Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯ ನಡೆಸುವ ಗಣಕಯಂತ್ರ ಪ್ರವೇಶ ಪರೀಕ್ಷೆಗಳು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ನೀಲಕಂಠೇಶ್ವರ ನಗರ ಹಾಗೂ ಅಲ್-ಅಮೀನ್ ಮೆಡಿಕಲ್ ಕಾಲೇಜ ಪರೀಕ್ಷಾ ಕೇಂದ್ರಗಳಲ್ಲಿ ಫೆ.೩ ರಿಂದ ಫೆ.೧೦ರ ವರೆಗೆ ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ದಿನದಂದು ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟವಾಚ್, ಬ್ಲೂಟೂತ್ ಡಿವೈಸ್, ಪೇಜರ್, ವೈರ್‌ಲೆಸ್, ಕ್ಯಾಲ್ಕುಲೇಟರ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರನೆಟ್, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಲಾಗಿದೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂಸಾರದ ವಿಷಯದಲ್ಲಿ ಬುದ್ಧಿವಾದ ಹೇಳಲು ಬಂದ ಅತ್ತೆಯನ್ನು ಬರ್ಬರವಾಗಿ ಕೊಂದು ನಂತರ ಅವಳ ಶವವನ್ನು ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದ ಅಮಾನವೀಯ ಘಟನೆ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಜರುಗಿದೆ.ಚಿಕ್ಕರೂಗಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ಜರುಗಿದ್ದು ಅಪಾದಿತ ವ್ಯಕ್ತಿ ಭೀಮಪ್ಪ ಗುಗ್ಗರಿ ಎಂಬುವವನೇ ತನ್ನ ಅತ್ತೆ ಗೌರಾಬಾಯಿ ಈರಣ್ಣ ನರಳಿ ಎನ್ನುವವಳನ್ನು ಮಂಗಳವಾರ ಬೆಳಿಗ್ಗೆ ತೋಟದ ಮನೆಯಲ್ಲಿ ಸಲಿಕೆಯಿಂದ ಬರ್ಬರವಾಗಿ ಹತ್ಯೆಗೈದು ನಂತರ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಅವಳ ಶವವನ್ನು ಚೀಲದಲ್ಲಿ ತುಂಬಿ ಕಾಲುವೆಯಲ್ಲಿ ಎಸೆದಿದ್ದಾನೆ. ನಂತರ ಯಾರಿಗೂ ಹೇಳದಂತೆ ಹೆಂಡತಿಗೂ ಪ್ರಾಣ ಬೆದರಿಕೆ ಒಡ್ಡಿದ್ದಾನೆ.ಬುಧವಾರ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಎಸ್.ಪಿ ಲಕ್ಷ್ಮಣ ನಿಂಬರಗಿ, ಎ.ಎಸ್.ಪಿ ಶಂಕರ ಮಾರಿಹಾಳ, ವಿಜಯಪುರ ಗ್ರಾಮಾಂತರ ಉಪವಿಭಾದ ಡಿಎಸ್‌ಪಿ ಜಿ.ಎಚ್.ತಳಕಟ್ಟಿ ಹಾಗೂ ದೇವರಹಿಪ್ಪರಗಿ ಪಿಎಸ್‌ಐ ಬಿ.ಎ.ತಿಪರಡ್ಡಿ ಭೇಟಿ ನೀಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನಾಗಠಾಣ ಕಾಲುವೆಯ ನಿರ್ಮಾಣ ಹಂತದ ಉಪಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಈರುಳ್ಳಿ ಬೆಳೆ ಹಾನಿಗೊಳಗಾದ ಘಟನೆ ಬುಧವಾರ ಜರುಗಿದೆ.ತಾಲ್ಲೂಕಿನ ಹರನಾಳ ಗ್ರಾಮ ರಸ್ತೆಯಲ್ಲಿನ ನಾಗಠಾಣ ಕಾಲುವೆಯ ನಿರ್ಮಾಣ ಹಂತದಲ್ಲಿರುವ ಉಪಕಾಲುವೆ ಸೋಮವಾರ ರಾತ್ರಿ ಒಡೆದಿದ್ದು ಕಾಲುವೆ ನೀರು ಇಂಗಳಗಿ ಗ್ರಾಮದ ದೇವಪ್ಪ ಕೋಣ್ಣೂರ, ಶಾಂತಗೌಡ ಗೋಡ್ಯಾಳ ಇವರ ಜಮೀನುಗಳಲ್ಲಿ ನಿಂತು ನಂತರ ಈಗಷ್ಟೇ ಈರುಳ್ಳಿ ಭಿತ್ತನೆ ಮಾಡಿದ ಶರಣಗೌಡ ಗೋಡ್ಯಾಳ ಅವರ ಜಮೀನುಗಳಿಗೆ ಹರಿದಿದೆ. ಈಗ ಈರುಳ್ಳಿ ಭಿತ್ತನೆ ಮಾಡಿದ ೪ ಎಕರೆ ಜಮೀನು ಬಹುತೇಕ ನೀರಿನಿಂದ ಆವೃತ್ತವಾಗಿದ್ದು ಸಾಲ ಪಡೆದು ಭಿತ್ತನೆ ಮಾಡಿದ ರೈತ ಕಂಗಾಲಾಗಿದ್ದಾನೆ.ಉಪಕಾಲುವೆ ನಿರ್ಮಾಣ ಹಂತದಲ್ಲಿ ಅವೈಜ್ಞಾನಿಕ ಕಾಮಗಾರಿ ಅಳವಡಿಸಿಕೊಂಡಿದ್ದೇ ಇಂದು ಕಾಲುವೆ ಒಡೆಯಲು ಮುಖ್ಯ ಕಾರಣ ಎಂದು ಆರೋಪಿಸಿರುವ ರೈತರು, ಕಾಲುವೆ ಒಡೆದು ಹಾನಿಯಾದ ಕುರಿತು ಗುತ್ತಿಗೆದಾರರಿಗೆ ದೂರವಾಣಿ ಮೂಲಕ ತಿಳಿಸಿದಾಗ ಅವರಿಂದ ಪ್ರಾಣ ಬೆದರಿಕೆ ಬಂತೆ ವಿನಹಃ ಯಾವುದೇ ಸಮಾಧಾನ ಬರಲಿಲ್ಲ.ಒಡೆದ ಕಾಲುವೆಯ ಸ್ಥಳಕ್ಕೆ ಕೂಡಲೇ ಕೆಬಿಜೆಎನ್‌ಎಲ್…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಫೆ.೧ ಮತ್ತು ೨ರಂದು ಬಾಗಲಕೋಟೆ ಜಿಲ್ಲೆಯ ಸೂಕ್ಷೇತ್ರ ಕೂಡಲ ಸಂಗಮದ ಸಭಾ ಮಂಟಪದಲ್ಲಿ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ೩ನೇ ರಾಜ್ಯಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲ ಹಂಡೇವಜೀರ ಸಮಾಜ ಬಾಂಧವರು ಭಾಗಿಯಾಗುವ ಮೂಲಕ ಸಮಾವೇಶದ ಮೆರುಗನ್ನು ಹೆಚ್ಚಿಸಬೇಕು ಎಂದು ಸಮಾಜದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ, ಜಿಲ್ಲಾಧ್ಯಕ್ಷ ಸಂಗನಗೌಡ ಕರಭಂಟನಾಳ, ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ತಂಗಡಗಿ ಮತ್ತು ತಾಲೂಕು ಅಧ್ಯಕ್ಷ ಎಂ.ಬಿ.ಬಿರಾದಾರ ವಕೀಲರು ಮನವಿ ಮಾಡಿಕೊಂಡರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಮಾವೇಶವನ್ನು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ಬೆಂಗಳೂರು, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲ್ಬುರ್ಗಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಫೆ.೧ ರಂದು ಹಂಡೆ ಅರಸರ ಆಕರಗಳ ವಿಚಾರ ಸಂಕಿರಣ, ಹಂಡೆ ಅರಸರ ಅಭಿವೃದ್ಧಿ ಚಿಂತನೆಗಳು, ಹಂಡೆ ಅರಸರ ಪ್ರಕಟಿತ ಕೃತಿಗಳ ಪರಾಮರ್ಶೆ, ಹಂಡೆ ವಜೀರ ಜನಾಂಗದ ಅನನ್ಯತೆ ಕುರಿತು ಗೋಷ್ಠಿಗಳು ನಡೆಯಲಿವೆ. ಫೆ.೨…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ ಬಿ.ಎಲ್.ಡಿ.ಇ. ಸಂಸ್ಥೆಯ ನಾನಾ ಶಾಲೆ- ಕಾಲೇಜುಗಳ ಕ್ರೀಡಾಕೂಟ-2025 ಫೆಬ್ರವರಿ 1 ರಂದು ಶನಿವಾರ ನಗರದಲ್ಲಿ ನಡೆಯಲಿದ್ದು, ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟ ಪ್ರಾರಂಭವಾಗಲಿದೆ.ಈ ಸಂದರ್ಭದಲ್ಲಿ ಆಶಾ ಎಂ. ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಕ್ರೀಡಾ ಸಮಿತಿಯ ಉಪಾಧ್ಯಕ್ಷ ಡಾ. ಗಿರೀಶ ಕುಲ್ಲೊಳ್ಳಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿ. ಎಸ್. ಬಗಲಿ, ಪ್ರೊ. ಎಸ್. ಎಚ್. ಲಗಳಿ, ಐ. ಎಸ್. ಕಾಳಪ್ಪನವರ, ಬಿ. ಆರ್. ಪಾಟೀಲ ಉಪಸ್ಥಿತರಿರಲಿದ್ದು, ಕುಲಪತಿ ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೧೧ ನೇ ದಿನಕ್ಕೆ ಮುಂದುವರೆದಿದೆ.ಬಾಕಿ ವೇತನ ಪಾವತಿಸಬೇಕು, ಬೀದರ ಮಾದರಿಯಲ್ಲಿ ಸಹಕಾರ ಸಂಘದ ಮೂಲಕ ವೇತನ ಪಾವತಿಸಬೇಕು. ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರ ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆ ಕಡ್ಡಾಯವಾಗಿ ಕೊಡಬೇಕು. ಖಾಯಂ ನೌಕರರು ೧೫ ದಿನಕ್ಕಿಂತ ಹೆಚ್ಚು ರಜೆ ಹಾಕಿದಾಗ ಆ ಸ್ಥಳದಲ್ಲಿ ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಬೇಕು. ಕನಿಷ್ಟ ವೇತನ ೩೧ ಸಾವಿರ ನಿಗದಿ ಪಡಿಸಬೇಕು. ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು. ೧೦ ವರ್ಷ ಮೆಲ್ಪಟ್ಟ ಸೇವೆ ಸಲ್ಲಿಸಿದ ನೌಕರರಿಗೆ…
ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳೆಯರು ಎಲ್ಲ ಸಮಸ್ಯೆಗಳಿಂದ ಹೊರಬರಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ವಿಜಯಪುರ ಶಾಖೆ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮೃದ್ಧಿ ಸಂತೃಪ್ತಿ’ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸೌರಶಕ್ತಿಯ ಪಾತ್ರ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾವಲಂಬಿತನವೆಂದರೆ ದೊಡ್ಡ ಉದ್ಯಮಿಯಾಗುವುದು ಅಥವಾ ಅಪಾರ ಸಂಪತ್ತು ಸಂಪಾದಿಸುವುದಲ್ಲ, ಆದರೆ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಆರ್ಥಿಕವಾಗಿ ಸುಸ್ಥಿರ ಜೀವನವನ್ನು ರೂಪಿಸಿಕೊಳ್ಳುವುದು. ಮಹಿಳೆಯರು ತಮ್ಮ ನೈಪುಣ್ಯತೆಯನ್ನು ಅರಿತು, ಅದನ್ನು ಅಭಿವೃದ್ಧಿಪಡಿಸಿಕೊಂಡರೆ, ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ ನೇ ಸಾಲಿಗಾಗಿ ರಾಷ್ಟ್ರೀಯ ಮಿಲಿಟರಿ ಶಾಲೆಯ ೬ನೇ ತರಗತಿಯ ಪ್ರವೇಶಕ್ಕಾಗಿ ದಿನಾಂಕ ೦೮-೧೨-೨೦೨೪ ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ವಿಜಯಪುರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್‌ನ ೫ ವಿದ್ಯಾರ್ಥಿಗಳು ಆಯ್ಕೆಯಾಗಿ ಅಮೋಘ ಸಾಧನೆಗೈದಿದ್ದಾರೆ.ಸಂಸ್ಥೆಯ ವಿದ್ಯಾರ್ಥಿಗಳಾದ ಸಾತ್ವಿಕ ಎಮ್. ಬಳಿಗಾರ (೧೨೭), ವಿಹನ್ನಕುಮಾರ ಎನ್. ಪೇಠಾ (೧೨೪) ರಿಶಾನ್ ಪಿ. ಬಗಲಿ (೧೧೭), ಸಮರ್ಥ ಬಿ. ದನ್ನೂರ (೧೦೦) ಹಾಗೂ ಪ್ರಗತಿ ಟಿ. ಚೌರಿ (೮೩) ಉತ್ತಮ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಎಲ್ಲ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ, ಕಳೆದ ೨೮ ವರ್ಷಗಳಲ್ಲೇ ಇದು ಅತ್ಯುತ್ತಮ ಫಲಿತಾಂಶವಾಗಿದ್ದು ಶೈನಿಕ ಶಾಲೆ, ನವೋದಯ, ಕಿತ್ತೂರು ಹಾಗೂ ಆರ್.ಎಂ.ಎಸ್ ಶಾಲೆಗಳಿಗೆ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಕಳಿಸುತ್ತಿರುವ ಕರ್ನಾಟಕದ ಏಕೈಕ ಸಂಸ್ಥೆಯಾಗಿ ಮತ್ತೋಮ್ಮೆ ಸಾಬೀತು ಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಫಿಜಿಯಾಲಜಿ ವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪ್ರೊಫೆಸರ್ ಪ್ರೊ. ಕುಸಾಲ ದಾಸ ಅವರಿಗೆ ದಕ್ಷಿಣ ಏಷಿಯಾ ಶರೀರ ರಚನಾ ಶಾಸ್ತ್ರಜ್ಞರ ಸಂಘ(ಸ್ಯಾಪ್) (South Asian Association of Physiologists(SAAP)ಸೌಥ್ ಎಷಿಯಾ ಅಸೋಸಿಯೇಷನ್ ಆಫ್ ಫಿಜಿಯಾಲಾಜಿಸ್ಟಸ್(SAAP)ಕ್ಕೆ ಅಜೀವ ಸಲಹೆಗಾರ ಎಂದು ಘೋಷಣೆ ಮಾಡಲಾಗಿದೆ.ಸ್ಯಾಪ್ ಅಧ್ಯಕ್ಷ ಪ್ರೊ. ಸಮೀನಾ ಮಲಿಕ ಮತ್ತು ಸೆಕ್ರೆಟರಿ ಜನರಲ್ ಪ್ರೊ. ನಯ್ಮಾ ಸುಲ್ತಾನ ಅವರು ಈ ಘೋಷಣೆ ಮಾಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಕುಸಾಲ ದಾಸ ಅವರು, ಈ ಗೌರವದಿಂದ ತಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಇನ್ನಷ್ಟು ಸಂಶೋಧನೆ ಕೈಗೊಳ್ಳಲು ಹೊಸ ಉತ್ಸಾಹ ನೀಡಿದೆ. ಡೀಮ್ಡ್ ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ನಿರಂತರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಪ್ರೊ. ಕುಸಾಲ ದಾಸ ಅವರಿಗೆ ಈ ಗೌರವ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಸಂತಸ ವ್ಯಕ್ತಪಡಿಸಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಅವರಿಗೆ ಭಾರತ ಸರಕಾರದಿಂದ ಮತ್ತೋಂದು ಪೇಟೆಂಟ್ ದೊರೆತಿದೆ.ಡಾ. ಆರ್. ವಿ. ಕುಲಕರ್ಣಿ ಅವರು ನಡೆಸಿದ ಸಂಶೋಧನೆ ಫಾರ್ಮಾಸ್ಯೂಟಿಕಲ್ ಕಂಪೊಜಿಷನ್ ಆಫ್ ಎಲೆಕ್ಟ್ರಿಕಲಿ- ಸೆನ್ಸಿಟಿವ್ ಪಾಲಿಕ್ರೈಲಮೈಡ್ ಗ್ರಾಫ್ಟೆಡ್ ಗಮ್ ಟ್ರ್ಯಾಗಕ್ಯಾಂತ್ ಕೊಪೊಲೈಮರ್ ಆಫ್ ಎಲೆಕ್ಟೋ ಮಾಡುಲೇಟೆಡ್ ಟ್ರಾನ್ಸಡರ್ಮಲ್ ಡ್ರಗ್ ಡೆಲಿವರಿ(Pharmaceutical Composition of Electrically-Sensitive Polyacrylamide-grafted-Gum Tragacanth Copolymer for Electro-Modulated Transdermal Drug Delivery) ವಿಷಯಕ್ಕೆ ಭಾರತ ಸರಕಾರ ಪೇಟೆಂಟ್ ಘೋಷಿಸಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಆರ್. ವಿ. ಕುಲಕರ್ಣಿ ಅವರು, ಪೇಟೆಂಟ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತಮಗೆ ಸಂದಿರುವ ಆರನೇ ಪೇಟೆಂಟ್ ಆಗಿದ್ದು, ಇನ್ನೂ ಐದು ಪೇಟೆಂಟ್ ಪ್ರಕ್ರಿಯೆಗಳು ನಾನಾ ಹಂತದಲ್ಲಿವೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪ್ರೋತ್ಸಾಹ ಮತ್ತು ಸಹಕಾರ ಕಾರಣ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.ಡಾ. ಆರ್. ವಿ. ಕುಲಕರ್ಣಿ…
