ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರವಾಸೋದ್ಯಮ ಇಲಾಖೆಯ ವತಿಯಿಂದ ೨೦೨೪-೨೫ನೇ ಸಾಲಿನ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಸಣ್ಣ ಉದ್ಯಮಿದಾರರಿಗೆ ಉತ್ತೇ್ತಜಿಸಲು ೫ ಲಕ್ಷದ ವರೆಗಿನ ಸಹಾಯ ಸೌಲಭ್ಯಕ್ಕೆ ಪ.ಜಾ/ಪ.ಪಂ ದವರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಅಭ್ಯರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಿ ಮೋಬೈಲ್ ಕ್ಯಾಂಟಿನ್ ವಾಹನ ಖರೀದಿಸಲು ೫ಲಕ್ಷ ರೂ. ಸಹಾಯ ಧನ ನೀಡಲಾಗುವುದು. ತರಬೇತಿ ಕಾರ್ಯಾನುಷ್ಠನಕ್ಕೆ ಜಿಲ್ಲೆಯಲ್ಲಿ ೩ ಪ.ಪಂ ಮತ್ತು ೭ ಪ.ಜಾತಿ ಅಭ್ಯರ್ಥಿಗಳ ಗುರಿ ನಿಗದಿ ಪಡಿಸಲಾಗಿದೆ.
ಆಸಕ್ತರು ಜ.೩೧ರ ಒಳಗಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೦೮೩೫೨-೨೫೦೩೫೯ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.