Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಚನೆ- ಡಾ. ಶಶಿಕಾಂತ ಪಟ್ಟಣರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ನಾನು ಸತ್ತರೆನನ್ನ ಹೆಣವನ್ನುಶವದ ಪೆಟ್ಟಿಗೆಯಲ್ಲಿರಿಸಿಅದರ ಮೇಲೆ ನನ್ನೆಲ್ಲಪದಕಗಳನ್ನಿಟ್ಟುನನ್ನ ಮನೆಗೆ ಕಳುಹಿಸಿನನ್ನ ತಾಯಿಗೆನನ್ನಯುದ್ಧಕಾರ್ಯದಬಗ್ಗೆ ಹೇಳಿನನ್ನ ತಂದೆಗೆ ನನ್ನೆದುರುಬಾಗದಿರಲು ತಿಳಿಸಿಅವನು ಕೊಟ್ಟಧೈರ್ಯ ಶಕ್ತಿಯೆನಗೆನನ್ನಿಂದ ಅಪ್ಪನಿಗೆಈಗಾವ ಕಿರಿಕಿರಿಯಿಲ್ಲನನ್ನ ತಮ್ಮನಿಗೆಓದಲು ಹೇಳಿನನ್ನ ಬೈಕ್ ನ ಕೀಲಿಅವನಿಗೆ ಕೊಟ್ಟು ಬಿಡಿನನ್ನ ವಿಮೆಯ ಹಣತಂಗಿಗೆ ಕೊಟ್ಟು ಬಿಡಿಅವಳ ಮದುವೆ ನಿಬ್ಬಣಕೆನನ್ನ ಪುಟ್ಟ ಉಡುಗೊರೆಎಲ್ಲರಿಗೂ ತಿಳಿಸಿಇರದಿರಲಿ ನೋವು ದುಃಖಸೂರ್ಯ ಮುಳುಗಿದ ಮೇಲೆನನಗೆ ದೀರ್ಘ ನಿದ್ದೆಭೂಮಿಯಿಂದ ಬಂದವನುಭೂಮಿಗೆ ತೆರಳುವೆನುರಾಷ್ಟ್ರಕ್ಕೆ ಅಳದಿರಲು ಕೋರಿಕೆಸೈನಿಕ ಸಾಯಲೇ ಹುಟ್ಟಿದ್ದುಸಾಯುವುದು ವಾಡಿಕೆ
ಕಾರ್ಪೊರೇಟ್ ಜಗತ್ತಿನ ಸಂಪತ್ತು |ಬಿಗ್ ಬಾಸ್ ಹನುಮಂತು | ಆದ ಕೆಲವು ಪ್ರಗತಿಪರ ಚಿಂತಕರು ಲೇಖನವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಕಾರ್ಪೊರೇಟ್ ಜಗತ್ತಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸಂವೇದನಾಶೀಲತೆ, ಚಲನಶೀಲತೆ, ಪ್ರಬುದ್ಧತೆ ಬೇಕಾಗುತ್ತದೆ. ಅವರುಗಳು ಅತ್ಯಂತ ನಾಜೂಕಾಗಿ ಇಡೀ ವ್ಯವಸ್ಥೆಯನ್ನು ಜನರ ಬೆಂಬಲದೊಂದಿಗೆ ಆಪೋಶನ ತೆಗೆದುಕೊಳ್ಳುತ್ತಾರೆ..ಬಿಗ್ ಬಾಸ್ ಎಂಬ ಒಂದು ಕಾರ್ಯಕ್ರಮದ ಪರಿಕಲ್ಪನೆ ಮತ್ತು ವಿನ್ಯಾಸವೇ ಹುಚ್ಚುತನದ ಪರಮಾವಧಿ. ಮೌಲ್ಯಗಳ ಅಧ್ಹ:ಪತನ, ಮನರಂಜನೆಯ ಹೆಸರಿನ ಆರ್ಥಿಕ ದರೋಡೆ ಮತ್ತು ಸಾಮಾನ್ಯ ಜನರ ಮುಗ್ಧತೆ ಮತ್ತು ಮೂರ್ಖತನದ ದುರುಪಯೋಗ. ಅಂತಹ ಕಾರ್ಯಕ್ರಮದಲ್ಲಿ ಯಾರೇ ಭಾಗವಹಿಸಿದ್ದರೂ, ಯಾರೇ ಗೆದ್ದರೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ..ಗ್ರಾಮೀಣ ಭಾಗದ, ಮುಗ್ಧ ಮನಸ್ಸಿನ, ಅತ್ಯಂತ ತಳ ಸಮುದಾಯದ, ಬಡತನದಿಂದ ಬೆಳೆದು ಬಂದ ಕುರಿಗಾಹಿ ಹನುಮಂತು ಗೆದ್ದ ಮಾತ್ರಕ್ಕೆ ಇಡೀ ಕಾರ್ಯಕ್ರಮ ಸಾರ್ಥಕತೆ ಪಡೆಯಿತು. ಆತ ಗೆದ್ದಿದ್ದು ಈ ಸಮಾಜ ಬಹುದೊಡ್ಡ ಪರಿವರ್ತನೆಯ ಹಾದಿಯಲ್ಲಿದೆ. ಬಡವರೂ ಆ ಬೃಹತ್ ಜನಪ್ರಿಯತೆಯ ಮನರಂಜನಾ ಕಾರ್ಯಕ್ರಮವನ್ನು ಗೆಲ್ಲಬಹುದು ಮತ್ತು ನಗರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಶರಣು ಸಬರದ ಅವರ ಜಿಲ್ಲಾ ಯುವ ಪರಿಷತ್, ಪ್ರೀತಿ ಪತ್ತಾರ, ಮೋಹನ ಕಟ್ಟಿಮನಿಯವರ ಮನು ಸಾಮಾಜಿಕ ಜನಜಾಗೃತಿ ವಿವಿಧೋದ್ದೇಶ ಸoಸ್ಥೆ, ಧಿಷಾ ಭೀಸೆ ಯವರ ಸ್ವಯಂಭು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ, ಮಲ್ಲಮ್ಮಾ ಯಾಳವಾರವರ ಅಧ್ಯಕ್ಷತೆಯಲ್ಲಿ ನಾಡಿನ ಖ್ಯಾತ ರಂಗಕರ್ಮಿ, ಚಿತ್ರನಟಿ, ಹಿನ್ನೆಲೆಗಾಯಕಿ ಬಿ. ಜಯಶ್ರೀ ಅವರೊಂದಿಗೆ ಜಿಲ್ಲೆಯ ವಿವಿಧ ಕಲಾವಿದರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಜಯಶ್ರೀ, ಬಿ. ವಿ ಕಾರಂತರು ಇದ್ದಾಗಿನಿಂದ ಇಲ್ಲಿಯವರೆಗೆ, ರಂಗಭೂಮಿಯ ವಿಷಯವನ್ನು ಪಠ್ಯಕ್ರಮಕ್ಕೆ ಸೇರಿಸಬೇಕೆನ್ನುವ ನಮ್ಮ ಮೂವತ್ತು ವರ್ಷದ ಪ್ರಯತ್ನ ಇಂದಿಗೂ ಫಲಕಾರಿಯಾಗಲಿಲ್ಲ. ಹೀಗಾಗಿ ಇಂದಿನ ಯುವಜನತೆ ರಂಗಕಲೆಯಲ್ಲಿ ಸಂಪೂರ್ಣ ಆಸಕ್ತಿ ತೋರದಿರುವದಕ್ಕೆ ಸಾಕ್ಷಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.ಸಂವಾದದಲ್ಲಿ ಭಾಗವಹಿಸಿದ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಗಿರಿಮಲ್ಲಪ್ಪಾ ಭಜಂತ್ರಿ, ಮುದ್ದೇಬಿಹಾಳ ತಾಲ್ಲೂಕಿನ ಗಂಗೂರ ಗ್ರಾಮದ ಏಕತಾರಿ ಕಲಾವಿದ ಮೌನಯ್ಯ. ದಾಸರ, ಚೌಡಕಿ ಹಾಡಿನ ಕಲಾವಿದರಾದ ಸಿದ್ದು ಗು. ಅಲಗೊಂಡ ಮನಗೂಳಿ, ಪಾರಿಜಾತ ಕಲಾವಿದರು ಮತ್ತು ಬಯಲಾಟ ಅಕಾಡೆಮಿಯ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಲಮಟ್ಟಿ ಡ್ಯಾಮದಿಂದ ಚಿಮ್ಮಲಗಿ ಏತ ನೀರಾವರಿ ಮೂಲಕ ನಾಗಠಾಣ ಕಾಲುವೆ ಮುಖಾಂತರ ಜಂಬಗಿ ಕೆರೆ ತುಂಬುವ ಯೋಜನೆ ಅಡಿಯಲ್ಲಿ ಕೆನಾಲ್‌ಗೆ ನೀರು ಹರಿಸಬೇಕೆಂದು ಒತ್ತಾಯಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿ, ವಿಜಯಪುರ ಜಿಲ್ಲೆ, ವಿಜಯಪುರ ತಾಲುಕು, ಅಂಕಲಗಿ, ಆಹೇರಿ, ಹುಣಶ್ಯಾಳ, ಹಾಗೂ ನಾಗಠಾಣ ಗ್ರಾಮಗಳಲ್ಲಿ ಶೇತಿ ಕೆಲಸ ಮಾಡುತ್ತಿರುವ ನಮಗೆ ನೀರಿನ ತೊಂದರೆಯಿಂದ ನಮ್ಮ ಹೊಲದ ಬೆಳೆಗಳನ್ನು ಉಳಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ಹಾಗೂ ಗ್ರಾಮಗಳ ದನಕರುಗಳು ಸರಿಯಾದ ನೀರಿಲ್ಲದೇ ಬಿಸಿಲಿನಲ್ಲಿ ಬಹಳ ಪರಿತಪಿಸುತ್ತಿವೆ. ಕಾರಣ ನಮ್ಮ ಎಲ್ಲ ಹಳ್ಳಿಗಳಿಗೂ ಕೆನಾಲ್ ಹಾಯ್ದು ಹೋಗಿರುವುದರಿಂದ ಆಲಮಟ್ಟಿ ಡ್ಯಾಮದಿಂದ ಚಿಮ್ಮಲಗಿ ಏತ ನೀರಾವರಿ ಮೂಲಕ ನಾಗಠಾಣ ಕಾಲುವೆ ಮುಖಾಂತರ ಜಂಬಗಿ ಕೆರೆ ತುಂಬುವ ಯೋಜನೆ ಅಡಿಯಲ್ಲಿ ಕೆನಾಲ್ ಗೆ ನೀರು ಹರಿಸುವ ವಿನಂತಿಸುತ್ತೇವೆ. ನಮ್ಮ ಹಳ್ಳಿಗಳಲ್ಲಿ ಹಾಯ್ದು ಹೋಗಿರುವ ಕೆನಾಲಿಗೆ ಎಲ್ಲ ಜಮೀನುಗಳಿಗೂ ಸಾಕಾಗುವಷ್ಟು ನೀರನ್ನು ಬಿಡಬೇಕೆಂದು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜ.೩೦ ರಂದು ಸಂಜೆ ೪:೩೦ಕ್ಕೆ ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದ ಎದುರು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಸಾಹಿತಿಗಳು ಸಾಹಿತ್ಯಾಸಕ್ತರು ಭಾಗಿಯಾಗುವಂತೆ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ವಿನಂತಿಸಿದ್ದಾರೆ.
ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಇಲ್ಲ | ಅಲ್ಲಿ ಶ್ರೀರಾಮುಲು ಮಾತ್ರವಲ್ಲ ಹಲವರಿಗೆ ಸಮಸ್ಯೆಗಳಿವೆ | ಶಾಸಕ ಲಕ್ಷ್ಮಣ ಸವದಿ ಲೇವಡಿ ಬೆಳಗಾವಿ: ‘ಬಿಜೆಪಿ ಪರಿಸ್ಥಿತಿ ಈಗ, ಮನೆಯೊಂದು ಆರು ಬಾಗಿಲಿನಂತಾಗಿದೆ’ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಈಗ ಎಲ್ಲವೂ ಸರಿ ಇಲ್ಲ. ಅಲ್ಲಿ ಮನೆಯೊಂದು ಮೂರು ಬಾಗಿಲಲ್ಲ, ಆರು ಬಾಗಿಲು ಆಗಿವೆ. ಅಲ್ಲಿ ಶ್ರೀರಾಮುಲು ಮಾತ್ರವಲ್ಲ; ಹಲವರಿಗೆ ಸಮಸ್ಯೆಗಳಿವೆ. ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೊಸ ಸಮಸ್ಯೆಗಳು ಹುಟ್ಟುತ್ತಲೇ ಇವೆ’ ಎಂದು ದೂರಿದರು.ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮಧ್ಯೆ ಇರುವ ವೈಮನಸ್ಸು ಈಗ ಭುಗಿಲೆದ್ದಿದೆ. ಶ್ರೀರಾಮಲು ನೊಂದಿದ್ದಾರೆ. ಬಿಜೆಪಿಯಲ್ಲಿ ಮೂರಲ್ಲ, ಆರು ಬಾಗಿಲು ದಾಟಿ ಬಂದಿದ್ದಾರೆ. ನಾನೇನು ಅವರನ್ನು ಸಂಪರ್ಕಿಸಿಲ್ಲ. ಅವರು ಕಾಂಗ್ರೆಸ್‌ಗೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡೋಣ ಎಂದರು. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಕೆಲವರು ಬರುತ್ತಾರೆ, ಕೆಲವರು ಹೋಗುತ್ತಾರೆ. ಇದರಿಂದ ರಾಷ್ಟ್ರೀಯ ಪಕ್ಷಗಳಿಗೆ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.ಈ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಾಧಕರನ್ನು ಸನ್ಮಾನಿಸುವದು ಸನ್ಮಾನಿಸುವವರಿಗೆ ಖುಷಿ ಕೊಟ್ಟರೆ, ಸಾಧಕರ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.ಪಟ್ಟಣದಲ್ಲಿ ಅಸ್ಕಿ ಫೌಂಡೇಶನ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯರ ಆಶೀರ್ವಾದದಿಂದ ಅಸ್ಕಿ ಫೌಂಡೇಶನ್ ಈ ಹಂತಕ್ಕೆ ಬಂದು ತಲುಪಿದೆ. ನಮಗೆ ಪಕ್ಷ ಜಾತಿ ಯಾವುದೂ ಸಂಬಂಧವಿಲ್ಲ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವದು, ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಕಳೆದ ಕೆಲವು ವರ್ಷದಿಂದ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಮಾಡುತ್ತ ಬಂದಿದ್ದೇವೆ. ಮುಂದಿನ ದಿನಮಾನಗಳಲ್ಲೂ ಮಾಡುತ್ತೇವೆ ಎಂದರು.ಸನ್ಮಾನಿತರ ಪರವಾಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಮಾತನಾಡಿ, ಅಸ್ಕಿ ಫೌಂಡೇಶನ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆ. ನಮ್ಮ ಅಖಂಡ ತಾಲೂಕಿನಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಸಾಗುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಮಾಜ ಸೇವೆ ನೀಡುವ ಶಕ್ತಿ ಭಗವಂತ ಇವರಿಗೆ ಕರುಣಿಸಲಿ ಎಂದರು.ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮುಖಂಡ ಸತೀಶ…
ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ತಾಲ್ಲೂಕಿನ ಹಲಗಣಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಎಸ್ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಗ್ರಾಮದ ಶ್ರೀಶೈಲ ಹಣಮಂತಗೌಡ ಬಿರಾದಾರ ಅವರು ಶಾಲೆಗೆ 50,500 ರೂಪಾಯಿ ದೇಣಿಗೆ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗೆ ಮಕ್ಕಳಿಗೆ ಕಲಿಕೋಪಕರಣ, ಆಠೋಪಕರಣ ನೀಡಿ ಸರ್ಕಾರಿ ಶಾಲೆಯ ಅಭಿವೃದ್ಧಿ ಪಣತೊಟ್ಟು ಇತರೆ ಶಾಲೆಯ ಎಸ್ಡಿಎಂಸಿ ಸದಸ್ಯರುಗಳಿಗೆ ಮಾದರಿಯಾಗಿದ್ದಾರೆ.76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ದಿನದಂದು ಜೀವನ ರೂಪಿಸಿದ ಶಾಲೆಗೆ ಏನಾದ್ರೂ ಸಹಕಾರ, ಸೇವೆ ನೀಡಬೇಕು ಎಂದು ಬಯಸಿ ನಲಿಕಲಿ ತರಗತಿ ಮಕ್ಕಳ ಕಲಿಕೆ ಸರಳ ಗೊಳಿಸಲು ₹ 30 ಸಾವಿರ ವೆಚ್ಚದ ವಿನೂತನವಾದ ಖುರ್ಚಿ ಮತ್ತು ಟೇಬಲ್ ಹಾಗೂ ತರಗತಿ ಮಕ್ಕಳಿಗೆ ಸರಳವಾಗಿ ಕಲಿಕೆ ಮಾಡಲು ₹ 8 ಸಾವಿರ ವೆಚ್ಚದಗಳ ಕಲಿಕಾ ಚಾರ್ಟ, ₹12,500 ವೆಚ್ಚದಲ್ಲಿ ಖುರ್ಚಿ ಖರೀದಿ ಹೀಗೆ ಒಟ್ಟು ₹ 50,500 ದೇಣಿಗೆ ನೀಡಿ ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಈ ಚಿಕ್ಕ ಸೇವೆ ಮಾಡಿದ ಸಾರ್ಥಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮನುಷ್ಯ ಬದುಕ ಬೇಕಾದರೆ ರಕ್ತ ಮುಖ್ಯ. ಆದರೆ ಅಪಘಾತದಂಥ ತುರ್ತು ಸಂದರ್ಭದಲ್ಲಿ ಅಗತ್ಯವಿದ್ದವರಿಗೆ ರಕ್ತದಾನ ಮಾಡುವದರಿಂದ ಇನ್ನೊಬ್ಬರ ಜೀವ ಉಳಿಸಿದ ಪೂಣ್ಯ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಬಸವರಾಜ ಸಾಹುಕಾರ ಕುಮಸಗಿ ಹೇಳಿದರು.ಪಟ್ಟಣದ ಕರ್ನಾಟಕ ಬಿಇಡಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಘಟಕ ಇಂಡಿ, ಶ್ರೀ ಸತ್ಯ ಸಾಯಿಬಾಬಾ ಸಾಯಿ ಸಮಿತಿ, ಸಹಯೋಗದಲ್ಲಿ ಭಗವಾನ ಸಾಯಿಬಾಬಾರ ೧೦೦ ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಮಾತನಾಡಿ ರಕ್ತದಾನ ಮಾಡುವದು ಒಳ್ಳೆಯ ಕಾರ್ಯ ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ. ರಕ್ತದ ತೊಂದರೆ ಎದುರಾದಾಗ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.ಅಧ್ಯಕ್ಷರು ಅಖಿಲ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹಿರಿಯ ಸಾಹಿತಿ ಅಶೋಕ ಅವರನ್ನು ಆರೂಢಶ್ರೀ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಮಾಡಿ ಬಸವನ ಬಾಗೇವಾಡಿಯ ಆರೂಢ ಸೇವಾ ಸಂಸ್ಥೆಯ ಗುರುರಾಜ ಕನ್ನೂರ ಆದೇಶಿಸಿದ್ದಾರೆ.ಮಣಿ ಅವರ ಕನ್ನಡ ನಾಡು-ನುಡಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಪರಿಗಣಿಸಿ ೨೦೨೪-೨೫ ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
