ್ಮಿಕೊಳ್ಳಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಲಿಗೆ ಹಾಗೂ ದೂ.ಸಂ ೦೮೩೫೨-೨೫೦೩೮೩ಗೆ ಸಂಪರ್ಕಿಸಬಹುದು.
