ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಲಮಟ್ಟಿ ಡ್ಯಾಮದಿಂದ ಚಿಮ್ಮಲಗಿ ಏತ ನೀರಾವರಿ ಮೂಲಕ ನಾಗಠಾಣ ಕಾಲುವೆ ಮುಖಾಂತರ ಜಂಬಗಿ ಕೆರೆ ತುಂಬುವ ಯೋಜನೆ ಅಡಿಯಲ್ಲಿ ಕೆನಾಲ್‌ಗೆ ನೀರು ಹರಿಸಬೇಕೆಂದು ಒತ್ತಾಯಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿ, ವಿಜಯಪುರ ಜಿಲ್ಲೆ, ವಿಜಯಪುರ ತಾಲುಕು, ಅಂಕಲಗಿ, ಆಹೇರಿ, ಹುಣಶ್ಯಾಳ, ಹಾಗೂ ನಾಗಠಾಣ ಗ್ರಾಮಗಳಲ್ಲಿ ಶೇತಿ ಕೆಲಸ ಮಾಡುತ್ತಿರುವ ನಮಗೆ ನೀರಿನ ತೊಂದರೆಯಿಂದ ನಮ್ಮ ಹೊಲದ ಬೆಳೆಗಳನ್ನು ಉಳಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ಹಾಗೂ ಗ್ರಾಮಗಳ ದನಕರುಗಳು ಸರಿಯಾದ ನೀರಿಲ್ಲದೇ ಬಿಸಿಲಿನಲ್ಲಿ ಬಹಳ ಪರಿತಪಿಸುತ್ತಿವೆ. ಕಾರಣ ನಮ್ಮ ಎಲ್ಲ ಹಳ್ಳಿಗಳಿಗೂ ಕೆನಾಲ್ ಹಾಯ್ದು ಹೋಗಿರುವುದರಿಂದ ಆಲಮಟ್ಟಿ ಡ್ಯಾಮದಿಂದ ಚಿಮ್ಮಲಗಿ ಏತ ನೀರಾವರಿ ಮೂಲಕ ನಾಗಠಾಣ ಕಾಲುವೆ ಮುಖಾಂತರ ಜಂಬಗಿ ಕೆರೆ ತುಂಬುವ ಯೋಜನೆ ಅಡಿಯಲ್ಲಿ ಕೆನಾಲ್ ಗೆ ನೀರು ಹರಿಸುವ ವಿನಂತಿಸುತ್ತೇವೆ. ನಮ್ಮ ಹಳ್ಳಿಗಳಲ್ಲಿ ಹಾಯ್ದು ಹೋಗಿರುವ ಕೆನಾಲಿಗೆ ಎಲ್ಲ ಜಮೀನುಗಳಿಗೂ ಸಾಕಾಗುವಷ್ಟು ನೀರನ್ನು ಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಗ್ರಾಮ ಘಟಕದ ಅಧ್ಯಕ್ಷ ರಾಜೇಸಾ ನದಾಫ್, ಬಂದಗಿಪಟೇಲ ಬಿರಾದಾರ, ಅಜೀಜಪಟೇಲ ಪಾಟೀಲ, ಪರಮಾನಂದ ಬಮ್ಮನಳ್ಳಿ, ಮುತ್ತಪ್ಪ ಇಂಡಿ, ಗಫೂರಪಟೇಲ ಪಾಟೀಲ, ತೌಸೀಪ್ ಮುಲ್ಲಾ, ಶ್ರೀಶೈಲ, ಶಿರಕನಳ್ಳಿ, ಅಮೋಘಿ ಉಕ್ಕಲಿ, ಕಲ್ಲಪ್ಪ ಅವಜಿ, ಕಲ್ಲಪ್ಪ ಮಣೂರ, ಅಮೋಘಿ ಇಂಡಿ, ಶಿವಪ್ಪ ನಾಗರಳ್ಳಿ, ಮಾಂತುಗೌಡ ಬಿರಾದಾರ ಮುಂತಾದವರು ಇದ್ದರು.