ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಮಾನ ವೈಪರೀತ್ಯದಿಂದ ಹಾನಿಯಾದ ಬೆಳೆಗಳಿಗೆ ೮೫.೬೦ ಕೋಟಿ ರೂ ಬೆಳೆ ವಿಮೆ ಪರಿಹಾರ ಅಂತಿಮಗೊಳಿಸಲಾಗುತ್ತಿದೆ.
ಮುದ್ದೇಬಿಹಾಳ-೧೨೦.೯೯, ನಿಡಗುಂದಿ-೦೧.೯೪, ಸಿಂದಗಿ-೦೫.೧೪, ತಾಳಿಕೋಟಿ-೯೭೪.೬, ದೇವರಹಿಪ್ಪರಗಿ- ೨೨೩.೦೬, ಇಂಡಿ-೦೬.೯೭, ಆಲಮೇಲ-೦೮.೦೭, ಬಬಲೇಶ್ವರ್ -೪೫.೨೫, ಬ.ಬಾಗೇವಾಡಿ- ೦೨.೬೮, ವಿಜಯಪುರ-೧೪.೨೩, ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ೧೪.೧೩ ಕೋಟಿ ರೂ. ಜಮೆಯಾಗಿರುತ್ತದೆ.
ಉಳಿದಂತೆ ಅಂದಾಜು ರೂ. ೭೧.೪೭ ಕೋಟಿ ಬೆಳೆ ವಿಮೆ ಪರಿಹಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಧಾರ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುವುದು. ಆದಕಾರಣ ವಿಮೆ ತುಂಬಿದ ರೈತರು ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾದ ಬಗ್ಗೆ ಖಾತರಿವಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..