ಉದಯರಶ್ಮಿ ದಿನಪತ್ರಿಕೆ
ಇಂಡಿ: ಉತ್ತರ ಕರ್ನಾಟಕದ ವಿಶೇಷ ರುಚಿಯಾದ ಜೋಳದ ಸಿತನಿ ತೆನೆ ಇಂಡಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ರೈತ ಉತ್ಪಾದಕ ಸಂಸ್ಥೆ ಯಿಂದ ಮಾರಾಟ ಕೇಂದ್ರ ಶುರುವಾಗಿದೆ.
ಜೋಳದ ತೆನೆ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಹೊಲದಲ್ಲಿಯೇ ಮನೆಯವರು ಮತ್ತು ಸ್ನೇಹಿತರ ಬಳಗ, ಬಂಧು ಬಾಂಧವರು ಸೇರಿ ತಿನ್ನಬಹುದು.
ರೈತರು ಇತ್ತೀಚಿಗೆ ಕಬ್ಬು ತೊಗರಿ ಮತ್ತು ನಿಂಬೆ ಬೆಳೆಯುತ್ತಿದ್ದು ಜೋಳ ಬೆಳೆಯುವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆ ರೈತರಿಗೆ ಮತ್ತು ಇನ್ನಿತರಿಗೆ ಅನುಕೂಲ ವಾಗುತ್ತಿದೆ.
ಮತ್ತು ಇದು ಅತೀ ಕಡಿಮೆ ದರದಲ್ಲಿ ಜೋಳದ ತೆನೆ ಮಾರಾಟ ಮಾಡುತ್ತಿದ್ದಾರೆ. ಮತ್ತು ಇದರಿಂದ ಜೋಳದ ಮೌಲ್ಯವರ್ಧನೆಯಾಗಿ ರೈತರಿಗೆ ಲಾಭ ತಂದು ಕೊಡುತ್ತಿದೆ. ಈಗಾಗಲೇ ಹಲವಾರು ಕಡೆ ಜೋಳದ ರೊಟ್ಟಿ ಮಾರಾಟ ಮಾಡುತ್ತಿದ್ದು ಸಿತನಿಯೂ ಚೆನ್ನಾಗಿ ಮಾರಾಟ ವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜೋಳವನ್ನು ಮೌಲ್ಯವರ್ಧನ ಮಾಡಿ ಕಾಳುಗಳು ಹಸಿ ಇರುವಾಗ ಅವುಗಳನ್ನು ಸಿತನಿ ಮಾಡಿ ಮಾರಾಟ ಮಾಡಿ ಕೆಲವು ರೈತರು ಲಾಭ ಗಳಿಸುತ್ತಿದ್ದಾರೆ. ಇದು ಸ್ವಲ್ಪ ಕಷ್ಟದಾಯಕ ಕೆಲಸವಾದರೂ ಇದನ್ನು ಮಾಡಿದಲ್ಲಿ ರೈತರಿಗೆ ಲಾಭ ವಾಗುತ್ತದೆ. ಕೃಷಿ ಉತ್ಪನ್ನಗಳನ್ನು ನೇರ ಮಾರಾಟ ಮಾಡುವ ಬದಲು ಅವುಗಳನ್ನು ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡಿದಾಗ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ. ದಲ್ಲಾಳಿಗಳ ಹಾವಳಿ ತಪ್ಪುತ್ತದೆ. ಇಂತಹ ಕೆಲಸಕ್ಕೆ ರೈತ ಉತ್ಪಾದಕ ಸಂಸ್ಥೆಗಳು ನೆರವಾಗಬೇಕಾಗಿದೆ. ಇಂಡಿ ಸಾವಯುವ ಸಿರಿಧಾನ್ಯ ರೈತ ಉತ್ಪಾದಕ ಸಂಸ್ಥೆವತಿಯಿಂದ ರೈತರಿಗೆ ಮನವರಿಕೆ ಮಾಡಿ ಸಿತನಿ ಮಾರಾಟ ಮಾಡಿದಲ್ಲಿ ರೈತರಿಗೆ ಹೆಚ್ಚು ಲಾಭವಾಗುತ್ತದೆ.
“ಇಂಡಿಯಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೈತ ಉತ್ಪಾದಕ ಸಂಸ್ಥೆಯಿಂದ ಸಿತನಿ ತೆನೆ ಮಾರಾಟ ಮಾಡುತ್ತಿದ್ದು ಸಿತನಿ ಮಕ್ಕಳ ಆರೋಗ್ಯಕ್ಕೆ ಉಪಯುಕ್ತ, ಹೀಗಾಗಿ ಶಾಲೆಯ ಎದುರುಗಡೆ ಮಹಿಳೆಯರು ಬುಟ್ಟಿಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಮತ್ತು ತೆನೆಯನ್ನು ಮಾರಾಟ ಮಾಡಲಾಗುತ್ತಿದ್ದು ನೀವು ಮನೆ ಅಥವಾ ಹೊಲದಲ್ಲಿ ಸಿತನಿ ತಿನ್ನಬಹುದು. ಹೆಚ್ಚಿನ ಮಾಹಿತಿಗಾಗಿ ೯೮೮೦೮೫೪೨೬೨ , ೮೧೯೭೪೭೩೨೩೬ ಸಂಪರ್ಕಿಸಿ.
– ಎಸ್.ಟಿ.ಪಾಟೀಲ
ನಿರ್ದೇಶಕರು, ರೈತ ಉತ್ಪಾದಕ ಸಂಸ್ಥೆ, ಇಂಡಿ