ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹೆಣ್ಣಿಗೆ ಹೆಣ್ಣು ಶತೃವಾಗಿರಬಾರದು ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಲಿಂಗಾನುಪಾತ ಅಸಮತೋಲನವಾಗ ಬಾರದು. ಹೆಣ್ಣನ್ನು ಗೌರವಿಸುವ ಮನಸ್ಸು ಎಲ್ಲರಲ್ಲಿ ಬರಬೇಕು. ಹೆಣ್ಣು ಮಕ್ಕಳು ಸಹ ಪ್ರಯತ್ನ ಶೀಲರಾಗಿರಬೇಕು. ಸಾಧನೆಯ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು. ತಮ್ಮ ಜೀವನದ ಕಾಳಜಿ ಸದಾ ಇರಬೇಕು. ಹೆಣ್ಣು ಮಕ್ಕಳಲ್ಲಿ ಹೊಂದಾಣಿಕೆ ಮತ್ತು ಸಂಘಟನಾ ಪ್ರವೃತ್ತಿ ಇರಬೇಕು ಎಂದರು.
ಪ್ರಾಥಮಿಕ ಶಾಲಾ ಮುಖ್ಯಗುರು ಮಾತೆ ಸರಸ್ವತಿ ಮಡಿವಾಳರ್ ಮಾತನಾಡಿ ೨೦೦೮ ರಿಂದ ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರಗಳು ಹೊಸಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪ್ರಯತ್ನ ಮಾಡುತ್ತಿದೆ. ಅದರ ಉಪಯೋಗ ಎಲ್ಲಾ ಹೆಣ್ಣು ಮಕ್ಕಳು ಪಡೆದುಕೊಂಡು ತಮ್ಮವರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕು ಎಂದರು.
ಜಿ.ಜೆ.ಪಾದಗಟ್ಟಿ, ಕಾಲೇಜಿನ ಉಪನ್ಯಾಸಕಿ ಅಂಜನಾ ದೇಶಪಾಂಡೆ, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರುಗಳಾದ ಅನ್ನಪೂರ್ಣ ನಾಗರಾಳ, ಬಿ.ಟಿ.ಭಜಂತ್ರಿ, ಮಂಜುನಾಥ ಪಡದಾಳಿ, ಕಿರಣ ಕಡಿ, ಶಿವಶಂಕರಯ್ಯ ಹಿರೇಮಠ, ಎಸ್.ಎಸ್.ಹಂಜಗಿ, ಆರ್.ಜೆ.ಸಾಗರ, ಲೋಹಿತ ಜೈನಾಪೂರ, ರಾಧಾ ಕೋಲಕಾರ, ಆರ್.ಕೆ.ಕುಲಕರ್ಣಿ, ಕೀರ್ತಿ ತಳಗೇರಿ, ಶಾಹಿನ ನಾಲತವಾಡ, ರೂಪಾ ನಾಟೀಕರ, ಅನ್ನಪೂರ್ಣ ಹೊಸಮನಿ, ವರ್ಷಾ ಹುನಗುಂದ, ಗುರುಬಾಯಿ ತಂಗಡಗಿ, ಮೀನಾಕ್ಷಿ ಗಣಾಚಾರಿ, ಭಾಗ್ಯ ಸಿದ್ದಾಪೂರ, ಇಂದು ನಾಯಕ, ತ್ರಿವೇಣಿ ಕುಲಕರ್ಣಿ, ವಿನಾಯಕ ನಾಗರಾಳ, ದಾನಮ್ಮ ಮಡಿವಾಳರ್, ಎಸ್.ಬಿ.ಶಿವಸಿಂಪಿ, ಸುಮಾ ಚಿತ್ರಗಾರ ಸೇರಿದಂತೆ ಮತ್ತೀತರರು ಇದ್ದರು.