ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ನಗರದ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ, ೪ನೇ ವರ್ಷದ ಜೀರ್ಣೋದ್ದಾರ ಜಾತ್ರಾ ಮಹೋತ್ಸವ ಭಾರತ ಹುಣ್ಣಿಮೆ
ಮಂಗಳವಾರ ಫೆ. ೧೧ ರಂದು ಮುಂ. ೬-೩೦ ಗಂಟೆಗೆ ಜರುಗಲಿದೆ.
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸಲಿಂಗ ಸ್ವಾಮಿಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಸಂಜೆ ೬-೩೦ ಗಂಟೆಗೆ ಸ್ವಯಂಬೋ ಆಟ್ಸ್ ಫೌಂಡೇಶನ್ ದಿವ್ಯಾ ಭಿಸೆ ಮತ್ತು ದೀಕ್ಷಾ ಭಿಸೆ ಇವರಿಂದ ಭರತ ನಾಟ್ಯ ನಂತರ ಮಹಾಪ್ರಸಾದ ಇರುತ್ತದೆ. ಬುಧವಾರ ಫೆ.೧೨ ರಂದು ಸುರ್ಯೋದಯದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಗೆ ಮಹಾರುದ್ರಾಭಿಷೇಕ ಉಮಾಮಹೇಶ್ವ ಪೂಜೆ ಹೋಮ ಹವನ ನೆರವೇರುವುದು. ೧೦-೩೦ ರಿಂದ ೨-೦೦ ಗಂಟೆವರೆಗೆ ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಇವರು ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಮಹಾಪ್ರಸಾದ ಇರುತ್ತದೆ.
ದಿವ್ಯಸಾನಿಧ್ಯವನ್ನು ಷ.ಬ್ರ.ಸೋಮನಾಥ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಶಾಖಾಮಠ ಸಿಂಧನೂರ ಗುರುಮಠ ಕನ್ನೂರ, ಡಾ. ಮಹಾದೇವ ಶಿವಾಚಾರ್ಯರು, ಬಬಲೇಶ್ವರ ಇವರು ವಹಿಸುವರು.
ಸಂಜೆ ೬-೩೦ ಗಂಟೆಗೆ ದೀಪೋತ್ಸವ ಉದ್ಘಾಟನೆ ನೆರವೇರುವುದು. ಸಂಜೆ ೭ ಗಂಟೆಗೆ ಹಾಸ್ಯ ಕಲಾವಿದರು ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ ಹಾಗೂ ನರಸಿಂಹ ಜೋಶಿ ಸಂಗಡಿಗರಿಂದ ನಗೆಹಬ್ಬ ಕಾರ್ಯಕ್ರಮ ಇರುತ್ತದೆ.
ಅಂಜಿಖಾನೆ ಬಂಧುಗಳು ಹಾಗೂ ಶ್ರೀ ರಾಮಕೃಷ್ಣ ನಗರದ ಪದಾಧಿಕಾರಿಗಳು ಇವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಜರುಗುವುದು. ಬಡಾವಣೆಯ ಸದ್ಭಕ್ತರು ಪಾಲ್ಗೊಂಡು ದೇವಿಯ ಆಶಿರ್ವಾದ ಪಡೆಯಲು ರಮೇಶ ಅಂಜಿಖಾನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![1000966196](https://udayarashminews.com/wp-content/uploads/2025/02/1000966196.jpg)