ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ೨೯ ವರ್ಷದ ರಾಜಶ್ರೀ ಲಕ್ಷö್ಮಣ ಶಾಪೂರ ಎಂಬ ಮಹಿಳೆ ಜ.೨೪ರ ಮಧ್ಯಾಹ್ನ ೩ಗಂಟೆಗೆ ಮನೆಯಿಂದ ಹೊಲಕ್ಕೆ ಮೆವು ಮಾಡಲು ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ವಿಜಯಪುರದ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ್ಲ ಪ್ರಕರಣ ದಾಖಲಾಗಿದ್ದು, ಕಾಣೆಯಾದ ಮಹಿಳೆ ಪತ್ತೆಗೆ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾಗಿರುವ ಯುವತಿಯು ೫.೦”ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡ ಮುಖ, ಕನ್ನಡ ಭಾಷೆ ಬಲ್ಲವಳಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಸೀರೆ ಧರಿಸಿದ್ದಳು .ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಪೊಲೀಸ್ ಅಧೀಕ್ಷಕರು ದೂ: ೦೮೩೫೨-೨೫೦೧೫೨, ವಿಜಯಪುರ ಗ್ರಾಮೀಣ ವೃತ್ತ ನಿರೀಕ್ಷಕರು ದೂ: ೦೮೩೫೨-೨೫೧೨೧೭, ವಿಜಯಪುರ ಜಿಲ್ಲಾ ನಿಸ್ತಂತು ಕಛೇರಿ ದೂ: ೦೮೩೫೨-೨೫೦೮೪೪, ಬಬಲೇಶ್ವರ ಠಾಣೆಯ ಪೊಲೀಸ್ ಸಬ್ ಇನ್ಸಪೇಕ್ಟರ್ ದೂ.ಸಂ. ೦೮೩೫೫-೨೮೩೦೩೩ ಮೊ. ೯೪೮೦೮೦೪೨೪೯ ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.