ನ್ಯಾಯವಾದಿ ಮೇಲೆ ಹಲ್ಲೆ: ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಮನವಿ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬ.ಬಾಗೇವಾಡಿಯಲ್ಲಿ ನ್ಯಾಯವಾದಿ ಈರಣ್ಣ ವಡವಡಗಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯವಾದಿಗಳಾದ ಎಂ.ಎ.ಲಿಂಗಸೂರ, ಚೇತನ ಶಿವಶಿಂಪಿ, ಪಿ.ಬಿ.ಜಾಧವ, ಬಿ.ಎ.ಚಿನಿವಾರ, ಆರ್.ಎಸ್.ಬಿರಾದಾರ, ಎನ್.ಎಸ್.ಪಾಟೀಲ, ಎಂ.ಎ.ಬಿದರಕುಂದಿ, ಪಿ.ಎಲ್.ಬೊಮ್ಮಣಗಿ, ಎಸ್.ಎಸ್.ಬಿರದಾರ, ಎಸ್.ಎಚ್.ಚಳ್ಳಗಿ, ಎಸ್.ಜಿ.ಹೊಕ್ರಾಣಿ, ಕೆ.ಜಿ.ಶಿವಯೋಗಿಮಠ, ಎಲ್.ಆರ್.ನಾಲವಾಡ ಸೇರಿಂದತೆ ಮತ್ತೀತರರು ಇದ್ದರು.