ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮುಸ್ಲಿಂ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ಶೇಕಡಾ ೭೫% ರಷ್ಟು ಹಾಗೂ ಇತರೆ ವರ್ಗದ ಶೇಕಡಾ ೨೫% ರಷ್ಟು ವಿದ್ಯಾರ್ಥಿಗಳಿಗೆ ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಈ ವಸತಿ ಶಾಲೆಗಳಲ್ಲಿ ಶೇಕಡಾ ೫೦% ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರುವುದು. ವಿದ್ಯಾರ್ಥಿಗಳ ಪೋಷಕರ ಆದಾಯ ೨.೫೦ ಮಿತಿ ಲಕ್ಷ ಮಿರಿರಬಾರದು. ಅರ್ಜಿ ಸಲ್ಲಿಸಲು ಮಾರ್ಚ ೧೦ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಸೇವಾಸಿಂಧುಪೋರ್ಟಲ್‌ನಲ್ಲಿ ನೇರವಾಗಿ ವೆಬ್‌ಸೈಟ್ https://sevasindhuservices.karnataka.gov.inಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ: ೦೮೩೫೨-೨೯೫೫೨೩, ವಿಜಯಪುರ ತಾಲ್ಲೂಕು ವಿಸ್ತರಣಾಧಿಕಾರಿಗಳು ಉಪ ವಿಭಾಗ ಮೊ:೮೯೭೦೭೦೪೯೮೬, ಇಂಡಿ ತಾಲ್ಲೂಕು ವಿಸ್ತರಣಾಧಿಕಾರಿಗಳು ಉಪ ವಿಭಾಗ ಇಂಡಿ ಮೊ:೯೯೦೦೨೨೯೭೮೦, ಅರಕೇರಿಯ ಡಾ|| ಎ.ಪಿ.ಜೆಅಬ್ದುಲ್ ಕಲಾಂಬಾಲಕಿಯರ ವಸತಿಶಾಲೆ / ಬಬಲೇಶ್ವರ (ಅರಕೇರಿ)ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರು ರೇಖಾ ಬಾರ್ಕಿ ಮೊ:೮೯೭೧೪೫೯೬೮೩, ಸಿಂದಗಿ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿಶಾಲೆ ಪ್ರಾಂಶುಪಾಲರು ಸಿದ್ದಪ್ಪಕಾರಿಮುಂಗಿ ಮೊ:೯೯೮೦೯೫೨೯೬೦, ತಾ|| ಚಡಚಣನ ಹಾಲಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿಶಾಲೆ ಪ್ರಾಂಶುಪಾಲರು ಮಲ್ಲಿಕಾರ್ಜುನಹೆಬ್ಬಳ್ಳಿ, ಮೊ:೯೬೨೦೮೨೮೧೮೫, ಅಫಜಲಪೂರಟಕ್ಕೆ ಸರ್ಕಾರಿ ಮುಸ್ಲಿಂ ವಸತಿಶಾಲೆ / ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ, ಮನಗೂಳಿ, ತಾ:ಬಸವನಬಾಗೇವಾಡಿ ಪ್ರಾಂಶುಪಾಲರು ಸಿದ್ರಾಮ್ ಎಂಟೆತ್ತ, ಮೊ: ೮೩೧೦೮೩೦೪೦೭, ಮುದ್ದೇಬಿಹಾಳದ ಇಣಚಗಲ್ ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿಶಾಲೆ ನಂ-೧. ಪ್ರಾಂಶುಪಾಲರು (ಪ್ರಭಾರ) ರಮೇಶ, ಇಂಡಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆ ಪ್ರಾಂಶುಪಾಲರು (ಪ್ರಭಾರ) ಶ್ರೀರವಿಚಂದ್ರಕಾಂಬಳೆ ಮೊ: ೯೬೩೨೪೫೪೬೭೦, ಮುದ್ದೇಬಿಹಾಳ ನಂ-೨. ಅಲ್ಪಸಂಖ್ಯಾತರಮೊರಾರ್ಜಿದೇಸಾಯಿವಸತಿಶಾಲೆ ಪ್ರಾಂಶುಪಾಲರು (ಪ್ರಭಾರ) ಖೇಮು ರಾಠೋಡ ಮೊ:೭೨೫೯೧೭೯೩೯೮