Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮನಗೌಡ ಜಯಣ್ಣ ಕೋಳೂರ (ಪಡೇಕನೂರ) ಹಾಗೂ ಉಪಾಧ್ಯಕ್ಷರಾಗಿ ಮನೋಹರ ದೇವೇಂದ್ರಪ್ಪ ಬಡಿಗೇರ್ (ಮಡಿಕೇಶ್ವರ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಪಿಕೆಪಿಎಸ್ ಸರ್ವ ಸದ್ಯಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರೆಡ್ಡಿ ಬಾಯಿ ಚಪಲಕ್ಕೆ ಮಾತು | ಪಕ್ಷ ಒಡೆಯಲು ಯತ್ನ | ನನ್ನ ಹೆಸರಿನ ದುರುಪಯೋಗ | ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ಬೆಂಗಳೂರು: ನನಗೆ ಶ್ರೀರಾಮುಲು ಅವರು ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಬಳಿ ಮಾತನಾಡಿದ ಅವರು, ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟು, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದು ಕಿಡಿಕಾರಿದರು.ಈ ಹಿಂದೆ ಚುನಾವಣೆಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೈತ ದೇಶದ ಬೆನ್ನೆಲುಬು ಅಂತೆಯೇ ಮತದಾರ ಪ್ರಜಾಪ್ರಭುತ್ವದ ಬೆನ್ನೆಲುಬು ಎಂದು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವಿ ಕಟ್ಟಿಮನಿ ಹೇಳಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮತದಾರ ತನ್ನ ಹಕ್ಕನ್ನು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು. ಎನ್ನುತ್ತ ಮತದಾನದ ಮಹತ್ವ, ಮತದಾನದ ಇತಿಹಾಸ, ಚುನಾವಣಾ ಆಯೋಗದ ಕಾರ್ಯ, ಮತದಾರರ ಜವಾಬ್ದಾರಿ ಕುರಿತು ಸವಿಸ್ತಾರವಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಚಾರ್ಯ ಎಸ್.ಎಚ್.ಅಂಗಡಿ ಪ್ರಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಎಸ್.ಕೆ.ಮಾಳಗೊಂಡ, ಎ.ಎ.ಗಂಗನಗೌಡರು, ಬಿ.ಎ.ಬಡಿಗೇರ್ ಸೇರಿದಂತೆ ಮತ್ತೀತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ರೈತರು ವೈಜ್ಞಾನಿಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಕೊಂಡುಕೊಳ್ಳಬಹುದು , ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನಾನಾ ಸವಲತ್ತು ವಿತರಣೆ ಮಾಡುತ್ತಿದ್ದು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಸಾದ ಎಂ.ಜಿ ಹೇಳಿದರು.ಕೃಷಿ ವಿಜ್ಞಾನಕೇಂದ್ರದ ಸಬಾಭವನದಲ್ಲಿ ಆಯೋಜಿಸಿದ ಹೈನುಗಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇವಲ ಕೃಷಿಯನ್ನೇ ಅವಲಂಬಿಸಿದರೆ ರೈತರು ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ, ಹೈನುಗಾರಿಕೆ ಪಶು ಸಾಕಣೆ, ಕುರಿ ಕೋಳಿ ಸಾಕಣೆ ಮಾಡುವ ಮೂಲಕ ತಮ್ಮ ಅರ್ಥಿಕ ಮಟ್ಟ ಹೆಚ್ಚಳ ಮಾಡಬೇಕು ಎಂದರು.ಡಾ.ಪ್ರೇಮಚಂದ್, ರೈತರಿಗೆ ವೈಜ್ಞಾನಿಕ ಹೈನುಗಾರಿಕೆಯ ಮಹತ್ವ ಆಧುನಿಕ ತಂತ್ರಜ್ಞಾನಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಡಾ.ಬಾಲಾಜಿ ನಾಯಕ್, ಮತ್ತು ಡಾ.ವೀಣಾ ರೈತರಿಗೆ ಹೈನುಗಾರಿಕೆಯಲ್ಲಿನ ಹೊಸವಿಧಾನಗಳು, ಪಶುಗಳ ಆರೋಗ್ಯ ನಿರ್ವಹಣೆ, ಮೇವುನಿರ್ವಹಣೆ, ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ಅರಿವು ಮೂಡಿಸಿದರು. “ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇದು ರೈತರ ಆರ್ಥಿಕಸ್ಥಿತಿಯನ್ನು ಸುಧಾರಿಸಲು ಸಹಾಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಉತ್ತರ ಕರ್ನಾಟಕದ ವಿಶೇಷ ರುಚಿಯಾದ ಜೋಳದ ಸಿತನಿ ತೆನೆ ಇಂಡಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ರೈತ ಉತ್ಪಾದಕ ಸಂಸ್ಥೆ ಯಿಂದ ಮಾರಾಟ ಕೇಂದ್ರ ಶುರುವಾಗಿದೆ.ಜೋಳದ ತೆನೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಹೊಲದಲ್ಲಿಯೇ ಮನೆಯವರು ಮತ್ತು ಸ್ನೇಹಿತರ ಬಳಗ, ಬಂಧು ಬಾಂಧವರು ಸೇರಿ ತಿನ್ನಬಹುದು.ರೈತರು ಇತ್ತೀಚಿಗೆ ಕಬ್ಬು ತೊಗರಿ ಮತ್ತು ನಿಂಬೆ ಬೆಳೆಯುತ್ತಿದ್ದು ಜೋಳ ಬೆಳೆಯುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆ ರೈತರಿಗೆ ಮತ್ತು ಇನ್ನಿತರಿಗೆ ಅನುಕೂಲ ವಾಗುತ್ತಿದೆ.ಮತ್ತು ಇದು ಅತೀ ಕಡಿಮೆ ದರದಲ್ಲಿ ಜೋಳದ ತೆನೆ ಮಾರಾಟ ಮಾಡುತ್ತಿದ್ದಾರೆ. ಮತ್ತು ಇದರಿಂದ ಜೋಳದ ಮೌಲ್ಯವರ್ಧನೆಯಾಗಿ ರೈತರಿಗೆ ಲಾಭ ತಂದು ಕೊಡುತ್ತಿದೆ. ಈಗಾಗಲೇ ಹಲವಾರು ಕಡೆ ಜೋಳದ ರೊಟ್ಟಿ ಮಾರಾಟ ಮಾಡುತ್ತಿದ್ದು ಸಿತನಿಯೂ ಚೆನ್ನಾಗಿ ಮಾರಾಟ ವಾಗುತ್ತಿದೆ.ಇತ್ತೀಚಿನ ದಿನಗಳಲ್ಲಿ ಜೋಳವನ್ನು ಮೌಲ್ಯವರ್ಧನ ಮಾಡಿ ಕಾಳುಗಳು ಹಸಿ ಇರುವಾಗ ಅವುಗಳನ್ನು ಸಿತನಿ ಮಾಡಿ ಮಾರಾಟ ಮಾಡಿ ಕೆಲವು ರೈತರು ಲಾಭ ಗಳಿಸುತ್ತಿದ್ದಾರೆ. ಇದು ಸ್ವಲ್ಪ ಕಷ್ಟದಾಯಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯ, ಹೊರ ರಾಜ್ಯದ ಲಕ್ಷಾಂತರ ಭಕ್ತಗಣ ಹೊಂದಿರುವ ಪವಾಡ ಪುರುಷ ಭಕ್ತರ ಪಾಲಿನ ಕಲ್ಪವೃಕ್ಷ ಲಚ್ಯಾಣದ ಸಿದ್ದಲಿಂಗ ಮಹಾರಾಜರು ಎಂದು ಶಾಸಕ ಯಶವಂತಗೌಡ ಪಾಟೀಲ ಹೇಳಿದರು.ತಾಲೂಕಿನ ಸುಕ್ಷೇತ್ರ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರ ಮಠದಲ್ಲಿ ಅಂದಾಜು ೬ ಕೋಟಿ ರೂ. ವೆಚ್ಚದ ನೂತನವಾಗಿ ನಿರ್ಮಿಸುತ್ತಿರುವ ಸಭಾ ಮಂಟಪದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.ಮಾನವ ಕುಲಕೋಟಿ ಏಳ್ಗೆಬಯಸುವ ಮಠಗಳಲ್ಲಿ ಲಚ್ಯಾಣದ ಶ್ರೀಸಿದ್ದಲಿಂಗರ ಪುಣ್ಯಕ್ಷೇತ್ರ ಕೂಡಾ ಹೌದು. ಇಷ್ಠಾರ್ಥಿಗಳನ್ನು ಪೂರೈಸುವ ದಿವ್ಯಶಕ್ತಿ ಶ್ರೀಸಿದ್ದಲಿಂಗೇಶ್ವರರಲ್ಲಿದೆ. ಶ್ರೀಸಿದ್ದಲಿಂಗ ಮಹಾರಾಜರು ಈ ಭಾಗದಲ್ಲಿ ಭಕ್ತಿರಿಗೆ ಕಾಮದೇನು ಕಲ್ಪವೃಕ್ಷವಿದ್ದಂತೆ ಎಂದರು.ಭಂಥನಾಳದ ಶ್ರೀವೃಷಭಲಿಂಗ ಮಹಾರಾಜರು ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿ, ಧನರಾಜ ಮುಜಗೊಂಡ , ನಿವೃತ್ತ ಶಿಕ್ಷಕ ಎ.ಪಿ ಕಾಗವಾಡಕರ್ ಮಾತನಾಡಿದರು.ಡಿ.ಎಸ್ ಪಾಟೀಲ ,ಎಂ,ಎಸ್ ಮುಜಗೊಂಡ, ವಿಠ್ಠಲಮಾಸ್ತರಕರಾಳೆ, ಸಂಕಪ್ಪಗೌಡ ಬಿರಾದಾರ, ಗೌರೀಶಂಕರ ಬಾಬಳಗಾಂವ್, ಹಣಮಂತ ಮುಜಗೊಂಡ, ಅಶೋಕಗೌಡ ಪಾಟೀಲ, ರಾಜೇಂದ್ರ ಹತ್ತಳ್ಳಿ, ಮಹಾದೇವ ಸಾಂಬಾಜಿ, ಬಸವರಾಜ ಬಾಬಳಗಾಂವ್, ಮಹೇಶಗೌಡ ಬಿರಾದಾರ, ಸಂತೋಷ ಪೋಲಾಸಿ, ಸುರೇಶ ವಾಲಿ, ಈರಪ್ಪ ವಾಲಿ, ಸಿದ್ದು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶಗೌಡ ಪಾಟೀಲ ಉಪಾಧ್ಯಕ್ಷರಾಗಿ ಹಣಮಂತ ಕುರಿ ಮತ್ತು ಯಲ್ಲಪ್ಪ ಚಲವಾದಿ ಅವಿರೋಧವಾಗಿ ಆಯ್ಕೆಯಾದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಹೆಣ್ಣಿಗೆ ಹೆಣ್ಣು ಶತೃವಾಗಿರಬಾರದು ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಲಿಂಗಾನುಪಾತ ಅಸಮತೋಲನವಾಗ ಬಾರದು. ಹೆಣ್ಣನ್ನು ಗೌರವಿಸುವ ಮನಸ್ಸು ಎಲ್ಲರಲ್ಲಿ ಬರಬೇಕು. ಹೆಣ್ಣು ಮಕ್ಕಳು ಸಹ ಪ್ರಯತ್ನ ಶೀಲರಾಗಿರಬೇಕು. ಸಾಧನೆಯ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು. ತಮ್ಮ ಜೀವನದ ಕಾಳಜಿ ಸದಾ ಇರಬೇಕು. ಹೆಣ್ಣು ಮಕ್ಕಳಲ್ಲಿ ಹೊಂದಾಣಿಕೆ ಮತ್ತು ಸಂಘಟನಾ ಪ್ರವೃತ್ತಿ ಇರಬೇಕು ಎಂದರು.ಪ್ರಾಥಮಿಕ ಶಾಲಾ ಮುಖ್ಯಗುರು ಮಾತೆ ಸರಸ್ವತಿ ಮಡಿವಾಳರ್ ಮಾತನಾಡಿ ೨೦೦೮ ರಿಂದ ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರಗಳು ಹೊಸಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪ್ರಯತ್ನ ಮಾಡುತ್ತಿದೆ. ಅದರ ಉಪಯೋಗ ಎಲ್ಲಾ ಹೆಣ್ಣು ಮಕ್ಕಳು ಪಡೆದುಕೊಂಡು ತಮ್ಮವರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕು ಎಂದರು.ಜಿ.ಜೆ.ಪಾದಗಟ್ಟಿ, ಕಾಲೇಜಿನ ಉಪನ್ಯಾಸಕಿ ಅಂಜನಾ ದೇಶಪಾಂಡೆ, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರುಗಳಾದ ಅನ್ನಪೂರ್ಣ ನಾಗರಾಳ, ಬಿ.ಟಿ.ಭಜಂತ್ರಿ, ಮಂಜುನಾಥ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬ.ಬಾಗೇವಾಡಿಯಲ್ಲಿ ನ್ಯಾಯವಾದಿ ಈರಣ್ಣ ವಡವಡಗಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯವಾದಿಗಳಾದ ಎಂ.ಎ.ಲಿಂಗಸೂರ, ಚೇತನ ಶಿವಶಿಂಪಿ, ಪಿ.ಬಿ.ಜಾಧವ, ಬಿ.ಎ.ಚಿನಿವಾರ, ಆರ್.ಎಸ್.ಬಿರಾದಾರ, ಎನ್.ಎಸ್.ಪಾಟೀಲ, ಎಂ.ಎ.ಬಿದರಕುಂದಿ, ಪಿ.ಎಲ್.ಬೊಮ್ಮಣಗಿ, ಎಸ್.ಎಸ್.ಬಿರದಾರ, ಎಸ್.ಎಚ್.ಚಳ್ಳಗಿ, ಎಸ್.ಜಿ.ಹೊಕ್ರಾಣಿ, ಕೆ.ಜಿ.ಶಿವಯೋಗಿಮಠ, ಎಲ್.ಆರ್.ನಾಲವಾಡ ಸೇರಿಂದತೆ ಮತ್ತೀತರರು ಇದ್ದರು.
ನ್ಯಾಯವಾದಿ ಮೇಲೆ ಹಲ್ಲೆ: ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಮನವಿ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬ.ಬಾಗೇವಾಡಿಯಲ್ಲಿ ನ್ಯಾಯವಾದಿ ಈರಣ್ಣ ವಡವಡಗಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯವಾದಿಗಳಾದ ಎಂ.ಎ.ಲಿಂಗಸೂರ, ಚೇತನ ಶಿವಶಿಂಪಿ, ಪಿ.ಬಿ.ಜಾಧವ, ಬಿ.ಎ.ಚಿನಿವಾರ, ಆರ್.ಎಸ್.ಬಿರಾದಾರ, ಎನ್.ಎಸ್.ಪಾಟೀಲ, ಎಂ.ಎ.ಬಿದರಕುಂದಿ, ಪಿ.ಎಲ್.ಬೊಮ್ಮಣಗಿ, ಎಸ್.ಎಸ್.ಬಿರದಾರ, ಎಸ್.ಎಚ್.ಚಳ್ಳಗಿ, ಎಸ್.ಜಿ.ಹೊಕ್ರಾಣಿ, ಕೆ.ಜಿ.ಶಿವಯೋಗಿಮಠ, ಎಲ್.ಆರ್.ನಾಲವಾಡ ಸೇರಿಂದತೆ ಮತ್ತೀತರರು ಇದ್ದರು.
