ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಬಸವನಬಾಗೇವಾಡಿ ಬ್ಲಾಕಿನ ಬೀದಿ ಬದಿ ವ್ಯಾಪಾರಿಗಳ ವಿಭಾಗದಿಂದ ಬಸವೇಶ್ವರ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಮುತ್ತು ನಾಲತವಾಡ, ಉಪಾಧ್ಯಕ್ಷ ಮಹ್ಮದತೌಫಿಕ ಶಾಬಾದಿ ಮಾತನಾಡಿ, ಸ್ವತಂತ್ರ ಸ್ವಾವಲಂಬಿಗಳಾಗಿ ಬದುಕು ನಡೆಸಲು ಬೀದಿ ಬದಿ ವ್ಯಾಪಾರ ಅನೇಕರ ಬಾಳಿಗೆ ಆಶಾಕಿರಣವಾಗಿದೆ. ಶ್ರಮದ ಬದುಕಿನಲ್ಲಿ ಸಾರ್ಥಕತೆಯಿದೆ. ಸಾರ್ಥಕತೆಯ ಶ್ರಮ ಜೀವನ ನಡೆಸುತ್ತಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳಿಗೆ ನಮ್ಮ ವಿಭಾಗವು ಸದಾ ಸ್ಪಂದಿಸಿ ಕಾರ್ಯನಿರ್ವಹಿಸಲಿದೆ ಎಂದರು.
ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ವಿಭಾಗದ ಉಪಾಧ್ಯಕ್ಷ ಮಹಿಬೂಬ ಅತ್ತಾರ, ಬೀದಿ ಬದಿ ವ್ಯಾಪಾರಿಗಳಾದ ಮುಕ್ತುಮ ಹೊಕ್ರಾಣಿ, ಜಾಕೀರ ಬೆಲೀಪ್, ಮುಕ್ತುಮ ಬೈರವಾಡಗಿ, ಮೋಹನ ರಾಠೋಡ, ವಿಜಯ ಶೆಟ್ಟಿ, ಯಲ್ಲವ್ವ ಪೂಜಾರಿ, ಅಮೀಜಾ ಅತ್ತಾರ, ಹುಸೇನಬಿ ಜಮಖಂಡಿ, ಶಕೀನಾ ಬಾಗವಾನ, ಸೈನಜಾ ಯಾದವಾಡ ಸೇರಿದಂತೆ ಇತರರು ಭಾಗವಹಿಸಿದ್ದರು.