Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಸಾಹಿತಿ ಹಾಗೂ ಶಿಕ್ಷಕಿ ಪಾರ್ವತಿ ಸೊನ್ನದ ರಚಿಸಿರುವ “ಹೆಮ್ಮೆಯ ಪುತ್ರ” ಮಕ್ಕಳ ‌ಕಥಾ ಸಂಕಲನ ಕೃತಿ ರೇಣುಕ ಶಿವಾಚಾರ್ಯರರ ಅಮೃತ್ ಹಸ್ತದಿಂದ ಬಿಡುಗಡೆ ಗೊಳಿಸಲಾಯಿತು.ಪಟ್ಟಣದ ಬಸವರಾಜೇಂದ್ರ ದೇವಸ್ಥಾನದ ಸಭಾ ಭವನದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಅವರ ಸಹಯೋಗದಲ್ಲಿ ಜರಗುವ 89 ನೇ ಹುಣ್ಣುಮೆ ಬೆಳಕು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ “ಹೆಮ್ಮೆಯ ಪುತ್ರ” ಕೃತಿ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿರುವ ದ್ರಾಕ್ಷಾಯಣಿ ವ್ಹಿ‌ ಮೈದರಗಿ, ಅತಿಥಿ ಉಪನ್ಯಾಸಕ ಯಶವಂತ್ ಡಿ‌ ಎಸ್, ಸುಜಾತ ರಾಮಕೃಷ್ಣನ್, ದತ್ತಿ‌ ದಾನಿ ಬಾಲಾಜಿ ನರಸಯ್ಯ ಇಪ್ಪಕಾಯಿಲ್, ನಿವೃತ್ ಪ್ರಾಚಾರ್ಯ ಐ ಬಿ ಸುರಪೂರ, ಮುಖ್ಯ ಅತಿಥಿ, ಸಾಹಿತಿ ಪಾರ್ವತಿ ಸೊನ್ನದ, ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಆರ್ ವಿ ಪಾಟೀಲ ಹಾಗೂ ಇನ್ನೂ ಮುಖಂಡರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚೆಗೆ ಓಡಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ೨೯ ನೇ ನ್ಯಾಷನಲ್ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ೧೦ ಕಿ.ಮೀ ಟಿಮ್ ಟೈಮ್ ಟ್ರಯಲ್‌ನಲ್ಲಿ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕರಿಷ್ಮಾ ಮಲಿಕಸಾಬ ತಟಗಾರ ೧೪ ವರ್ಷ ವಯೋಮಿತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ಪಡೆಯುವ ಮೂಲಕ ರಾಜ್ಯ, ಜಿಲ್ಲೆ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿಗಳಾದ ಆರ್.ಡಿ.ಚವ್ಹಾಣ್, ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಎಲ್.ಚವ್ಹಾಣ್‌ರವರುಗಳು ಸೇರಿದಂತೆ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ಕೆಲವೇ ದಿನಗಳು ಬಾಕಿ‌ ಉಳಿದಿದ್ದು, ಈ ಓಟಕ್ಕೆ ನಾನಾ ಉದ್ಯಮಗಳು ಮತ್ತು ಗಣ್ಯರು ಪ್ರಾಯೋಜಕತ್ವ ನೀಡಿದ್ದಾರೆ.ವೃಕ್ಷಥಾನ್ ಹೆರಿಟೇಜ್ ರನ್ ಜನಪ್ರೀಯತೆಗೆ ಮೆಚ್ಚಿ ಬಾಲಾಜಿ‌ ಶುಗರ್ಸ್ ರೂ. 2 ಲಕ್ಷ, ಶ್ರೀ ಬಸವೇಶ್ವರ ಶುಗರ್ಸ್ ರೂ. 1 ಲಕ್ಷ, ಅನುಗ್ರಹ ಕಣ್ಣಿನ‌ ಆಸ್ಪತ್ರೆಯ ಡಾ. ಪ್ರಭುಗೌಡ ಲಿಂಗದಳ್ಳಿ ರೂ.‌ 1 ಲಕ್ಷ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ರೂ. 50 ಸಾವಿರ, ಎಪಿಎಂಸಿ ರೂ. 50 ಸಾವಿರ ಹಾಗೂ ಸಮಾಜ‌ ಸೇವಕ ಅಬ್ದುಲ್ ಪೀರಾ ಜಮಖಂಡಿ ರೂ. 50 ಸಾವಿರ ನೀಡಿದ್ದಾರೆ. ಈ ಮೂಲಕ ವೃಕ್ಷಥಾನ್ ಹೆರಿಟೇಜ್ ರನ್- 2024ಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕು ದಂಡಾಧಿಕಾರಿ ಸುರೇಶ ಚಾವಲರ ಅವರನ್ನು ಕಸಾಪ ಪದಾಧಿಕಾರಿಗಳು ಮಂಗಳವಾರ ಸೌಜನ್ಯಯುತವಾಗಿ ಭೇಟಿ ಮಾಡಿ, ಜನೇವರಿ ತಿಂಗಳಲ್ಲಿ ಜರುಗಲಿರುವ ತಿಕೋಟಾ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ಚರ್ಚಿಸಿದರು.ತಾಲೂಕು ಅಧಿಕಾರಿಯಾಗಿ ಹೊಸದಾಗಿ ಬಂದಿರುವದರಿಂದ ಎಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುವದಾಗಿ ತಿಳಿಸಿದರು.ತಾಲೂಕಿನ ಎಲ್ಲಾ ಅಧಿಕಾರಿಗಳನ್ನು, ಸಾರ್ವಜನಿಕರನ್ನು, ಹಿರಿಯರನ್ನು, ಶಿಕ್ಷಕರನ್ನು, ರಾಜಕೀಯ ಮುಖಂಡರನ್ನು, ವ್ಯಾಪಾರಿವರ್ಗದವರನ್ನು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಅರ್ಥಪೂರ್ಣವಾಗಿರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.ಎಲ್ಲರೂ ಸೇರಿ ಆ ಕನ್ನಡಾಂಬೆ ಭುವನೇಶ್ವರಿ ತಾಯಿಯ ಜಾತ್ರೆಯನ್ನು ಅತ್ಯಂತ ಗೌರವದಿಂದ ಆಚರಿಸೋಣವೆಂದು ಅಭಿಪ್ರಾಯ ಪಟ್ಟರೆಂದು ತಾಲೂಕ ಕ ಸಾ ಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ತಿಳಿಸಿದ್ದಾರೆ.ಈ ವೇಳೆ ಕ ಸಾ ಪ ಸಂಘಟನಾ ಕಾರ್ಯದರ್ಶಿ ಬಾಬುರಾವ್ ಮಹಾರಾಜರು, ಖಜಾನೆ ಅಧಿಕಾರಿ ಚಂದು ನಡುವಿನಮನಿ, ಹೊನವಾಡದ ಪ್ರಥಮ್ ಫೌಂಡೇಶನ್ ಅಧ್ಯಕ್ಷ ಬೀರಪ್ಪ ಖಂಡೇಕಾರ್ ಮುಂತಾದವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಢವಳಗಿ: ಮಹಾರಾಷ್ಟ್ರ ರಾಜ್ಯದ ಅಹಮದಾಬಾದ್ ನಗರದಲ್ಲಿ ಡಿಸೆಂಬರ್ 13 ರಿಂದ 15ರ ವರೆಗೆ ನಡೆದ 2024-25 ನೇ ಸಾಲಿನ ಅಂತರರಾಜ್ಯ ಮಟ್ಟದ ಅಂಗವಿಕಲರ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡದ ನಾಯಕರಾಗಿ ಬಾಗೇವಾಡಿ ತಾಲ್ಲೂಕಿನ ಅಂಬಳನೂರ ಗ್ರಾಮದ ಮಾಂತೇಶ ಚಲವಾದಿ ಅವರ ನೇತೃತ್ವ ದಲ್ಲಿ ದ್ವೀತಿಯ ಸ್ಥಾನ ಪಡೆದಿದೆ.ತಂಡದ ಆಟಗಾರರಾಗಿ ಮಹೇಶಕುಮಾರ ಅಗಳಿ, ರಾಜೇಶ ಚಲವಾದಿ, ವಿಷ್ಣು ರಾಠೋಡ, ಯಮನಪ್ಪ ಚಲವಾದಿ, ಪಂಪಾಪತಿ, ಯಂಕಣ್ಣ, ಮಾಂತೇಶ ವಜ್ಜಲ, ಸಂಜು ಪವಾರ್, ಸಂಜು ರಜಪೂತ, ಮುತ್ತು ಕೋಲಕಾರ, ವಿಜಿತಕುಮಾರ, ರಾಜೇಶ ಲಮಾಣಿ.ಇದ್ದರು.ನಾಯಕ ಮಾಂತೇಶ ಚಲವಾದಿ ಅವರಿಗೆ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯ ವಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ಹೊರಗುತ್ತಿಗೆಯ ಮೂಲಕ ಅರಣ್ಯ ದಿನಗೂಲಿ ಕಾರ್ಮಿಕರನ್ನು ನೇಮಿಸುವ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಹಾಗೂ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆಎನ್ ಎಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘ ಪ್ರತ್ಯೇಕವಾಗಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರೈಸಿತು.ಕಳೆದ ೨೫ ವರ್ಷಗಳಿಂದ ಇಲ್ಲಿಯ ನಾನಾ ಉದ್ಯಾನಗಳಲ್ಲಿ ಮುಳುಗಡೆ ಸಂತ್ರಸ್ತರೇ ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಲಮಟ್ಟಿಯ ಪರಿಸರವನ್ನು ಸುಂದರಗೊಳಿಸುವಲ್ಲಿ, ಉದ್ಯಾನವನ್ನು ನಿರ್ಮಿಸುವಲ್ಲಿ ಇವರ ಪಾತ್ರ ಹೆಚ್ಚಿದೆ. ಸುಮಾರು ೩೦೦ ಕ್ಕೂ ಅಧಿಕ ದಿನಗೂಲಿ ಕಾರ್ಮಿಕರಿಗೆ ಸದ್ಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದಲೇ ವೇತನ ಪಾವತಿಸಲಾಗುತ್ತಿದೆ. ಆದರೆ ಈಗ ದಿನಗೂಲಿ ನೌಕರರನ್ನು ಹೊರಗುತ್ತಿಗೆ ಏಜೆನ್ಸಿಯ ಮೂಲಕ ನೇಮಕ ಮಾಡಲು ಟೆಂಡರ್ ಕರೆಯಲಾಗಿದೆ. ಇದರಿಂದಾಗಿ ೨೫ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಇವರ…

Read More

ವಿಜಯಪುರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನುಷ್ಯನ ಜೀವನದಲ್ಲಿ ಸಂತೋಷ, ಉಲ್ಲಸಿತ ಹಾಗೂ ಸದೃಢ ಮನಸ್ಸು ಹೊಂದಲು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳು ಅತ್ಯವಶ್ಯಕ. ಆರೋಗ್ಯ ದೃಷ್ಟಿಯಿಂದ, ಮನಸ್ಸು ಪ್ರಪುಲ್ಲತೆಯಿಂದ ಇರಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದಷ್ಟೇ ಅಲ್ಲದೇ ನಮ್ಮ ಬದುಕಿನ ದೈನಂದಿನ ಭಾಗವಾಗಿಸಿಕೊಳ್ಳಬೇಕು. ಕ್ರೀಡೆಗಳು ದೇಹ ಮನಸ್ಸುಗಳ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ೨೦೨೪-೨೫ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈಗಾಗಲೇ ಜಿಲ್ಲೆಯ ಐದು ತಾಲೂಕಿನಲ್ಲಿ ವಿಕಲಚೇತನರ ಕ್ರೀಡಾಕೂಟವನ್ನು ಬಹು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ತಾಲೂಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಾಡಿನ ಇಬ್ಬರು ಓಟಗಾರರು ರವಿವಾರ ಕೋಲ್ಕತ್ತಾದಲ್ಲಿ ನಡೆದ ಟಾಟಾ ಸ್ಟೀಲ್ 21 ಕಿ. ಮೀ. ಒಟದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೊಕ್ಯಾಮ್ ಸ್ಲ್ಯಾಮ್ ಮ್ಯಾರಾಥಾನ್ ಪೂರ್ಣಗೊಳಿಸಿ ಇತರ ಓಟಗಾರರಿಗೆ ಸ್ಪೂರ್ತಿಯಾಗಿದ್ದಾರೆ.ನಗರದ ಉದ್ಯಮಿ ಸಂಕೇತ ಬಗಲಿ(46) ಮತ್ತು ಚಡಚಣ ತಾಲೂಕಿನ ದೇವರ ನಿಂಬರಗಿ ಮೂಲದ ಮತ್ತು ಈಗ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ರಘು‌ ಸಾಲೋಟಗಿ(44) ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.ಪ್ರೊಕ್ಯಾಮ್ ಸ್ಲ್ಯಾಮ್ ನಾಲ್ಕು ಮ್ಯಾರಾಥಾನ್ ಗಳನ್ನು ಒಳಗೊಂಡಿರುವ ವಿಶಿಷ್ಠವಾದ ಓಟವಾಗಿದೆ. ಒಂದು ವರ್ಷದಲ್ಲಿ ಟಾಟಾ ಮುಂಬೈ ಮ್ಯಾರಾಥಾನ್ 42 ಕಿ. ಮೀ., ಬೆಂಗಳೂರು‌ ಟಿಸಿಎಸ್ ವರ್ಲ್ಡ್ 10 ಕಿ. ಮೀ, ದೆಹಲಿ ವೇದಾಂತ 21 ಕಿ. ಮೀ ಹಾಫ್ ಮ್ಯಾರಾಥಾನ್ ಹಾಗೂ ಕೊಲ್ಕತ್ತಾ ಟಾಟಾ ಸ್ಟೀಲ್ 25 ಕಿ. ಮೀ. ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ಓಟಗಳನ್ನು ಪೂರ್ಣಗೊಳಿಸುವುದು ಇದರ ವಿಶೇಷವಾಗಿದೆ.ಸಂಕೇತ ಬಗಲಿ ಈಗಾಗಲೇ 12ಕ್ಕೂ ಹೆಚ್ಚಿ ಹಾಫ್ ಮ್ಯಾರಾಥಾನ್, 3 ಫುಲ್ ಮ್ಯಾರಾಥಾನ್ ಹಾಗೂ ಅಲ್ಟ್ರಾ ಮ್ಯಾರಾಥಾನ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸ್ವೀಪ ನೋಡಲ್ ಅಧಿಕಾರಿಗಳಾದ ಪಿ.ಎಸ್. ವಸ್ತçದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಡಿ.೨೦ರ ಬೆಳಿಗ್ಗೆ ೧೦-೩೦ ಗಂಟೆಗೆ ಎನ್.ವಿ.ಡಿ ಹಾಗೂ ಸ್ವೀಪ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವರು. ನಂತರ ಸ್ಥಳೀಯ ಇ.ಎಲ್.ಸಿಗಳ ಭೇಟಿ ಮಾಡಿ ಅಂದು ವಾಸ್ತವ್ಯ ಮಾಡಲಿದ್ದಾರೆ. ಡಿ.೨೧ ರ ಬೆಳಿಗ್ಗೆ ಬಾಗಲಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತದ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್‌ಕುಮಾರ್ ಘೋಷ ಅವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಡಿಸೆಂಬರ್ ೧೮ರಂದು ಜಿಲ್ಲೆಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳಿಗೆ ಹಾಗೂ ಶಾಲೆ, ಕಾಲೇಜು ಮತ್ತು ಐಟಿಐಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿನ ಹಾಸ್ಟೇಲ್‌ಗಳು, ಆಸ್ಪತ್ರೆಗಳಿಗೆ, ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಕಚೇರಿಗಳಿಗೆ ಭೇಟಿ ನೀಡಿ, ವಿಪತ್ತು ನಿರ್ವಹಣಾ ಯೋಜನೆಯ ಪರಿಶೀಲನೆ ಹಾಗೂ ಇತರೆ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.ಅಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ರವರೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಂದು ವಿಜಯಪುರದಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More