Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಅಥಣಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುಜಿಸಿ ಅರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು, ಯುಜಿಸಿ ನಿಯಮದಂತೆ ಗೌರವಧನ ನೀಡುವಂತೆ ಆಗ್ರಹಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಲಾಸ ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ತಾವು ಕಡಿಮೆ ಗೌರವಧನದಲ್ಲಿಯೇ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇವೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಬೋಧನಾ ಅವಧಿಗೆ ರೂ.1,500 ರಂತೆ ಮಾಸಿಕ ಗರಿಷ್ಠ ರೂ.50,000 ಗೌರವಧನ ನೀಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆಗಳಿವೆ ಆದ್ದರಿಂದ ಕರ್ನಾಟಕದಲ್ಲಿರುವ ಯುಜಿಸಿ ಅರ್ಹತೆ ಹೊಂದಿದ ಅತಿಥಿ ಉಪನ್ಯಾಸಕರಿಗೂ ಈ ನಿಯಮದನ್ವಯ ಗೌರವಧನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಅಲ್ಲದೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ತಕ್ಷಣದಿಂದಲೇ ಯುಜಿಸಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಆಲಮೇಲದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದ್ದು, ಈ ಪ್ರದೇಶ ನಿಜಕ್ಕೂ ಮತೀಯ ಸಾಮರಸ್ಯ, ಕೋಮು ಸೌಹಾರ್ದತೆಯ ಪ್ರತೀಕ ವಾಗಿದೆ ಎಂದು ನಿರ್ಗಮಿತ ಪಿಎಸ್ಐ ಅರವಿಂದ ಅಂಗಡಿ ಅಭಿಪ್ರಾಯ ಪಟ್ಟರು.ಪಟ್ಟಣದ ಐ ಜೆ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಜರುಗಿದ ವರ್ಗಾವಣೆಗೊಂಡ ಪಿಎಸ್ಐ ಮತ್ತು ಸಿಬ್ಬಂದಿಗಳ ಬಿಳ್ಕೊಡುವ ಮತ್ತು ನೂತನ ಪಿಎಸ್ಐ ರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಆಲಮೇಲ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕಗೌಡ ಎಂ ಕೋಳಾರಿ ಅವರು ನಿರ್ಗಮಿತ ಪಿಎಸ್ಐ ಅರವಿಂದ್ ಅಂಗಡಿ ಅವರಿಗೆ ‘ಆದರ್ಶ ಸೇವಾ ಪುರಸ್ಕಾರ’ ಪ್ರದಾನ ಮಾಡಿ ಶುಭಕೋರಿದರು. ವೈದ್ಯ ಸಾಹಿತಿ ಡಾ ಸಮೀರ್ ಹಾದಿಮನಿ ಮಾತನಾಡಿ, ದಕ್ಷ ಪೊಲೀಸ್ ಅಧಿಕಾರಿಗೆ ನಿಷ್ಠೆ, ನಿರ್ಭೀತತೆ ಮತ್ತು ನ್ಯಾಯಪರತೆಗಳೇ ಆಭರಣವಾಗಿದ್ದು, ಪಿಎಸ್ಐ ಅರವಿಂದ್ ಅಂಗಡಿಯವರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಆಲಮೇಲ ಭಾಗದಲ್ಲಿ ಜರುಗುವ ವಿವಿಧ ಧರ್ಮ ಜಾತಿ ಸಮುದಾಯಗಳ, ಹಬ್ಬ…
ಬನ್ನಿ ಬಸವಣ್ಣನವರು ಕಟ್ಟಿದ ಕಲ್ಯಾಣವನ್ನು ಮತ್ತೆ ಸ್ಥಾಪಿಸೋಣ, ಕಾವಿ – ಖಾದಿ ಹೊರತು ಪಡಿಸಿ..- ಡಾ.ಶಶಿಕಾಂತ ಪಟ್ಟಣ ಲೇಖನ- ಡಾ.ಶಶಿಕಾಂತ ಪಟ್ಟಣ.ಅಧ್ಯಕ್ಷರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ – ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ ಎಂಬ ಹೊಸ ಧರ್ಮದ ವೈಚಾರಿಕ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು.ಅಷ್ಟಾವರಣಗಳು -ತತ್ವಕ್ಕೆ ಸೀಮಿತವಾದ ಸಂಕೇತಗಳು.ಗುರು ಲಿಂಗ ಜಂಗಮ ರುದ್ರಾಕ್ಷಿ ವಿಭೂತಿ ಮಂತ್ರ ಪಾದೋದಕ ಪ್ರಸಾದ ಎಂಬ ಎಂಟು ಅವತರಣಿಕೆಗಳು ಭೌತಿಕ ವಸ್ತುಗಳಲ್ಲ. ಪಂಚ ಮಹಾಭೂತಗಳ ಒಂದೊಂದು ತತ್ವ ಮಾತ್ರ .ಇದನ್ನು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ “ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ). ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಕನಸು ಕಾಣುವ ಧೈರ್ಯ ಮಾಡಿ ಅದನ್ನು ನನಸಾಗಿಸುವ ಛಲವಿರಲಿ.’ ಎಂಬುದು ಧೀರೂಭಾಯಿ ಅಂಬಾನಿಯವರ ಮಂತ್ರವಾಗಿತ್ತು. ಅವರು ಗುಜರಾತಿನ ಒಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕರ ಮಗನಾಗಿ ಜನಿಸಿದರು. ಅವರ ಆರಂಭಿಕ ಜೀವನ ಬಹಳ ಸಂಕಷ್ಟದಿಂದ ಕೂಡಿತ್ತು. ಅವರು ತಮ್ಮ ವೃತ್ತಿಜೀವನವನ್ನು ಯಾತ್ರಿಕರಿಗೆ ಪಕೋಡಾ ಮಾರುವುದರ ಮೂಲಕ ಆರಂಭಿಸಿದರು. ನಂತರ ಯೆಮೆನ್ ದೇಶಕ್ಕೆ ತೆರಳಿ ಕೇವಲ ೩೦೦ ರೂಪಾಯಿ ಸಂಬಳಕ್ಕೆ ಪೆಟ್ರೊಲ್ ಬಂಕಿನಲ್ಲಿ ಕೆಲಸ ಮಾಡಿದರು. ನಂತರ ಭಾರತಕ್ಕೆ ಮರಳಿ ಕೇವಲ ೫೦,೦೦೦ ರೂಪಾಯಿ ಬಂಡವಾಳದೊಂದಿಗೆ ಸಣ್ಣ ವ್ಯಾಪಾರ ಆರಂಭಿಸಿದರು. ಮುಂದೆ ಅವರಿಂದ ಸ್ಥಾಪಿತವಾದ ರಿಲಯನ್ಸ್ ಇಂಡಸ್ಟ್ರೀಸ್ ಇಂದು ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಧೀರೂಭಾಯಿ ಅಂಬಾನಿಯವರು ಗೆಲುವಿನ ದೊಡ್ಡ ಸಾಮ್ರಾಜ್ಯ ಕಟ್ಟಿದ್ದು ಸಣ್ಣ ಆರಂಭದಿಂದಲೇ! ಸಣ್ಣ ಆರಂಭದಿಂದ ದೊಡ್ಡ ಮಟ್ಟದ ಯಶಸ್ಸು ಕಂಡವರ ಕಥೆಗಳು ನಮಗೆ ಸದಾ ಸ್ಪೂರ್ತಿ ನೀಡುತ್ತವೆ. ನಾವೂ ಅವರ ಸಾಲಿನಲ್ಲಿ ಒಬ್ಬರಾಗಬೇಕೆಂದರೆ ಏನನ್ನು ಮಾಡಬೇಕು ಏನನ್ನು ತಿಳಿದುಕೊಳ್ಳಬೇಕು ಎಂಬುದನ್ನು…
ಹುಣಶ್ಯಾಳದಲ್ಲಿ ವಿಬಿಜಿರಾಮ್-ಜೀ ಯೋಜನೆಯಡಿಯ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೂಲಿಕಾರರ ಹಿತರಕ್ಷಣೆಯ ದೃಷ್ಟಿಯಿಂದ ಅವರು ದುಡಿದ ಹಣ ನೇರವಾಗಿ ತಲುಪಲಿ ಎಂದು ಪಾರದರ್ಶಕ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ರೂಪಿಸಿದ್ದಾರೆ, ಎಷ್ಟೇ ವಿರೋಧ ವ್ಯಕ್ತವಾದರೂ ಬಡವರ ಹಿತಕ್ಕೆ ಪ್ರಾಮುಖ್ಯತೆ ನೀಡಿ ವಿಬಿಜಿರಾಮ್-ಜೀ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದಲ್ಲಿ ವಿಬಿಜಿರಾಮ್-ಜೀ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಜಿಗಜಿಣಗಿ, ಈ ಮುಂದೆ ನೀವು ದುಡಿದ ಹಣ ನೇರವಾಗಿ ದೊರಕುತ್ತಿರಲಿಲ್ಲ, ಹೀಗಾಗಿಯೇ ಪ್ರಧಾನಿ ಮೋದಿ ಅವರು ಈ ಹಿಂದಿನ ಯೋಜನೆಯನ್ನು ಮಾರ್ಪಾಡು ಮಾಡಿ ನೇರವಾಗಿ ನಿಮಗೆ ಹಣ ದೊರಕಿಸುವಂತೆ ಮಾಡುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ, ಕಾರ್ಮಿಕರಿಗೆ ನೇರವಾಗಿ ಹಣ ವರ್ಗಾವಣೆ ಬೇಡ ಎಂದು ಅನೇಕ ಶಕ್ತಿಗಳು ವಿರೋಧ ವ್ಯಕ್ತಪಡಿಸಿದವು,…
ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಮಳಿಗೆ ಹಂಚಿಕೆ ಮಾಡುವಂತೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ದಲಿತ ಸಮುದಾಯದ ಚರ್ಮಕಾಯಕ ವೃತ್ತಿದಾರರಿಗೆ ಶಾಶ್ವತವಾಗಿ ವ್ಯಾಪಾರ ನಡೆಸಲು ಮಳಿಗೆಗಳನ್ನು ಒದಗಿಸುವಂತೆ ಒತ್ತಾಯಿಸಿ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ವಿಜಯಪುರ ನಗರ ಶಾಸಕರಿಗೆ ಮನವಿ ಸಲ್ಲಿಸಲಾಯಿತು.ವಿಜಯಪುರ ನಗರದಲ್ಲಿ ಚರ್ಮಕಾಯಕ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ 9 ಅರ್ಹ ಕುಟುಂಬಗಳಿಗೆ ಶಾಶ್ವತ ಮಳಿಗೆ ಒದಗಿಸುವ ವಿಚಾರ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಸ್ವಂತ ಮಳಿಗೆಗಳಿಲ್ಲದೆ ಈ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಸಮೀಪ ಮಳಿಗೆಗಳನ್ನು ನೀಡುವುದಾಗಿ ತಿಳಿಸಿ ಫಲಾನುಭವಿಗಳಿಂದ ಹಣ ಪಾವತಿಸಿಕೊಳ್ಳಲಾಗಿತ್ತು. ಆದರೆ ಹಲವು ವರ್ಷಗಳು ಕಳೆದರೂ ಶಾಶ್ವತ ಮಳಿಗೆಗಳು ದೊರೆಯದೆ ಸಮಸ್ಯೆ ಮುಂದುವರಿದಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಭಾರತೀಯ ಕನ್ನಡಿಗರಾಗಿ ಭಾವೈಕ್ಯತೆಯ ಭಾವದಿಂದ ಸಾಧು ಸಂತ ಶರಣರ ಫಕೀರಾಧಿಯಾಗಿ ಎಲ್ಲ ಧರ್ಮಗಳ ಪ್ರೀತಿಸುವುದರ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸುವ ಸೇವಕರಾಗೋಣ ಎಂದು ಶಹಪೂರದ ಚರಬಸವೇಶ್ವರ ಸಂಸ್ಥಾನದ ಡಾ.ಶರಣು. ಬಿ ಗದ್ದುಗೆ ಹೇಳಿದರು.ಪಟ್ಟಣದ ಆರಾಧ್ಯ ದೈವ ಹಜರತ್ ಜಚ್ಚಾ ಮಾಸಾಬಿಯ 529 ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡ ಸರ್ವ ಧರ್ಮ ಸಮ್ಮೇಳನ ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಗರನಾಡಿಗೆ ಒಳ್ಳೆಯ ಕಲ್ಪನೆ ಇದೆ. ಸಮ ಸಮಾಜಕ್ಕಾಗಿ ಬಸವ ಪೂರ್ವ ಯುಗದಲ್ಲಿ ಹೋರಾಟದ ಕಿಚ್ಚು ಹಚ್ವಿದ ಭೋಗಣ್ಣನ, ಭಾವೈಕ್ಯತೆ ಕೇಂದ್ರಬಿಂದು ಮಹಾ ಸತಿ ಮಾಸಾಬಿ ನೆಲೆಸಿದ ಪುಣ್ಯ ಭೂಮಿ ಕೆಂಭಾವಿ ಕನ್ನಡ ನಾಡಿಗೆ ಭಾವೈಕ್ಯತೆ ಸಂದೇಶ ಕೊಡುತ್ತಿದೆ, ಕೆಲವು ಸಂದರ್ಭಗಳಲ್ಲಿ ದುಷ್ಟ ಶಕ್ತಿಗಳಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಆದರೆ ಸಹ ಬಾಳ್ವೆಯ ಬೀಜ ಬಿತ್ತಲು ಇಂತ ಸಮಾರಂಭಗಳು ನಡೆಯಬೇಕು. ಅನ್ಯ…
ಉದಯರಶ್ಮಿ ದಿನಪತ್ರಿಕೆ ಅಥಣಿ: ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಅತ್ಯಂತ ಮಹತ್ವದ ಸ್ಥಾನವಿದೆ ಕ್ರೀಡೆಯು ಕೇವಲ ಮನರಂಜನೆಯಲ್ಲ ಅದು ದೈಹಿಕ ಸದೃಢತೆ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಹೇಳಿದರುಅವರು ತಾಲೂಕಿನ ಸಪ್ತಸಾಗರದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಜಿಲ್ಲಾ ಪಂಚಾಯತ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಅಥಣಿ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ದರೂರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ದರೂರ ಕ್ಲಸ್ಟರ್ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆಯಾಗುತ್ತವೆ ಹೀಗೆ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಮಕ್ಕಳು ಬೆಳೆಯುವದರ ಜೊತೆಗೆ ಸದೃಢರಾಗುತ್ತಾರೆ ಜೊತೆಗೆ ಇಂತಹ ಶಿಕ್ಷಣ ಸಂಸ್ಥೆಗಳು ಕೂಡ ಬೆಳೆಯುತ್ತವೆ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಯಶಸ್ಸು ಗಳಿಸಬೇಕು ಎಂದು ಕರೆ…
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳ ಅನುಷ್ಠಾನದಿಂದ ಪ್ರೇರಿತರಾಗಿ, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಬಿಜೆಪಿಯ 50ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಮಂಗಳವಾರ ಮುಖಂಡ ಸುನೀಲ ಡೇಂಬ್ರಿ ಅವರ ನೇತೃತ್ವದಲ್ಲಿ ಈ ವೇಳೆ ಗುರಪ್ಪ ರಂಗಪ್ಪಗೋಳ, ಕೂಸಪ್ಪ ನರಲೆ, ವಿಠ್ಠಲ ತುಪನೂರ, ಸಾವಿತ್ರಿ ಡೇಂಬ್ರಿ, ಸುರೇಖಾ ಡೇಂಬ್ರಿ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹೊನವಾಡದಲ್ಲಿ ಗಮನಾರ್ಹ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಸುಮಾರು 15ರಿಂದ 20 ಸಾವಿರ ಎಕರೆ ಭೂಮಿ ನೀರಾವರಿಯಾಗಿದೆ. ಮುಂದಿನ ದಿನಗಳಲ್ಲೂ ಅಭಿವೃದ್ಧಿಯ ಕಾರ್ಯಗಳು ಮುಂದುವರೆಯಲಿದೆ. ಈ ಸೇರ್ಪಡೆಯೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ…
