ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಅವರಿಗೆ ಭಾರತ ಸರಕಾರದಿಂದ ಮತ್ತೋಂದು ಪೇಟೆಂಟ್ ದೊರೆತಿದೆ.
ಡಾ. ಆರ್. ವಿ. ಕುಲಕರ್ಣಿ ಅವರು ನಡೆಸಿದ ಸಂಶೋಧನೆ ಫಾರ್ಮಾಸ್ಯೂಟಿಕಲ್ ಕಂಪೊಜಿಷನ್ ಆಫ್ ಎಲೆಕ್ಟ್ರಿಕಲಿ- ಸೆನ್ಸಿಟಿವ್ ಪಾಲಿಕ್ರೈಲಮೈಡ್ ಗ್ರಾಫ್ಟೆಡ್ ಗಮ್ ಟ್ರ್ಯಾಗಕ್ಯಾಂತ್ ಕೊಪೊಲೈಮರ್ ಆಫ್ ಎಲೆಕ್ಟೋ ಮಾಡುಲೇಟೆಡ್ ಟ್ರಾನ್ಸಡರ್ಮಲ್ ಡ್ರಗ್ ಡೆಲಿವರಿ(Pharmaceutical Composition of Electrically-Sensitive Polyacrylamide-grafted-Gum Tragacanth Copolymer for Electro-Modulated Transdermal Drug Delivery) ವಿಷಯಕ್ಕೆ ಭಾರತ ಸರಕಾರ ಪೇಟೆಂಟ್ ಘೋಷಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ. ಆರ್. ವಿ. ಕುಲಕರ್ಣಿ ಅವರು, ಪೇಟೆಂಟ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ತಮಗೆ ಸಂದಿರುವ ಆರನೇ ಪೇಟೆಂಟ್ ಆಗಿದ್ದು, ಇನ್ನೂ ಐದು ಪೇಟೆಂಟ್ ಪ್ರಕ್ರಿಯೆಗಳು ನಾನಾ ಹಂತದಲ್ಲಿವೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪ್ರೋತ್ಸಾಹ ಮತ್ತು ಸಹಕಾರ ಕಾರಣ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಡಾ. ಆರ್. ವಿ. ಕುಲಕರ್ಣಿ ಅವರ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.