Author: editor.udayarashmi@gmail.com

ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಥಾಗೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವಕ್ಕೆ ಆಪತ್ತು ತರುವ ಹಲವು ಕಾಯಿಲೆಗಳ ಮೂಲ ಜೀವನಶೈಲಿ. ಅಂತಹ ಕಾಯಿಲೆಗಳಲ್ಲಿ ಕ್ಯಾನ್ಸರ್ ಪ್ರಮುಖವಾದದ್ದು. ಇದನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಸಂಪತ್ತ ಗುಣಾರಿ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ಸಮೀಕ್ಷಾ ಘಟಕ ವಿಜಯಪುರ ಇವರ ಸಂಯುಕ್ತಾಶ್ರಯಲ್ಲಿ ಮಂಗಳವಾರ ಬೆಳಿಗ್ಗೆ ಸರಕಾರಿ ನರ್ಸಿಂಗ ಕಾಲೇಜು ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸಂಪತ್ತ ಗುಣಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಶಿವಾನಂದ ಮಾಸ್ತಿಹೊಳಿ ರವರು ಜಂಟಿಯಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಮಾನ್ಯವಾಗಿ ಕ್ಯಾನ್ಸರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮುಸ್ಲಿಂ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ಶೇಕಡಾ ೭೫% ರಷ್ಟು ಹಾಗೂ ಇತರೆ ವರ್ಗದ ಶೇಕಡಾ ೨೫% ರಷ್ಟು ವಿದ್ಯಾರ್ಥಿಗಳಿಗೆ ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಈ ವಸತಿ ಶಾಲೆಗಳಲ್ಲಿ ಶೇಕಡಾ ೫೦% ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರುವುದು. ವಿದ್ಯಾರ್ಥಿಗಳ ಪೋಷಕರ ಆದಾಯ ೨.೫೦ ಮಿತಿ ಲಕ್ಷ ಮಿರಿರಬಾರದು. ಅರ್ಜಿ ಸಲ್ಲಿಸಲು ಮಾರ್ಚ ೧೦ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಸೇವಾಸಿಂಧುಪೋರ್ಟಲ್‌ನಲ್ಲಿ ನೇರವಾಗಿ ವೆಬ್‌ಸೈಟ್ https://sevasindhuservices.karnataka.gov.inಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ : ಜಿಲ್ಲಾ ಅಲ್ಪಸಂಖ್ಯಾತರ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದ ಅಭ್ಯರ್ಥಿಗಳು ಒಟ್ಟು ೧೩ ಸದಸ್ಯ ಬಲದಲ್ಲಿ ೧೧ ಸದಸ್ಯರು ಆಯ್ಕೆಯಾಗುವ ಮೂಲಕ ಈ ಪೆನಲ್ ವಿಜಯೋತ್ಸವ ಆಚರಿಸುವ ಮೂಲಕ ಪಟಾಕ್ಷಿ ಸಿಡಿಸಿ ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿದರು.ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಯು ೧೩ ಸದಸ್ಯ ಬಲಹೊಂದಿದೆ. ಐದು ವರ್ಷದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ೧೩ ಸ್ಥಾನಗಳಿಗೆ ಹಿರಿಯರ ಪೆನಲ್‌ದಿಂದ ೧೩ ಜನ ಶಿಕ್ಷಕ ಅಭ್ಯರ್ಥಿಗಳು, ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದಿಂದ ೧೩ ಶಿಕ್ಷಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಟ್ಟು ೭೮೦ ಮತದಾರರು ಇದ್ದರು. ಇದರಲ್ಲಿ ೭೬೧ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹೇಶ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜಗತ್ತಿನಲ್ಲಿ ಶೇ.೯೫ ರಷ್ಟು ಜನರಿಗೆ ಆಸೆ ಎಂಬುವದು ಇರುತ್ತದೆ. ಆದರೆ ಯಾರಲ್ಲಿಯೂ ದುರಾಶೆಯಿರಬಾರದು. ನನಗೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ,ಪ್ರಧಾನಮಂತ್ರಿಯಾಗುವ ಆಸೆಯಿರುತ್ತದೆ. ಆದರೆ ಯಾರೂ ಅರ್ಹರು ಇರುತ್ತಾರೋ ಅವರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುತ್ತಾರೆ ಎಂದು ಜವಳಿ, ಸಕ್ಕರೆ, ಕೃಷಿ ಮಾರಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ವ್ಹಿ.ಕಿರಸೂರ ಅವರ ವಯೋನಿವೃತ್ತಿಯಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬೀಳ್ಕೋಡುವ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನು ಎಷ್ಟೇ ಆಸೆ ಹೊಂದಿದ್ದರೂ ಭಗವಂತನು ಅವನು ಏನು ಆಗಬೇಕೆಂದು ನಿರ್ಧಾರ ಮಾಡಿರುತ್ತಾನೋ ಅದು ಅಗುತ್ತದೆ. ಕೆಲವೊಮ್ಮೆ ಅರ್ಹರು ಸಹ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿದಂತೆ ಕೆಲ ಹುದ್ದೆಗಳು ಸಿಗುವುದಿಲ್ಲ. ಇದು ವಿಧಿಯಾಟ. ವ್ಯಕ್ತಿ ಬದುಕಿನಲ್ಲಿ ಅನೇಕ ಮೆಟ್ಟಿಲು ಏರುತ್ತಾನೆ. ಕೆಲವೊಮ್ಮೆ ಇಳಿಯುತ್ತಾನೆ. ಜೀವನದಲ್ಲಿ ಏರಿಳಿತ ಇರುತ್ತದೆ. ಕೆಲವರ ಜೀವನದಲ್ಲಿ ಮಾತ್ರ ಸದಾ ಏರಿಕೆಯಾಗುವುದನ್ನು ಕಾಣುತ್ತೇವೆ ಎಂದರು.ದೇಶ ಕಟ್ಟುವಲ್ಲಿ ಅಭಿಯಂತರರ ಪಾತ್ರ ಹಿರಿದು. ನಾಡಿನಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ಪಟ್ಟಣವನ್ನು ಒಂದು ಮಾದರಿ ಪಟ್ಟಣವನ್ನಾಗಿ ಅಭಿವೃದ್ದಿ ಮಾಡುವದು ನನ್ನ ಕನಸಾಗಿದ್ದು ಅದನ್ನು ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಚಡಚಣ ಪಟ್ಟಣದಲ್ಲಿ ಸುಮಾರು ೯ ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಚಡಚಣ ಭಾಗದ ಜನರ ಬಹುದಿನದ ಬೇಡಿಕೆಯಾದ ಚಡಚಣದಿಂದ ಉಮದಿವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಸುಮಾರು ೫ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು ಮಾರ್ಚ ಅಂತ್ಯದವರೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಸಿಲಾಗುವದೆಂದು ಅವರು ಹೇಳಿದರು.ಇದಲ್ಲದೆ ಸುಮಾರು ೪ ಕೋಟಿ ವೆಚ್ಚದಲ್ಲಿ ಚಡಚಣ-ಶಿರಾಡೋಣ ರಸ್ತೆ ಸುದಾರಣಾ ಕಾಮಗಾರಿಯನ್ನು ಕೈಕೊಳ್ಳಗಾಗುತ್ತಿದೆ ಎಂದು ಅವರು ಹೇಳಿದರು. ಪಟ್ಟಣದಲ್ಲಿ ಶಿಘ್ರವಾಗಿ ಸುಮಾರು ೧೬ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ಇದಲ್ಲದೆ ನಾನು ಶಾಸಕನಾಗಿದ್ದ ಅಂದರೆ ೨೦೦೮ ರಲ್ಲಿ ಚಡಚಣ ಪಟ್ಟಣಕ್ಕೆ ಬಸ್ ಡಿಪೋ ಮತ್ತು ಅಗ್ನಿ ಶಾಮಕ ಠಾಣೆ ಮಂಜೂರಾಗಿದ್ದವು ಆದರೆ ನನ್ನ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಸೋಮವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ. ಕೊಲ್ಹಾರ ಶಾಖೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ನೇರವೇರಿಸಿದರು.ಕೊಲ್ಹಾರ ಶಾಖೆಯ ನೂತನ ಕಟ್ಟಡದ ಭೂಮಿ ಪೂಜೆಯ ಸಾನಿಧ್ಯ ಕೊಲ್ಹಾರ ಹಿರೇಮಠದ ಪಡದಯ್ಯ ಹಿರೇಮಠ ಸ್ವಾಮೀಜಿಗಳು ವಹಿಸಿದ್ದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಶೇಖರ ಅ ದಳವಾಯಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಡಿ ಬಿರಾದಾರ, ಪ್ರಧಾನ ವ್ಯವಸ್ಥಾಪಕ ಪಿ ವಾಯ್ ಡೆಂಗಿ,ನೋಡಲ್ ಅಧಿಕಾರಿ ಎಸ್ ಬಿ ಹೊಸಮನಿ, ಹಿರಿಯ ವ್ಯವಸ್ಥಾಪಕ ರಾಜು ಬಿ ವಾಡೇದ, ಪಿಆರ್ ಓ ಆಯ್.ಎಸ್. ಸಂಖ, ಎಸ್.ಎಸ್. ಉಣ್ಣಿಬಾವಿ, ಎಮ್.ಎಸ್. ಯರಂತೇಲಿ, ಬಿ.ಎಮ್. ಯಂಡಿಗೇರಿ, ರವಿಕುಮಾರ ಬಾಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸೂರ್ಯ ಅತ್ಯಂತ ಮುಖ್ಯವಾದ ಬೆಳಕನ್ನು ನೀಡುವ ಆಕಾಶಕಾಯವೆಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರೂ.. ಸೂರ್ಯನ ಕೃಪೆಯಿಂದ ನಿಂತಿರುವುದು ಈ ವಿಶ್ವ ಸಂಕುಲ. ಆತನಿಂದಲೇ ಸಕಲ ಚರಾಚರಗಳು ಅಸ್ತಿತ್ವದಲ್ಲಿವೆ. ಸೂರ್ಯ ನಿಯಮಿತತೆಗೆ ಇನ್ನೊಂದು ಹೆಸರು ಒಂದೇ ಒಂದು ದಿನವೂ ತನ್ನ ದಿನಚರಿಯನ್ನು ತಪ್ಪಿಸದ ಸೂರ್ಯನ ಬಿಸಿಲಿನಿಂದಲೇ ಸಸ್ಯಗಳಲ್ಲಿ ಆಹಾರ ತಯಾರಿಸುವ ದ್ಯುತಿ ಸಂಶ್ಲೇಷಣ ಕ್ರಿಯೆಯು ನಡೆಯುವುದು. ಸೂರ್ಯನ ಕೃಪೆಯಿಂದಲೆ ಪೃಥ್ವಿಯ ಬದುಕು ಸರಳ ಮತ್ತು ಸುವ್ಯವಸ್ಥಿತವಾಗಿ ನಡೆಯುತ್ತದೆ.ಇಂತಿಪ್ಪ ಸೂರ್ಯನನ್ನು ಕುರಿತು ಜಗತ್ತಿನ ಎಲ್ಲರಲ್ಲೂ ಪೂಜ್ಯ ಭಾವನೆ. ನಮ್ಮೆಲ್ಲರ ಬದುಕಿನ ಚುಕ್ಕಾಣಿ ಹಿಡಿದಿರುವ ಸೂರ್ಯ ದೇವನನ್ನು ದೈವವೆಂದು ಪೂಜಿಸುವ ಅಗಾಧ ಹಿರಿಮೆಯ ಸಂಸ್ಕೃತಿ ನಮ್ಮದು. ಆದ್ದರಿಂದಲೇ ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಸೂರ್ಯನನ್ನು ಭಾರತದ ವಿವಿಧ ಭಾಗಗಳಲ್ಲಿ ವಿಧವಿಧವಾಗಿ ಆರಾಧಿಸುತ್ತಾರೆ, ಪೂಜಿಸುತ್ತಾರೆ.ರಥ ಸಪ್ತಮಿಯು ಪಂಚಮಿ ಅಥವಾ ವಸಂತ ಪಂಚಮಿಯ ಮರುದಿನ ಬರುತ್ತದೆ ಆದ್ದರಿಂದ ಇದನ್ನು ಸೂರ್ಯ ಜಯಂತಿ ಅಥವಾ ಮಾಘ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ ಎ.ಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಕುರಿತು ಜಿಲ್ಲಾಮಟ್ಟದ ಟಾಸ್ಕ ಪೋರ್ಸ್ ಸಮಿತಿ ಸಭೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜನವರಿ ೨೩ರಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಕಾಳು ಬೆಲೆಯನ್ನು ರೂ .೫೬೫೦/- ನಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ ಕನಿಷ್ಟ ೦೪ (ನಾಲ್ಕು) ಕ್ವಿಂಟಾಲ್‌ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ ೨೦ (ಇಪ್ಪತ್ತು) ಕ್ವಿಂಟಾಲ್ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳನ್ನು ಖರೀದಿಸತಕ್ಕದ್ದು ಹಾಗೂ ಕಡಲೆಕಾಳು ಖರೀದಿಸಲು ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ರೈತರ ನೋಂದಣಿಯನ್ನು ಆದೇಶ ದಿನಾಂಕದಿಂದ ೮೦ ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು ೯೦ ದಿನಗಳವರೆಗೆ ನಿಗದಿಪಡಿಸಿದೆ.ಕಡಲೆಕಾಳು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು ನಾಫೇಡ್ ರವರು ಅಭಿವೃದ್ಧಿಪಡಿಸಿರುವ ಇ-ಸಮೃದ್ಧಿ ಹಾಗೂ ಇ-ಸಂಯುಕ್ತ ದತ್ತಾಂಶದಲ್ಲಿ ರಾಜ್ಯದ ರೈತರ ಮಾಹಿತಿಯನ್ನು FRUITSತಂತ್ರಾಂಶದೊಂದಿಗೆ ಸಂಯೋಜಿಸಿಕೊಂಡು ರೈತರಿಗೆ ಸಂಬಂಧಿಸಿದ ವಿವರಗಳನ್ನು ಭೂಮಿ, ಬೆಳೆ ಸಮೀಕ್ಷೆ ದತ್ತಾಂಶUIDAI ದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದ್ರೀಕರಿಸಲಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ೨೯ ವರ್ಷದ ರಾಜಶ್ರೀ ಲಕ್ಷö್ಮಣ ಶಾಪೂರ ಎಂಬ ಮಹಿಳೆ ಜ.೨೪ರ ಮಧ್ಯಾಹ್ನ ೩ಗಂಟೆಗೆ ಮನೆಯಿಂದ ಹೊಲಕ್ಕೆ ಮೆವು ಮಾಡಲು ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ವಿಜಯಪುರದ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ್ಲ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹಿಳೆ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾಗಿರುವ ಯುವತಿಯು ೫.೦”ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡ ಮುಖ, ಕನ್ನಡ ಭಾಷೆ ಬಲ್ಲವಳಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಸೀರೆ ಧರಿಸಿದ್ದಳು .ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಪೊಲೀಸ್ ಅಧೀಕ್ಷಕರು ದೂ: ೦೮೩೫೨-೨೫೦೧೫೨, ವಿಜಯಪುರ ಗ್ರಾಮೀಣ ವೃತ್ತ ನಿರೀಕ್ಷಕರು ದೂ: ೦೮೩೫೨-೨೫೧೨೧೭, ವಿಜಯಪುರ ಜಿಲ್ಲಾ ನಿಸ್ತಂತು ಕಛೇರಿ ದೂ: ೦೮೩೫೨-೨೫೦೮೪೪, ಬಬಲೇಶ್ವರ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ್ ದೂ.ಸಂ. ೦೮೩೫೫-೨೮೩೦೩೩ ಮೊ. ೯೪೮೦೮೦೪೨೪೯ ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಗಾನಯೋಗಿ’ ಪಂ. ಪಂಚಾಕ್ಷರಿ ಗವಾಯಿಗಳವರ ೧೩೩ ನೆಯ ಜಯಂತೋತ್ಸವ | ‘ಅಮರಸ್ವರ ಸಮಾರೋಹ’ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಗದಗ ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಕುರಿತಾಗಿ ಹುಬ್ಬಳಿ ಧಾರವಾಡ ಪ್ರದೇಶದಲ್ಲಿ ಯಾವುದೇ ಸ್ಮಾರಕವಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗ ಬೇಕು ಎಂಬ ಬೇಡಿಕೆ ಈಡೇರಿಲ್ಲ. ಈಗ ನಾವು ಸ್ಮಾರಕ ಮತ್ತು ಅಧ್ಯಯನ ಪೀಠದೊಂದಿಗೆ ಗದುಗಿನಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಟ್ರಷ್ಟ ಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಕಲಾವಿಕಾಸ ಪರಿಷತ್ ಸಂಸ್ಥಾಪಕ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ಹೇಳಿದರು.ಅವರು ಕಲಾ ವಿಕಾಸ ಪರಿಷತ್ತು ಹಮ್ಮಿಕೊಂಡಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ೧೩೩ ನೆಯ ಜಯಂತೋತ್ಸವ ಅಮರಸ್ವರ ಸಮಾರೋಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸು ಬೇವಿನಗಿಡದ, ಹಿರಿಯ ರಂಗ ನಿರ್ದೇಶಕಿ, ಗಾಯಕಿ ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ,…

Read More