ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದ ಅಭ್ಯರ್ಥಿಗಳು ಒಟ್ಟು ೧೩ ಸದಸ್ಯ ಬಲದಲ್ಲಿ ೧೧ ಸದಸ್ಯರು ಆಯ್ಕೆಯಾಗುವ ಮೂಲಕ ಈ ಪೆನಲ್ ವಿಜಯೋತ್ಸವ ಆಚರಿಸುವ ಮೂಲಕ ಪಟಾಕ್ಷಿ ಸಿಡಿಸಿ ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಿಸಿದರು.
ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಯು ೧೩ ಸದಸ್ಯ ಬಲಹೊಂದಿದೆ. ಐದು ವರ್ಷದ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಿಗದಿಯಾಗಿತ್ತು. ೧೩ ಸ್ಥಾನಗಳಿಗೆ ಹಿರಿಯರ ಪೆನಲ್‌ದಿಂದ ೧೩ ಜನ ಶಿಕ್ಷಕ ಅಭ್ಯರ್ಥಿಗಳು, ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದಿಂದ ೧೩ ಶಿಕ್ಷಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಟ್ಟು ೭೮೦ ಮತದಾರರು ಇದ್ದರು. ಇದರಲ್ಲಿ ೭೬೧ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಇದರಲ್ಲಿ ಮಹೇಶ ಪೂಜಾರಿ, ಅಮರೇಶ ನಾಡಗೌಡ ಅವರು ಹಿರಿಯರ ಪೆನಲ್‌ದ ಆಯ್ಕೆಯಾದ ಅಭ್ಯರ್ಥಿಗಳಾದರೆ ಉಳಿದ ೧೧ ಸ್ಥಾನಗಳಿಗೆ ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಪೆನಲ್‌ದಿಂದ ೧೧ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಐದು ವರ್ಷದ ಆಡಳಿತ ಮಂಡಳಿಗೆ ಬಹುಮತ ಪಡೆದುಕೊಂಡಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಬಸವರಾಜ ಬಾಲಚಂದ್ರ ಚಿಂಚೋಳಿ, ಶಿವಪ್ಪ ಪರುತಪ್ಪ ಮಡಿಕೇಶ್ವರ, ಹೊನ್ನಪ್ಪ ಸಂಗಪ್ಪ ಗೊಳಸಂಗಿ, ಸಂಗಣ್ಣ ಸುಭಾಶಚಂದ್ರ ಹುನಗುಂದ, ನಿಂಗೇಶ ಸಿದ್ದಪ್ಪ ಕಾಳಗಿ, ಬಾಷಾಸಾಬ ಮಸ್ತಾನಸಾಬ ಮನಗೂಳಿ, ಅಮರೇಶ ಹಣಮಂತ್ರಾಯ ನಾಡಗೌಡ, ಮಹಿಳಾ ಕ್ಷೇತ್ರದಿಂದ ಶಂಕ್ರಮ್ಮ ಕುಡ್ಲಪ್ಪ ಕವಿಶೆಟ್ಟಿ, ಪಾರ್ವತೆವ್ವ ಸಂಗಯ್ಯ ಹೊಸಮಠ,ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಮಹೇಶ ಸುಭಾಶ ಪೂಜಾರಿ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ಸುರೇಶ ಬಸವರಾಜ ಹುರಕಡ್ಲಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೃಷ್ಣಾ ಆನಂದ ರಜಪೂತ, ಮಲ್ಲಿಕಾರ್ಜನ ರಘುನಾಥ ರಾಜನಾಳ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.
ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಗೆ ಜರುಗಿದ ಚುನಾವಣೆಯಲ್ಲಿ ನಮ್ಮ ಪೆನಲ್‌ದ ಅಭ್ಯರ್ಥಿಗಳು ಹೆಚ್ಚು ಆಯ್ಕೆಯಾಗಿದ್ದರೂ ಇದು ಅಖಂಡ ಬಸವನಬಾಗೇವಾಡಿ ತಾಲೂಕಿನ ಶಿಕ್ಷಕರ ಬಾಂಧವರ ಗೆಲುವು. ಈ ಗೆಲವು ಎಲ್ಲ ಶಿಕ್ಷಕರ ಬಾಂಧವರ ಶ್ರಮದ ಫಲವಾಗಿದೆ. ಎಲ್ಲ ಶಿಕ್ಷಕ ಬಾಂಧವರು ಒಂದಾಗಿ ಎಲ್ಲರ ಸಹಾಯ-ಸಹಕಾರೊಂದಿಗೆ ಅಖಂಡ ತಾಲೂಕಿನ ಈ ಸೊಸಾಯಿಟಿಯನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗುವುದು ಎಂದು ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ ಸುದ್ದಿಗಾರರಿಗೆ ಹೇಳಿದರು.
ವಿಜಯೋತ್ಸವದಲ್ಲಿ ಆದರ್ಶ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಎಚ್.ಬಿ.ಬಾರಿಕಾಯಿ, ಎಂ.ಎನ್.ಯಾಳವಾರ, ಎಂ.ಎಸ್.ಅವಟಿ, ಸಲೀಂ ದಡೇದ, ಎಂ.ಎಸ್.ಮೂಕರ್ತಿಹಾಳ, ಅಶೋಕ ಗಿಡ್ಡಪ್ಪಗೋಳ, ಎಂ.ಎಂ.ಮುಲ್ಲಾ, ಗೋಪಾಲ ಲಮಾಣಿ, ಸಿದ್ದಪ್ಪ ಅವಜಿ, ಬಿ.ಪಿ.ನಾಗಾವಿ, ಎಂ.ವ್ಹಿ.ಗಬ್ಬೂರ, ಎಸ್.ಬಿ.ಮುತ್ತಗಿ, ಕೊಟ್ರೇಶ ಹೆಗ್ಡಾಳ, ಬಿ.ವ್ಹಿ.ಚಕ್ರಮನಿ, ಎಂ.ಆರ್.ಮಕಾನದಾರ, ಜಗದೀಶ ಚಿಕ್ಕಮಠ, ಎಸ್.ಎಸ್.ಕಮತ,ಸಂಗಮೇಶ ದುದಗಿ, ಆನಂದ ಪವಾರ, ಡಾ. ಮಹಾದೇವ ಗುಡಿ, ನಾಗು ಅರಳಚಂಡಿ, ಶ್ರೀಕಾಂತ ಬಡಿಗೇರ,ಜೆ.ಡಿ.ಪಾಟೀಲ, ಸಿ.ಎಂ.ಹೊರ್ತಿ, ವಿಜೇತ ಅಭ್ಯರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.