Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ನಗರದ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ, ೪ನೇ ವರ್ಷದ ಜೀರ್ಣೋದ್ದಾರ ಜಾತ್ರಾ ಮಹೋತ್ಸವ ಭಾರತ ಹುಣ್ಣಿಮೆಮಂಗಳವಾರ ಫೆ. ೧೧ ರಂದು ಮುಂ. ೬-೩೦ ಗಂಟೆಗೆ ಜರುಗಲಿದೆ.ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸಲಿಂಗ ಸ್ವಾಮಿಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಸಂಜೆ ೬-೩೦ ಗಂಟೆಗೆ ಸ್ವಯಂಬೋ ಆಟ್ಸ್ ಫೌಂಡೇಶನ್ ದಿವ್ಯಾ ಭಿಸೆ ಮತ್ತು ದೀಕ್ಷಾ ಭಿಸೆ ಇವರಿಂದ ಭರತ ನಾಟ್ಯ ನಂತರ ಮಹಾಪ್ರಸಾದ ಇರುತ್ತದೆ. ಬುಧವಾರ ಫೆ.೧೨ ರಂದು ಸುರ್ಯೋದಯದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಗೆ ಮಹಾರುದ್ರಾಭಿಷೇಕ ಉಮಾಮಹೇಶ್ವ ಪೂಜೆ ಹೋಮ ಹವನ ನೆರವೇರುವುದು. ೧೦-೩೦ ರಿಂದ ೨-೦೦ ಗಂಟೆವರೆಗೆ ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಇವರು ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಮಹಾಪ್ರಸಾದ ಇರುತ್ತದೆ.ದಿವ್ಯಸಾನಿಧ್ಯವನ್ನು ಷ.ಬ್ರ.ಸೋಮನಾಥ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಶಾಖಾಮಠ ಸಿಂಧನೂರ ಗುರುಮಠ ಕನ್ನೂರ, ಡಾ. ಮಹಾದೇವ ಶಿವಾಚಾರ್ಯರು, ಬಬಲೇಶ್ವರ ಇವರು ವಹಿಸುವರು.ಸಂಜೆ ೬-೩೦ ಗಂಟೆಗೆ ದೀಪೋತ್ಸವ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ೨೦೦೫ರಲ್ಲಿ ಜಾರಿಗೆ ಬಂದಿತು. ಹಾಗೂ ಇದು ಒಂದು ಯೋಜನೆಯಾಗದೆ ಕಾಯ್ದೆಯಾಗಿದೆ ಎಂದು ತಾಪಂ ಇಒ ರಾಮು ಅಗ್ನಿ ತಿಳಿಸಿದರು.ತಾಲೂಕಿನ ಗುಬ್ಬೇವಾಡ ಗ್ರಾಪಂ ವ್ಯಾಪ್ತಿಯ ಬೋರಗಿ ಗ್ರಾಮದ ಚೌಡೇಶ್ವರಿ ದೇವಸ್ಥಾನಲ್ಲಿ ಹಮ್ಮಿಕೊಂಡ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಅಂದಿನಿಂದ ಇಂದಿನವರೆಗೂ ಜಾರಿಯಾಗಿ ೨೦ವರ್ಷ ಕಳೆಯಿತು. ಯೋಜನೆಯ ಉದ್ದೇಶವೆನೆಂದರೆ ಗ್ರಾಮೀಣ ಭಾಗದ ಜನರಿಗೆ ಮತ್ತು ಹಿಂದುಳಿದ ಎಲ್ಲ ಸಮುದಾಯದ ಕಟ್ಟಕಡೆಯ ಕೂಲಿ ಕಾರ್ಮಿಕರ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ೧೦೦ದಿನಗಳ ಕಾಲ ಕೆಲಸ ಒದಗಿಸುಚದಾಗಿದೆ. ಇದು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದಾಗಿದೆ. ಈ ಯೋಜನೆಯಲ್ಲಿ ವ್ಯಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ರೇಷ್ಮೆ ಬೆಳೆ, ಅರಣ್ಯ ಇಲಾಖೆಯಿಂದ ಸಹಾಯಧನ ಪಡೆಯಬಹುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಬಳಿಕ ನರೇಗಾದಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ೧೦೦ದಿನ ಪೂರೈಸಿದ ೧೦ ಜನರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ…
ದೆಹಲಿ ಎಕ್ಸಿಟ್ ಪೋಲ್ | ಬಹುತೇಕ ಸಮೀಕ್ಷೆಗಳು ಬಿಜೆಪಿ ಪರ | ಕೇಜ್ರಿವಾಲ್ ಹ್ಯಾಟ್ರಿಕ್ ಕನಸಿಗೆ ಬ್ರೇಕ್ | ಆಪ್ ಗೆ ಸಂಕಷ್ಟ | ದೆಹಲಿ: ವಿಧಾನಸಭೆಯ ಎಲ್ಲಾ 70 ಸ್ಥಾನಗಳಿಗೂ ಬುಧವಾರ ಮತದಾನ ನಡೆದಿದ್ದು ಮತ ಎಣಿಕೆ ಫೆಬ್ರವರಿ 8ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತದಾನ ಮುಗಿದ ನಂತರ, ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಚುನಾವಣೋತ್ತರ ಫಲಿತಾಂಶಗಳಲ್ಲಿ ಬಿಜೆಪಿಗೆ ಗೆಲುವು ಎಂದು ತೋರಿಸುತ್ತಿದ್ದರೆ ಎರಡಲ್ಲಿ ಮಾತ್ರ ಮತ್ತೆ ಆಪ್ ಮೂರನೇ ಬಾರಿಗೆ ಗೆಲ್ಲಲಿದೆ ಎಂದು ಹೇಳಿದೆ.ಪೀಪಲ್ಸ್ ಪಲ್ಸ್ ಮತ್ತು ಕೊಡ್ಮೋ ತಮ್ಮ ನಿರ್ಗಮನ ಸಮೀಕ್ಷೆಗಳಲ್ಲಿ ಬಿಜೆಪಿ 51-60 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಆಮ್ ಆದ್ಮಿ ಪಕ್ಷವು ಭಾರಿ ಸೋಲನ್ನು ಎದುರಿಸಬೇಕಾಗುತ್ತದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಬಹುದು. ಆದರೆ ಕಾಂಗ್ರೆಸ್ ಒಂದೇ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಯ ಡಿಸಿಸಿ ಬ್ಯಾಂಕ್ ಎದುರಿನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಮೂರ್ತಿ ಅನಾವರಣ ಹಾಗೂ ಕೃಷ್ಣಾ ತೀರದ ಅಂಬಿಗರ ಸಮಾವೇಶವನ್ನು ಫೆ.೯ ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಸಮಾಜದ ಎಲ್ಲ ಬಂಧುಗಳು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ನಿವೃತ್ತ ಪಿಎಸ್‌ಐ ಎಲ್.ಸಿ.ಕೋಲಕಾರ ವಿನಂತಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ ವೃತ್ತದಲ್ಲಿ ಮೂರ್ತಿ ಅನಾವರಣ ನೆರವೇರಲಿದೆ. ಬಳಿಕ ಬೆ೧೧ ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾವೇಶ ನಡೆಯಲಿದೆ. ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಹಾವೇರಿಯ ನರಸೀಪುರದ ಶಾಂತಭೀಷ್ಮಚೌಡಯ್ಯ ಸ್ವಾಮಿಗಳು, ಸಿಂದಗಿಯ ಶಾಂತಗಂಗಾಧರ ಸ್ವಾಮಿಗಳು, ಶಹಬಾದ ನ ಮಲ್ಲಪ್ಪಣ್ಣ ಮಹಾಸ್ವಾಮಿಗಳು, ಶಿರೂರಿನ ಡಾ|| ಬಸವಲಿಂಗ ಸ್ವಾಮಿಜಿಗಳು ಮತ್ತು ಪಟ್ಟಣದ ಶೋಭಾ ತಾಯಿಯವರು ವಹಿಸಲಿದ್ದು ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ರವಿಕುಮಾರ ಎನ್, ಡಾ.ಸಾಬಣ್ಣ ತಳವಾರ, ಮಾಜಿ ಸಚಿವ ಪ್ರಮೋದ್ ಮಧ್ವರಾಜ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ನ ಶಿವಕುಮಾರ ನಾಟೇಕಾರ ಆಗಮಿಸಲಿದ್ದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಾ ೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಸಾಹಿತಿ, ನಾಟಕಕಾರ ಅಶೋಕ ಮಣಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಸಾಹಿತ್ಯ ಕೃಷಿ, ಸಾಹಿತ್ಯ ಸೇವೆ, ಸಂಘಟನೆ ಹಿರಿತನ ಇವುಗಳ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮತ್ತು ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬೈಕ್ ಮತ್ತು ಕ್ಯಾಂಟರ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಶರಣಗೌಡ ಪಾಟೀಲ (೩೭) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಮೃತನು ಆಲಮೇಲ ತಾಲೂಕಿನ ಅಲ್ಲೋಳ್ಳಿ ಗ್ರಾಮದ ಶರಣಗೌಡ ಪಾಟೀಲ ಎಂದು ತಿಳಿದು ಬಂದಿದೆ. ಈತ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದರು. ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ವಿಜಯಪುರ ರಸ್ತೆಯ ಕಡೆಯಿಂದ ಬಂದ ಕ್ಯಾಂಟರ್ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪಿಎಸ್‌ಐ ಆರಿಫ್ ಮುಷಾಪುರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಲ್ಲಕ್ಕಿಂತ ದೊಡ್ಡ ಸಂಪತ್ತು ಭಕ್ತಿಯಲ್ಲಿದೆ. ಭಕ್ತಿ ಎಂಬುವುದು ಪರಮ ಪವಿತ್ರವಾದ ಪ್ರೇಮವಾಗಿದೆ. ಕಾರಣ ಎಲ್ಲರೂ ಗುರುವಿನಲ್ಲಿ ಶ್ರದ್ಧಾ ಭಕ್ತಿ ಇಟ್ಟರೆ ಜೀವನ ಪ್ರಾಪ್ತಿಯಾಗುತ್ತದೆ ಎಂದು ದಾರವಾಡ ಬಸವಾನಂದ ಸ್ವಾಮಿಗಳು ಹೇಳಿದರು.ತಾಲೂಕಿನ ಆಸಂಗಿಹಾಳ ಗ್ರಾಮದ ಆರೂಢಮಠದಲ್ಲಿ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಮಹಾಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಮಹಾ ಪುರಾಣದಲ್ಲಿ ಮಾತನಾಡಿದ ಅವರು, ಶ್ರೀಮಠವು ಬಡವರ ಮಠವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಆದ್ಯಾತ್ಮಿಕ ಜ್ಞಾನವನ್ನು ಉಣಬಡುಸುವ ನಿಟ್ಟಿನಲ್ಲಿ ಇಂತಹ ಸಂತ ಮಹಾಂತರ ಶರಣೆಯರ ಪುರಾಣ ಪ್ರವಚನ ಸಂತ್ಸಂಗಗಳನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.ಈ ವೇಳೆ ಆರೂಢಾಶ್ರಮ ಶ್ರೀ ಸಮರ್ಥ ಸದ್ಗುರು ಶಂಕರಾನಂದ ಮಹಾರಾಜರು ಮಾತನಾಡಿ, ಶುಕ್ರವಾರ ದಿನಾಂಕ ೭-೦೨-೨೦೨೫ ರಂದು ಬೆಳಗ್ಗೆ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಶ್ರೀ ವೇ ಸಂಗಯ್ಯ ಹಿರೇಮಠ, ಆಸಂಗಿಹಾಳ ಇವರಿಂದ ಜರುಗುವುದು. ನಂತರ…
ಮೂಲಸೌಕರ್ಯಗಳ ಕೊರತೆ | ರಸ್ತೆಗಳಲ್ಲಿ ಚರಂಡಿ ನೀರು | ಎಲ್ಲೆಡೆ ವ್ಯಾಪಿಸಿದ ದುರ್ವಾಸನೆ | ಸೊಳ್ಳೆಗಳ ಹಾವಳಿ | ಸಾಂಕ್ರಾಮಿಕ ರೋಗದ ಭೀತಿ ಉದಯರಶ್ಮಿ ದಿನಪತ್ರಿಕೆ ವರದಿ: ಮಹಾಂತೇಶ ನೂಲಾನವರಸಿಂದಗಿ: ಓಟಿಗಾಗಿ ಬರುವ ಜನಪ್ರತಿನಿಧಿಗಳು ಮೂಲಭೂತ ಸೌಕರ್ಯ ಒದಗಿಸಲು ಬಾರದೆ ಇರುವುದು ಖೇದಕರ ಸಂಗತಿ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಯಂಕಂಚಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕನಿಷ್ಠ ಸೌಕರ್ಯಗಳ ನಡುವೆಯೇ ನಿವಾಸಿಗಳು ಬದುಕುವಂತಾಗಿದೆ.ಚರಂಡಿ ನೀರು ರಸ್ತೆಯ ಮೇಲೆ ನಿಂತು ದೊಡ್ಡ ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಅಲ್ಲಲ್ಲಿ ನಿರ್ಮಾಣಗೊಂಡ ಹೊಂಡಗಳಲ್ಲಿ ಕೊಳಚೆ ನೀರು ತುಂಬಿ ಚರಂಡಿಯಾಗಿ ಪರಿಣಮಿಸಿದೆ. ಇಲ್ಲಿ ವಾಸಿಸುವ ನಿವಾಸಿಗಳ ಮತ್ತು ವಾಹನ ಸವಾರರ ಸಂಚಾರಕ್ಕೆ ಅಡ್ಡಿ ಉಂಟಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯಿಲ್ಲದೆ ಚರಂಡಿ ಗಬ್ಬೆದ್ದು ನಾರುತ್ತಿವೆ. ಗ್ರಾಮದ ಹಲವು ಭಾಗದಲ್ಲಿ ಸಿಸಿ ರಸ್ತೆಗಳಿಲ್ಲ. ಚರಂಡಿ ಇಲ್ಲದ ಕಾರಣ ಗ್ರಾಮದ ಕಲುಷಿತ ನೀರು ರಸ್ತೆಯ ಮೇಲೆ ಹರಿದು ಕಸ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು, ನಾರುತ್ತಿದೆ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ ೨೦೨೩-೨೪ರ ಡಿಸೆಂಬರ್ ನಲ್ಲಿ ಜರುಗಿದ ಬಿಎಡ್ ಕೋರ್ಸ್ನ ದ್ವಿತೀಯ ಹಾಗೂ ಚತುರ್ಥ (ರೆಗ್ಯೂಲರ್ ಮತ್ತು ಪುನರಾವರ್ತಿತ)ರ ಫೆ.೦೪ರಂದು ಫಲಿತಾಂಶ ಪ್ರಕಟಿಸಲಾಗಿದೆ. uucms.karnataka.gov.inವೆಬ್‌ಸೈಟ್ UUCMS student login>Exam>Exam Application>View Result>Viewನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ಎಂ.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ವಿಧಾನ ಸಭೆ ಸಚಿವಾಲಯದಿಂದ ಪ್ರಥಮ ಬಾರಿಗೆ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನ ಸಭಾ ಸಚಿವಾಲಯದ ವತಿಯಿಂದ ಫೆಬ್ರವರಿ ೨೭ ರಿಂದ ಮಾರ್ಚ್ ೩ ರ ವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ವನ್ನು ಹಮ್ಮಿಕೊಳ್ಳಲಾಗಿದೆ.ಈ ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಾಡಿನ ಪ್ರಕಾಶಕರು / ಮಾರಾಟಗರಾರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು, ಇವರಿಂದ ಅಥವಾ ವಿಧಾನ ಸಭೆ ಸಚಿವಾಲಯದ ವೆಬ್ ಸೈಟ್ www.kla.kar.nic.inನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.ಮೇಳದಲ್ಲಿ ಭಾಗವಹಿಸುವ ಪ್ರಕಾಶಕರು/ಮಾರಾಟಗಾರರು ಮಳಿಗೆಯೊಂದಕ್ಕೆ ರೂ.೧,೦೦೦/-ಗಳ ಭದ್ರತಾ ಠೇವಣಿ ಡಿ.ಡಿ ಯನ್ನು ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸುವುದು.ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ೨೦೨೫ ನೇ ಫೆಬ್ರವರಿ ೧೨ ರಂದು ಸಂಜೆ ೫.೦೦ ಗಂಟೆಯೊಳಗೆ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು…
