ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯ, ಹೊರ ರಾಜ್ಯದ ಲಕ್ಷಾಂತರ ಭಕ್ತಗಣ ಹೊಂದಿರುವ ಪವಾಡ ಪುರುಷ ಭಕ್ತರ ಪಾಲಿನ ಕಲ್ಪವೃಕ್ಷ ಲಚ್ಯಾಣದ ಸಿದ್ದಲಿಂಗ ಮಹಾರಾಜರು ಎಂದು ಶಾಸಕ ಯಶವಂತಗೌಡ ಪಾಟೀಲ ಹೇಳಿದರು.
ತಾಲೂಕಿನ ಸುಕ್ಷೇತ್ರ ಲಚ್ಯಾಣದ ಶ್ರೀಸಿದ್ದಲಿಂಗ ಮಹಾರಾಜರ ಮಠದಲ್ಲಿ ಅಂದಾಜು ೬ ಕೋಟಿ ರೂ. ವೆಚ್ಚದ ನೂತನವಾಗಿ ನಿರ್ಮಿಸುತ್ತಿರುವ ಸಭಾ ಮಂಟಪದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಮಾನವ ಕುಲಕೋಟಿ ಏಳ್ಗೆಬಯಸುವ ಮಠಗಳಲ್ಲಿ ಲಚ್ಯಾಣದ ಶ್ರೀಸಿದ್ದಲಿಂಗರ ಪುಣ್ಯಕ್ಷೇತ್ರ ಕೂಡಾ ಹೌದು. ಇಷ್ಠಾರ್ಥಿಗಳನ್ನು ಪೂರೈಸುವ ದಿವ್ಯಶಕ್ತಿ ಶ್ರೀಸಿದ್ದಲಿಂಗೇಶ್ವರರಲ್ಲಿದೆ. ಶ್ರೀಸಿದ್ದಲಿಂಗ ಮಹಾರಾಜರು ಈ ಭಾಗದಲ್ಲಿ ಭಕ್ತಿರಿಗೆ ಕಾಮದೇನು ಕಲ್ಪವೃಕ್ಷವಿದ್ದಂತೆ ಎಂದರು.
ಭಂಥನಾಳದ ಶ್ರೀವೃಷಭಲಿಂಗ ಮಹಾರಾಜರು ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿ, ಧನರಾಜ ಮುಜಗೊಂಡ , ನಿವೃತ್ತ ಶಿಕ್ಷಕ ಎ.ಪಿ ಕಾಗವಾಡಕರ್ ಮಾತನಾಡಿದರು.
ಡಿ.ಎಸ್ ಪಾಟೀಲ ,ಎಂ,ಎಸ್ ಮುಜಗೊಂಡ, ವಿಠ್ಠಲಮಾಸ್ತರಕರಾಳೆ, ಸಂಕಪ್ಪಗೌಡ ಬಿರಾದಾರ, ಗೌರೀಶಂಕರ ಬಾಬಳಗಾಂವ್, ಹಣಮಂತ ಮುಜಗೊಂಡ, ಅಶೋಕಗೌಡ ಪಾಟೀಲ, ರಾಜೇಂದ್ರ ಹತ್ತಳ್ಳಿ, ಮಹಾದೇವ ಸಾಂಬಾಜಿ, ಬಸವರಾಜ ಬಾಬಳಗಾಂವ್, ಮಹೇಶಗೌಡ ಬಿರಾದಾರ, ಸಂತೋಷ ಪೋಲಾಸಿ, ಸುರೇಶ ವಾಲಿ, ಈರಪ್ಪ ವಾಲಿ, ಸಿದ್ದು ಗೋಡ್ಯಾಳ, ನಾಗುಗೌಡ ಬಿರಾದಾರ ಮತ್ತಿತರಿದ್ದರು.