ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಯ ಡಿಸಿಸಿ ಬ್ಯಾಂಕ್ ಎದುರಿನ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಮೂರ್ತಿ ಅನಾವರಣ ಹಾಗೂ ಕೃಷ್ಣಾ ತೀರದ ಅಂಬಿಗರ ಸಮಾವೇಶವನ್ನು ಫೆ.೯ ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಸಮಾಜದ ಎಲ್ಲ ಬಂಧುಗಳು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ನಿವೃತ್ತ ಪಿಎಸ್‌ಐ ಎಲ್.ಸಿ.ಕೋಲಕಾರ ವಿನಂತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ ವೃತ್ತದಲ್ಲಿ ಮೂರ್ತಿ ಅನಾವರಣ ನೆರವೇರಲಿದೆ. ಬಳಿಕ ಬೆ೧೧ ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾವೇಶ ನಡೆಯಲಿದೆ. ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಹಾವೇರಿಯ ನರಸೀಪುರದ ಶಾಂತಭೀಷ್ಮಚೌಡಯ್ಯ ಸ್ವಾಮಿಗಳು, ಸಿಂದಗಿಯ ಶಾಂತಗಂಗಾಧರ ಸ್ವಾಮಿಗಳು, ಶಹಬಾದ ನ ಮಲ್ಲಪ್ಪಣ್ಣ ಮಹಾಸ್ವಾಮಿಗಳು, ಶಿರೂರಿನ ಡಾ|| ಬಸವಲಿಂಗ ಸ್ವಾಮಿಜಿಗಳು ಮತ್ತು ಪಟ್ಟಣದ ಶೋಭಾ ತಾಯಿಯವರು ವಹಿಸಲಿದ್ದು ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ರವಿಕುಮಾರ ಎನ್, ಡಾ.ಸಾಬಣ್ಣ ತಳವಾರ, ಮಾಜಿ ಸಚಿವ ಪ್ರಮೋದ್ ಮಧ್ವರಾಜ, ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ನ ಶಿವಕುಮಾರ ನಾಟೇಕಾರ ಆಗಮಿಸಲಿದ್ದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಸೇರಿದಂತೆ ಅನೇಕ ಮಹನೀಯರು ಭಾಗಿಯಾಗಲಿದ್ದಾರೆ. ಜಿಲ್ಲೆಯಾಧ್ಯಂತ ಸಮಾಜದ ಎಲ್ಲ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸಮಾಜದ ಪ್ರಮುಖರಾದ ವೆಂಕಟೇಶ ಅಂಬಿಗೇರ, ಸಂಗಪ್ಪ ಪ್ಯಾಟಿ, ಅಯ್ಯಪ್ಪ ತಂಗಡಗಿ, ಸಾಗರ ಉಕ್ಕಲಿ ಮತ್ತೀತರರು ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಸಂದೀಪ ಬಿದರಕೋಟಿ, ಪ್ರಮುಖರಾದ ಶಿವಪ್ಪ ಚಿಮ್ಮಲಗಿ, ಹಣಮಂತ ಕೋಲಕಾರ, ಹಣಮಂತ ಅಂಬಿಗೇರ, ನಿಂಗಣ್ಣ ಕಟ್ಟಿಮನಿ, ನಾಗೇಶ ಕೇಸಾಪೂರ, ಚಂದ್ರಶೇಖರ ಅಂಬಿಗೇರ, ಭೀಮಣ್ಣ ಹಿರೇ ಅಂಬಿಗೇರ, ಆನಂದ ಗುರಿಕಾರ ಸೇರಿದಂತೆ ಮತ್ತೀತರರು ಇದ್ದರು.

