ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ತಾಲ್ಲೂಕಿನ ಹಲಗಣಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ನೂತನವಾಗಿ ಎಸ್ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಗ್ರಾಮದ ಶ್ರೀಶೈಲ ಹಣಮಂತಗೌಡ ಬಿರಾದಾರ ಅವರು ಶಾಲೆಗೆ 50,500 ರೂಪಾಯಿ ದೇಣಿಗೆ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗೆ ಮಕ್ಕಳಿಗೆ ಕಲಿಕೋಪಕರಣ, ಆಠೋಪಕರಣ ನೀಡಿ ಸರ್ಕಾರಿ ಶಾಲೆಯ ಅಭಿವೃದ್ಧಿ ಪಣತೊಟ್ಟು ಇತರೆ ಶಾಲೆಯ ಎಸ್ಡಿಎಂಸಿ ಸದಸ್ಯರುಗಳಿಗೆ ಮಾದರಿಯಾಗಿದ್ದಾರೆ.
76 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ದಿನದಂದು ಜೀವನ ರೂಪಿಸಿದ ಶಾಲೆಗೆ ಏನಾದ್ರೂ ಸಹಕಾರ, ಸೇವೆ ನೀಡಬೇಕು ಎಂದು ಬಯಸಿ ನಲಿಕಲಿ ತರಗತಿ ಮಕ್ಕಳ ಕಲಿಕೆ ಸರಳ ಗೊಳಿಸಲು ₹ 30 ಸಾವಿರ ವೆಚ್ಚದ ವಿನೂತನವಾದ ಖುರ್ಚಿ ಮತ್ತು ಟೇಬಲ್ ಹಾಗೂ ತರಗತಿ ಮಕ್ಕಳಿಗೆ ಸರಳವಾಗಿ ಕಲಿಕೆ ಮಾಡಲು ₹ 8 ಸಾವಿರ ವೆಚ್ಚದಗಳ ಕಲಿಕಾ ಚಾರ್ಟ, ₹12,500 ವೆಚ್ಚದಲ್ಲಿ ಖುರ್ಚಿ ಖರೀದಿ ಹೀಗೆ ಒಟ್ಟು ₹ 50,500 ದೇಣಿಗೆ ನೀಡಿ ಶಾಲಾ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಈ ಚಿಕ್ಕ ಸೇವೆ ಮಾಡಿದ ಸಾರ್ಥಕ ತೆ ನನ್ನದಾಗಿದೆ ಎಂದು ಹೇಳಿಕೊಳ್ಳಲು ಅತೀವ ಸಂತೋಷ ವೆನಿಸುತ್ತದೆ.
ಇದೆ ರೀತಿಯಲ್ಲಿ ನಮ್ಮ ಜೀವನಕ್ಕೆ ಭದ್ರ ಅಡಿಪಾಯ ಹಾಕಿದ ಶಾಲೆಯನ್ನು ಎಲ್ಲರೂ ಸೇರಿಕೊಂಡು ಸರ್ವತೋಮುಖ ಅಭಿವೃದ್ಧಿ ಮಾಡಲು ಎಲ್ಲರೂ ಸಹಕಾರ ನೀಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಮನಗೌಡ ಬಿರಾದಾರ, ರಾಜೂಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ಪ್ರಶಾಂತ ಬಿರಾದಾರ, ರಾಮನಗೌಡ ಬಿರಾದಾರ, ಶ್ರೀನಿವಾಸ ಲಕ್ಷಣಟ್ಟಿ, ಶ್ರೀಶೈಲ ಹೆಬ್ಬಾಳಟ್ಟಿ, ಶಿವನಗೌಡ ಬಿರಾದಾರ, ವಿಶ್ವನಾಥ ಬಿರಾದಾರ, ಮಾದೇವ ಲಗಳಿ, ವಿಠಲ ಹೊಳೆಪ್ಪಗೋಳ, ನಾನಾಗೌಡ ಬಿರಾದಾರ, ಮಲ್ಲಪ್ಪ ಬಿರಾದಾರ, ಮಲ್ಲಪ್ಪ ಬಿರಾದಾರ ಇದ್ದರು.