ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ೨೦೦೫ರಲ್ಲಿ ಜಾರಿಗೆ ಬಂದಿತು. ಹಾಗೂ ಇದು ಒಂದು ಯೋಜನೆಯಾಗದೆ ಕಾಯ್ದೆಯಾಗಿದೆ ಎಂದು ತಾಪಂ ಇಒ ರಾಮು ಅಗ್ನಿ ತಿಳಿಸಿದರು.
ತಾಲೂಕಿನ ಗುಬ್ಬೇವಾಡ ಗ್ರಾಪಂ ವ್ಯಾಪ್ತಿಯ ಬೋರಗಿ ಗ್ರಾಮದ ಚೌಡೇಶ್ವರಿ ದೇವಸ್ಥಾನಲ್ಲಿ ಹಮ್ಮಿಕೊಂಡ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಅಂದಿನಿಂದ ಇಂದಿನವರೆಗೂ ಜಾರಿಯಾಗಿ ೨೦ವರ್ಷ ಕಳೆಯಿತು. ಯೋಜನೆಯ ಉದ್ದೇಶವೆನೆಂದರೆ ಗ್ರಾಮೀಣ ಭಾಗದ ಜನರಿಗೆ ಮತ್ತು ಹಿಂದುಳಿದ ಎಲ್ಲ ಸಮುದಾಯದ ಕಟ್ಟಕಡೆಯ ಕೂಲಿ ಕಾರ್ಮಿಕರ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ ೧೦೦ದಿನಗಳ ಕಾಲ ಕೆಲಸ ಒದಗಿಸುಚದಾಗಿದೆ. ಇದು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವುದಾಗಿದೆ. ಈ ಯೋಜನೆಯಲ್ಲಿ ವ್ಯಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ರೇಷ್ಮೆ ಬೆಳೆ, ಅರಣ್ಯ ಇಲಾಖೆಯಿಂದ ಸಹಾಯಧನ ಪಡೆಯಬಹುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳಿಕ ನರೇಗಾದಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ೧೦೦ದಿನ ಪೂರೈಸಿದ ೧೦ ಜನರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ನಿತ್ಯಾನಂದ ಕಟ್ಟಿಮನಿ, ಸದಸ್ಯರಾದ ಬಸವರಾಜ ಚಾವರ, ಪರಸು ಕೋಟಾರಗಸ್ತಿ, ಕಾರ್ಯದರ್ಶಿ ಈರಣ್ಣ ಮಾಗಣಗೇರಿ, ತಾಲೂಕು ಐಇಸಿ ಸಂಯೋಜಕ ಭೀಮರಾಯ ಚೌಧರಿ, ಗ್ರಾಮ ಕಾಯಕಮಿತ್ರ ಲಕ್ಷ್ಮೀ ಮಾದರ, ನರೇಗಾ ಕೂಲಿಕರ ಕಾಯಕ ಬಂಧು ಶಾಂಭವಿ ಕೊಟರಗಸ್ತಿ, ಸಿದ್ದು ಮಾದರ ಸೇರಿದಂತೆ ಸಿಬ್ಬಂದಿಗಳು, ಸಾರ್ವಜನಿಕರು ಮತ್ತು ನರೇಗಾ ಕೂಲಿ ಕಾರ್ಮಿಕರು ಇದ್ದರು.