ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಳವಾಡ ಮಧ್ಯಂತರ ಪಂಪಿನ ಮನೆಯಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೦೦ಎಂ.ಎಂ ವ್ಯಾಸದ ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ್ ೩೨.೬೦೦ಕಿ.ಮೀ ಸೂರ್ಯ ಕೆರಿಯರ್ ಅಕಾಡೆಮಿ ಹತ್ತಿರ (ಕೋರಿಹಳ್ಳ) ನೀರು ಸೋರುವಿಕೆ ಮತ್ತು ಚೈನೇಜ್ ೪೨.೨೦೦ ಕಿ.ಮೀ. ಆಯುರ ಗ್ರಾಮ ಹತ್ತಿರ ೯೦೦ಮಿ.ಮೀ ವ್ಯಾಸದ ಪಿ.ಎಸ್.ಸಿ ಕೊಳವೆ ಮಾರ್ಗ ಜ.೩೧ರ ಬೆಳಿಗ್ಗೆ ೬:೦೦ಕ್ಕೆ ಕೊಳವೆ ಮಾರ್ಗವು ಬರ್ಸ್ಟ ಆಗಿದ್ದು, ತುರ್ತು ದುರಸ್ಥಿ ಕಾಮಗಾರಿಯನ್ನು ಮಂಡಳಿವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಜನವರಿ ೩೧ ಹಾಗೂ ಫೆ.೧ರಂದು ವಿಜಯಪುರ ನಗರಕ್ಕೆ ಕೋಲ್ದಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕರ್ನಾಟಕ ನಗರ ನೀರು ಸರಬರಾಜ ಮತ್ತು ಒಳಚರಂಡಿ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.