ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರು ವೈಜ್ಞಾನಿಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಕೊಂಡುಕೊಳ್ಳಬಹುದು , ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ನಾನಾ ಸವಲತ್ತು ವಿತರಣೆ ಮಾಡುತ್ತಿದ್ದು ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಪ್ರಸಾದ ಎಂ.ಜಿ ಹೇಳಿದರು.
ಕೃಷಿ ವಿಜ್ಞಾನಕೇಂದ್ರದ ಸಬಾಭವನದಲ್ಲಿ ಆಯೋಜಿಸಿದ ಹೈನುಗಾರಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಕೃಷಿಯನ್ನೇ ಅವಲಂಬಿಸಿದರೆ ರೈತರು ಹೆಚ್ಚು ಲಾಭ ಗಳಿಸಲು ಸಾಧ್ಯವಿಲ್ಲ, ಹೈನುಗಾರಿಕೆ ಪಶು ಸಾಕಣೆ, ಕುರಿ ಕೋಳಿ ಸಾಕಣೆ ಮಾಡುವ ಮೂಲಕ ತಮ್ಮ ಅರ್ಥಿಕ ಮಟ್ಟ ಹೆಚ್ಚಳ ಮಾಡಬೇಕು ಎಂದರು.
ಡಾ.ಪ್ರೇಮಚಂದ್, ರೈತರಿಗೆ ವೈಜ್ಞಾನಿಕ ಹೈನುಗಾರಿಕೆಯ ಮಹತ್ವ ಆಧುನಿಕ ತಂತ್ರಜ್ಞಾನಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಡಾ.ಬಾಲಾಜಿ ನಾಯಕ್, ಮತ್ತು ಡಾ.ವೀಣಾ ರೈತರಿಗೆ ಹೈನುಗಾರಿಕೆಯಲ್ಲಿನ ಹೊಸವಿಧಾನಗಳು, ಪಶುಗಳ ಆರೋಗ್ಯ ನಿರ್ವಹಣೆ, ಮೇವುನಿರ್ವಹಣೆ, ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ತಂತ್ರಗಳ ಬಗ್ಗೆ ಅರಿವು ಮೂಡಿಸಿದರು. “ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇದು ರೈತರ ಆರ್ಥಿಕಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ೩೦ ಕ್ಕೂ ಹೆಚ್ಚುರೈತರು ಭಾಗವಹಿಸಿದ್ದರು.