ರಚನೆ
– ಡಾ. ಶಶಿಕಾಂತ ಪಟ್ಟಣ
ರಾಮದುರ್ಗ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
ನಾನು ಸತ್ತರೆ
ನನ್ನ ಹೆಣವನ್ನು
ಶವದ ಪೆಟ್ಟಿಗೆಯಲ್ಲಿರಿಸಿ
ಅದರ ಮೇಲೆ ನನ್ನೆಲ್ಲ
ಪದಕಗಳನ್ನಿಟ್ಟು
ನನ್ನ ಮನೆಗೆ ಕಳುಹಿಸಿ
ನನ್ನ ತಾಯಿಗೆ
ನನ್ನಯುದ್ಧಕಾರ್ಯದ
ಬಗ್ಗೆ ಹೇಳಿ
ನನ್ನ ತಂದೆಗೆ ನನ್ನೆದುರು
ಬಾಗದಿರಲು ತಿಳಿಸಿ
ಅವನು ಕೊಟ್ಟ
ಧೈರ್ಯ ಶಕ್ತಿಯೆನಗೆ
ನನ್ನಿಂದ ಅಪ್ಪನಿಗೆ
ಈಗಾವ ಕಿರಿಕಿರಿಯಿಲ್ಲ
ನನ್ನ ತಮ್ಮನಿಗೆ
ಓದಲು ಹೇಳಿ
ನನ್ನ ಬೈಕ್ ನ ಕೀಲಿ
ಅವನಿಗೆ ಕೊಟ್ಟು ಬಿಡಿ
ನನ್ನ ವಿಮೆಯ ಹಣ
ತಂಗಿಗೆ ಕೊಟ್ಟು ಬಿಡಿ
ಅವಳ ಮದುವೆ ನಿಬ್ಬಣಕೆ
ನನ್ನ ಪುಟ್ಟ ಉಡುಗೊರೆ
ಎಲ್ಲರಿಗೂ ತಿಳಿಸಿ
ಇರದಿರಲಿ ನೋವು ದುಃಖ
ಸೂರ್ಯ ಮುಳುಗಿದ ಮೇಲೆ
ನನಗೆ ದೀರ್ಘ ನಿದ್ದೆ
ಭೂಮಿಯಿಂದ ಬಂದವನು
ಭೂಮಿಗೆ ತೆರಳುವೆನು
ರಾಷ್ಟ್ರಕ್ಕೆ ಅಳದಿರಲು ಕೋರಿಕೆ
ಸೈನಿಕ ಸಾಯಲೇ ಹುಟ್ಟಿದ್ದು
ಸಾಯುವುದು ವಾಡಿಕೆ
