Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ಆಯ-ವ್ಯಯ ಬಜೆಟ್ ಸಾರ್ವಜನಿಕ ಪೂರ್ವಭಾವಿ ಸಭೆಯನ್ನು ಇದೇ ದಿನಾಂಕ : ೧೯-೧೨-೨೦೨೪ರ ಮಧ್ಯಾಹ್ನ ೪ ಗಂಟೆಗೆ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ತಿಳಿಸಿದ್ದಾರೆ.ಮಹಾನಗರ ಪಾಲಿಕೆಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆ ಒಕ್ಕೂಟಗಳ ಸದಸ್ಯರು ಮತ್ತು ಇತರೆ ಸಂಘ-ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವಾಸೋದ್ಯಮ ಇಲಾಖೆಯಿಂದ ೨೦೨೪-೨೫ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ-ಆಥಿತ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.ಆಸಕ್ತರು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಅರ್ಜಿ ಪಡೆದು, ಡಿಸೆಂಬರ್ ೨೮ರ ಸಂಜೆ ೫ ಗಂಟೆಯೊಳಗಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿ ಪ್ರವಾಸೋಧ್ಯಮ ಕಾರ್ಯಾಲಯ, ಪ್ರವಾಸಿ ಪ್ಲಾಜಾ, ಬ್ಲಾಕ್-೧, ಇಂಡಿ ರಸ್ತೆ ಇಲ್ಲಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಪ್ರವಾಸೊಧ್ಯಮ ಇಲಾಖೆಯ ದೂರವಾಣಿ ಸಂಖ್ಯೆ ೦೮೩೫೨-೨೫೦೩೫೯ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರವಾಸೋದ್ಯಮ ಇಲಾಖೆಯಿಂದ ೨೦೨೪-೨೫ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ-ಆಥಿತ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.ಆಸಕ್ತರು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಅರ್ಜಿ ಪಡೆದು, ಡಿಸೆಂಬರ್ ೨೮ರ ಸಂಜೆ ೫ ಗಂಟೆಯೊಳಗಾಗಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿ ಪ್ರವಾಸೋಧ್ಯಮ ಕಾರ್ಯಾಲಯ, ಪ್ರವಾಸಿ ಪ್ಲಾಜಾ, ಬ್ಲಾಕ್-೧, ಇಂಡಿ ರಸ್ತೆ ಇಲ್ಲಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಪ್ರವಾಸೊಧ್ಯಮ ಇಲಾಖೆಯ ದೂರವಾಣಿ ಸಂಖ್ಯೆ ೦೮೩೫೨-೨೫೦೩೫೯ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ತಿಕೋಟಾ ನೂತನ ಮಹಾವಿದ್ಯಾಲಯದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮನುಷ್ಯ ನಿತ್ಯದ ಜಂಜಾಟದಲ್ಲಿ ತನ್ನ ಸ್ವಯಂ ಆರೋಗ್ಯದ ರಕ್ಷಣೆಯನ್ನೇ ಮರೆಯುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ಬಿ.ಎಲ್.ಡಿ.ಇ. ಆಯುರ್ವೇದ ಮಹಾವಿದ್ಯಾಲಯದ ಡಾ. ಆರ್ .ಎ.ದೇಶಮುಖ ಅವರು ಹೇಳಿದರು.ವಿಜಯಪುರದ ಬಿ.ಎಲ್.ಡಿ.ಇ. ಆಯುರ್ವೇದ ಮಹಾವಿದ್ಯಾಲಯ ಹಾಗೂ ನೂತನ ಮಹಾವಿದ್ಯಾಲಯ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬರೂ ಅಂತರ್ ಶುದ್ದಿ ಬಾಹ್ಯ ಶುದ್ದಿಯಿಂದ ಇರುವುದು ಮುಖ್ಯವೆನಿಸುತ್ತದೆ.ನಾವು ಇವತ್ತು ಎದುರಿಸುವ ಅನೇಕ ರೋಗಗಳಿಗೆ ಮನೆ ಮದ್ದುಗಳ ಮೂಲಕವೇ ಪರಿಹಾರ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಮನೆ ಮದ್ದುಗಳ ಅರಿವು ಅಗತ್ಯವಾಗಿದೆ. ಪ್ರತಿ ವ್ಯಕ್ತಿ ತನ್ನ ಜೀವನದಲ್ಲಿ ಪ್ರಮುಖ ಮೂರು ಸ್ಥಂಬಳಗಳಾದ ಆಹಾರ, ನಿದ್ರೆ, ಬ್ರಹ್ಮಚರ್ಯ ಇವುಗಳನ್ನು ನಿಯಮಿತವಾಗಿ ಪಾಲಿಸಿದ್ದಾದರೆ ರೋಗ ಮುಕ್ತ ಜೀನವ ನಡೆಸಲು ಅನುಕೂಲವಾಗುತ್ತದೆ. ಇವತ್ತು ಚಿಕ್ಕ ಮಕ್ಕಳೆಲ್ಲ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಜಂಕ್ ಫುಡ್ ನಂತಹ ರಾಸಾಯನಿಕ ಯುಕ್ತ ಆಹಾರ ಸೇವನೆ ಒಂದು ಕಾರಣವಾಗಿದೆ. ಹೀಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ಮಂಗಳವಾರ ಅಹೋರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದರು.ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಮುಷ್ಕರ ನಿರತ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.ಮುಷ್ಕರ ಬೆಂಬಲಿಸಿ ಸಿಐಟಿಯು ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಈ ಸಂದರ್ಭದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. ಮತ್ತು ೨೦೧೩ರ ಆಹಾರ ಭದ್ರತಾ ಕಾಯ್ದೆ, ೨೦೦೯ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ಗಳು ಇವರನ್ನು ೩ ಮತ್ತು ೪ ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟೀ…

Read More

ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧದ ಚುನಾವಣಾ ಬಾಂಡ್ ಗಳ ನೆಪದಲ್ಲಿ ಹಣ ಸುಲಿಗೆ ಆರೋಪದ ಪ್ರಕರಣ ಬೆಂಗಳೂರು: ಚುನಾವಣಾ ಬಾಂಡ್ ಗಳ ನೆಪದಲ್ಲಿ ಹಣ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.ನಗರದ ಸಾಮಾಜಿಕ ಹೋರಾಟಗಾರ ಆದರ್ಶ ಆರ್ ಅಯ್ಯರ್ ಎಂಬುವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಸೆಪ್ಟೆಂಬರ್ ನಲ್ಲಿ ಎಫ್ ಐಆರ್ ದಾಖಲಿಸಿದ್ದರು.ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು ಹಾಗೂ ಬಿಜೆಪಿ ರಾಷ್ಟ್ರ ರಾಜ್ಯ ಮಟ್ಟದ ಪದಾಧಿಕಾರಿಗಳ ವಿರುದ್ದವೂ ಎಫ್ ಐಆರ್ ದಾಖಲಾಗಿತ್ತು.ಆ ಸಂದರ್ಭದಲ್ಲಿ ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿದ್ದರೆ ಮತ್ತೋರ್ವ ಆರೋಪಿ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಕಟೀಲ್ ವಿರುದ್ಧದ ಪ್ರಕರಣವನ್ನು ಕೋರ್ಟ್ ಡಿಸೆಂಬರ್ 3 ರಂದು ರದ್ದುಗೊಳಿಸಿತ್ತು.ಚುನಾವಣಾ ಬಾಂಡ್‌ಗಳ ನೆಪದಲ್ಲಿ ಸಂಪೂರ್ಣ ಸುಲಿಗೆ ದಂಧೆಯಲ್ಲಿ ವಿವಿಧ ಹಂತದ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಭಾರತೀಯ ನ್ಯಾಯ ಸಂಹಿತಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾ. ಪಂ. ಸದಸ್ಯರಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ತಾವು ನಡೆಸುತ್ತಿರುವ ಹೋರಾಟ ಫಲ ನೀಡುತ್ತಿದ್ದು, ತಮ್ಮ ಆಗ್ರಹಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಾನು ಸದನದ ಒಳಗೆ ಮತ್ತು ಹೊರಗೆ ನಡೆಸಿದ ಹೋರಾಟದ ಫಲವಾಗಿ ಗ್ರಾ. ಪಂ ಸದಸ್ಯರಿಗೆ ನೀಡಲಾಗುತ್ತಿದ್ದ ಗೌರವಧನವರನ್ನು ಸರಕಾರ ಹೆಚ್ಚಳ ಮಾಡಿದೆ. ಈ ಮುಂಚೆ ಗ್ರಾ. ಪಂ. ಅಧ್ಯಕ್ಷರಿಗೆ ರೂ. 3000, ಉಪಾಧ್ಯಕ್ಷರಿಗೆ ದೊರೆಯುತ್ತಿದ್ದ ರೂ. 2000 ಮತ್ತು ಸದಸ್ಯರಿಗೆ ಸಿಗುತ್ತಿದ್ದ ರೂ.1000 ಗೌರವಧನವನ್ನು ಸಿಗುತ್ತಿತ್ತು. ಆದರೆ, ನಾನು ನಿರಂತರ ಹೋರಾಟ ನಡೆಸಿದ ಫಲವಾಗಿ ಈಗ ಗ್ರಾ. ಪಂ. ಅಧ್ಯಕ್ಷರಿಗೆ ರೂ. 6000, ಉಪಾಧ್ಯಕ್ಷರಿಗೆ ರೂ. 4000 ಮತ್ತು ಸದಸ್ಯರಿಗೆ ರೂ. 2000 ಗೌರವ ಧನ ಸಿಗುತ್ತಿದೆ. ಆದರೂ, ಇದು ನಮಗೆ ಸಂತೃಪ್ತಿ ತಂದಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿ ಮತ್ತು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ಡಿಸೆಂಬರ್ 22 ರಂದು ನಗರದಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್- 2024 ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ತಂಡಗಳ ಕಲಾ ಪ್ರದರ್ಶನ ನೀಡಲಿದ್ದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿವೆ.ಓಟ ನಡೆಯಲಿರುವ ಡಿಸೆಂಬರ್ 22 ರಂದು ರವಿವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಈ ಕಲಾ ತಂಡಗಳು 17 ನಾನಾ ಭಾಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತ ಓಟದಲ್ಲಿ ಪಾಲ್ಗೋಳ್ಳುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಿವೆ.ವೃಕ್ಷೊಥಾನ್ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣ್ಯರು ಈ ಕಲಾ ತಂಡಗಳಿಗೆ ಮಾರ್ಗದರ್ಶನ ಮಾಡುತ್ತಿದ್ದು, ಒಟ್ಟಾರೆ ಸುಮಾರು 150ಕ್ಕೂ ಕಲಾವಿದರು ಈ ತಂಡಗಳಲ್ಲಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಸಾಂಸ್ಕತಿಕ ವಿಭಾಗದ ಶಿವನಗೌಡ ಪಾಟೀಲ ಮತ್ತು ಸೋಮು ಮಠ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಕಲಾ ತಂಡಗಳು ಮತ್ತು ಅವುಗಳು ಓಟಗಾರರಿಗೆ ಸ್ಪೂರ್ತಿ ತುಂಬಲು ನಿಗದಿ ಪಡಿಸಿರುವ…

Read More

ವಿಶ್ವಪ್ರಕಾಶ ಮಲಗೊಂಡಗೆ “ಬೆಸ್ಟ್ ಆಕ್ಟರ್” ಅವಾರ್ಡ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್ ಫೀಲಂ ಕೌನ್ಸಿಲ್ ಆಯೋಜಿಸಿರುವ ನಾಲ್ಕನೇಯ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ದಲ್ಲಿ ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ “ಬೆಸ್ಟ್ ಆಕ್ಟರ್” ಅವಾರ್ಡ ನೀಡಲಾಯಿತು.ಡಿಸೆಂಬರ್ 15/2024 ರವಿವಾರ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಸ್ಸಾಟೋ ರೀ ಕ್ರಿಯೇಷನ್ ಹಬ್ ನಲ್ಲಿ ಜರುಗಿದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಡಾ.ಎಂ ಎ ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್, ಆಂಧ್ರಪ್ರದೇಶ ಫೀಲಂ ಚೆಂಬರ್ ಅಧ್ಯಕ್ಷ ಅಂಬಾಟಿ ಮಧು ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟ, ಅವರು ವಿಶ್ವಪ್ರಕಾಶ ಮಲಗೊಂಡ ಅವರಿಗೆ ಅತ್ಯುತ್ತಮ ನಟನೆಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರು.ಚಲನಚಿತ್ರೋತ್ಸವದ ಸ್ಪರ್ಧೆಯಲ್ಲಿ ವಿಶ್ವಪ್ರಕಾಶ ನಟಿಸಿ ನಿರ್ದೇಶಿಸಿರುವ “ತುಷಾರ್” ಚಿತ್ರವೂ ಸಹ ಭಾಗವಹಿಸಿತ್ತು. ಸುಮಾರು 150 ಕ್ಕೂ ಹೆಚ್ಚು ಚಲನಚಿತ್ರಗಳು ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು. ವೇದಿಕೆ ಮೇಲೆ ಕೆಜಿಎಫ್ ಸಿನಿಮಾ ಸಾಹಿತ್ಯ ರಚನೆಕಾರ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಹೊಸ್ತಿಲ ಹುಣ್ಣಿಮೆಯ ನಿಮಿತ್ತ ರೇವತಗಾಂವ ಗ್ರಾಮದ ಶ್ರೀ ಖಂಡೋಬಾ ದೇವರು ಹಾಗೂ ಅವರ ಧರ್ಮಪತ್ನಿಯರಾದ ಮಾಲಸಾಬಾಯಿ ಮತ್ತು ಭಾನುಬಾಯಿ ದೇವರುಗಳ ಜಾತ್ರೆಯು ಎರಡು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಿತು.ಡಿ.೧೪ ರ ಶನಿವಾರದಂದು ಬೆಳಗಿನ ಜಾವ ೫ ಗಂಟೆಗೆ ರುದ್ರಾಭಿಷೇಕ ಪೂಜೆ ಹಾಗೂ ಭಕ್ತರಿಂದ ದೀಡ ನಮಸ್ಕಾರ ನಡೆಯಿತು. ಮಧ್ಯಾಹ್ನ ೩ ಗಂಟೆಗೆ ಶ್ರೀ ಖಂಡೋಬಾ ದೇವರ ಪಲ್ಲಕ್ಕಿ ಮಹೋತ್ಸವವು ವಿವಿಧ ವಾಧ್ಯವೈಭಗಳೊಂದಿಗೆ ಹಾಗೂ ಸುಮಂಗಲೆಯರ ಆರತಿ ಮತ್ತು ಪೂಜಾರಿಗಳ ಜ್ಯೋತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಂಡೋಬಾ ದೇವರ ಪಾದಗಟ್ಟಿ ತಲುಪಿತು. ಅಲ್ಲಿ ಪೂಜಾ ಕಾರ್ಯಕ್ರಮ ಮತ್ತು ನೈವೇದ್ಯ ಜರುಗಿದವು. ನಂತರ ಮೆರವಣಿಗೆಯು ಕಂದಲಗಾAವದ ೧೫ ಜನ ಪ್ರಸಿದ್ಧ ಕುದುರೆಗಾರರು ‘ಶ್ರೀ ಖಂಡೋಬಾ ದೇವರ ಅವತಾರದೊಂದಿಗೆ ಸವಾರಿ ಮಾಡಿದರು. ಸಂಜೆ ೮ ಗಂಟೆಯಿಂದ ರವಿವಾರ ನಸುಕಿನ ಜಾವ ೪ ಗಂಟೆಯವರೆಗೆ ಸಾಂಗಲಿ ಜಿಲ್ಲೆಯ ಆಸಂಗಿ ಗ್ರಾಮದ ಬಾಳು ವಾಫೆ ಮತ್ತು ಮಾಳಸಾ ಮುರಳಿ ಹಾಗೂ ಮಂಗಸೂಳಿ ಇವರ…

Read More