ಉದಯರಶ್ಮಿ ದಿನಪತ್ರಿಕೆ
ಇಂಡಿ: ಮನುಷ್ಯ ಬದುಕ ಬೇಕಾದರೆ ರಕ್ತ ಮುಖ್ಯ. ಆದರೆ ಅಪಘಾತದಂಥ ತುರ್ತು ಸಂದರ್ಭದಲ್ಲಿ ಅಗತ್ಯವಿದ್ದವರಿಗೆ ರಕ್ತದಾನ ಮಾಡುವದರಿಂದ ಇನ್ನೊಬ್ಬರ ಜೀವ ಉಳಿಸಿದ ಪೂಣ್ಯ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಬಸವರಾಜ ಸಾಹುಕಾರ ಕುಮಸಗಿ ಹೇಳಿದರು.
ಪಟ್ಟಣದ ಕರ್ನಾಟಕ ಬಿಇಡಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಘಟಕ ಇಂಡಿ, ಶ್ರೀ ಸತ್ಯ ಸಾಯಿಬಾಬಾ ಸಾಯಿ ಸಮಿತಿ, ಸಹಯೋಗದಲ್ಲಿ ಭಗವಾನ ಸಾಯಿಬಾಬಾರ ೧೦೦ ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಮಾತನಾಡಿ ರಕ್ತದಾನ ಮಾಡುವದು ಒಳ್ಳೆಯ ಕಾರ್ಯ ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ. ರಕ್ತದ ತೊಂದರೆ ಎದುರಾದಾಗ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಅಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರದ ವಿ.ಸಿ.ನಾಗಠಾಣ, ಕಿರಣ ಶೇಖದಾರ,ಸಂಸ್ಥೆಯ ಕಾರ್ಯದರ್ಶಿ ಪ್ರಭುಲಿಂಗ ಕತ್ತಿ, ಶ್ರೀಮತಿ ಗಂಗಾ ಗಲಗಲಿ, ಸಿ.ಎಸ್.ಪೂಜಾರಿ, ಶ್ರೀಮತಿ ಎಸ್.ಎಸ್.ಉಟಗಿ, ಸಂಚಾಲಕ ವಿಶ್ವನಾಥ ಲಬ್ಬಾ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸಂಗಣ್ಣ ಈರಾಬಟ್ಟೆ, ಶಿವಾನಂದ ಕೊಪ್ಪ ವೇದಿಕೆಯ ಮೇಲಿದ್ದರು.